ಮಾಲೆಗಾಂವ್ ಸ್ಫೋಟ : ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ರಿಲೀಫ್
ಮುಂಬೈ, ಮೇ 13: ಮಾಲೆಗಾಂವ್ ಸ್ಫೋಟದ ಆರೋಪಿಯಾಗಿದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಅವಧಿಗೆ ಮುನ್ನ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯೂ ಕಂಡು ಬಂದಿದೆ. ಸಾಧ್ವಿ ಪ್ರಜ್ಞ ವಿರುದ್ಧ ಯಾವುದೇ ಸಾಕ್ಷಿ, ಅಧಾರ ಸಿಕ್ಕಿಲ್ಲ ಎಂದು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳವು ಕೋರ್ಟಿಗೆ ವರದಿ ನೀಡಲು ಸಿದ್ಧವಾಗಿದೆ.
ಸಾಧ್ವಿ ಅವರ ವಿರುದ್ಧ ಹಾಕಿರುವ ಚಾರ್ಚ್ ಶೀಟ್ ಪೇಲವವಾಗಿದ್ದು, ಯಾವುದೇ ರೀತಿಯಲ್ಲೂ ಆಕೆ ವಿರುದ್ಧ ಸಾಕ್ಷಿ ಸಿಕ್ಕಿಲ್ಲ. 2008ರ ಮಾಲೆಗಾಂವ್ ಸ್ಫೋಟಕ್ಕೆ ಕಾರಣವಾದ ಮೋಟರ್ ಸೈಕಲ್ ಸಾಧ್ವಿಗೆ ಸೇರಿದ್ದು ಎಂಬ ಕಾರಣಕ್ಕೆ ಮಹಾರಾಷ್ಟ್ರ ಉಗ್ರ ನಿಗ್ರಹ ದಳ (ಎಟಿಎಸ್) ದವರು ಸಾಧ್ವಿಯನ್ನು ಬಂಧಿಸಿದ್ದರು.

ಆದರೆ, ಆ ಮೋಟರ್ ಸೈಕಲನ್ನು ಆಕೆ ಬಳಸಿಲ್ಲ ಎಂಬ ಸತ್ಯ ನಂತರ ಅರಿವಾಗಿದೆ. ಅಲ್ಲದೆ, ಸ್ಫೋಟದ ಸಂಚಿನಲ್ಲಿ ಆಕೆ ಭಾಗಿಯಾಗಿರುವ ಬಗ್ಗೆ ಕೂಡಾ ಯಾವುದೇ ಪುರಾವೆ ಎನ್ ಐಎ ತಂಡಕ್ಕೆ ಸಿಕ್ಕಿಲ್ಲ.
ಬಿಡುಗಡೆ ನಿರೀಕ್ಷೆ: ಈ ಪ್ರಕರಣದ ಆರೋಪಿಗಳಾಗಿ ಸಾಧ್ವಿ ಪ್ರಗ್ಯಾ ಸಿಂಗ್, ಪುಣೆಯ ಅಭಿನವ್ ಭರತ್, ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಮೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದರು.
ಆದರೆ, Maharashtra Control of Organised Crimes Act (ಮೋಕಾ) ಕಾಯ್ದೆ ಅಡಿಯಲ್ಲಿ ಸಾಧ್ವಿ ವಿರುದ್ಧ ಹಾಕಲಾದ ಆರೊಪಗಳೆಲ್ಲವೂ ತಿರಸ್ಕರಿಸಲ್ಪಟ್ಟಿದೆ. ತನಿಖೆ ಕೈಗೆತ್ತಿಕೊಂಡ ಎಟಿಎಸ್ ಆರಂಭದಲ್ಲೇ ಸಾಧ್ವಿಯೇ ಈ ಸ್ಫೋಟ ಹಿಂದಿನ ರೂವಾರಿ ಎಂದು ಹೇಳಿಕೆ ನೀಡಿತ್ತು. ನಂತರ ಎನ್ ಐಎ ತನಿಖೆ ನಡೆಸಿ, ಈ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದಿದೆ.
ಸ್ಫೋಟಕ್ಕೆ ಕಾರಣವಾದ ಮೋಟರ್ ಸೈಕಲ್ ಸಾಧ್ವಿ ಹೆಸರಿನಲ್ಲಿ ನೋಂದಣಿಯಾಗಿತ್ತು, ರಾಮಚಂದ್ರ ಕಲಸಂಘ್ರ ಅವರು ಘಟನೆಗೂ ಮುನ್ನ ಎರಡು ವರ್ಷಗಳಿಂದ ಈ ಬೈಕನ್ನು ಬಳಸುತ್ತಿದ್ದರು. ಹೀಗಾಗಿ ಸಾಧ್ವಿ ಅವರ ವಿರುದ್ಧ ಸಾಕ್ಷಿಗಳಿಲ್ಲ ಎಂದು ಕೋರ್ಟಿಗೆ ಎನ್ ಐಎ ತಿಳಿಸಲಿದೆ. ಇದರಿಂದಾಗಿ 8 ವರ್ಷಗಳ ನಂತರ ಜೈಲಿನಿಂದ ಸಾಧ್ವಿ ಹೊರಬರುವ ಸಾಧ್ಯತೆ ಹೆಚ್ಚಿದೆ (ಒನ್ಇಂಡಿಯಾ ಸುದ್ದಿ)
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications