ಕೇರಳ ನಟಿ ಮೈಥಿಲಿ ಖಾಸಗಿ ಚಿತ್ರಗಳು ಸೋರಿಕೆ

ತಿರುವನಂತಪುರಂ, ಜುಲೈ 24: ಕೇರಳ ಚಿತ್ರರಂಗದಲ್ಲಿ ಕಲಾವಿದೆಯರಿಗೆ ರಕ್ಷಣೆ ಇಲ್ಲ ಎಂಬ ಮಾತಿಗೆ ಬಲವಾಗಿ ಪುಷ್ಟಿ ನೀಡುವ ಸುದ್ದಿಯೊಂದು ಮಾಲಿವುಡ್ ಅಂಗಳದಿಂದ ತೂರಿ ಬಂದಿದೆ. ಜನಪ್ರಿಯ ನಟಿ ಮೈಥಿಲಿ ಅವರ ಖಾಸಗಿ ಚಿತ್ರಗಳನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡಲಾಗಿದೆ.

ಈ ಕುರಿತಂತೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ, ತನಿಖೆ ಬಳಿಕ, ಮೈಥಿಲಿ ಅವರಿಗೆ ತುಂಬಾ ಬೇಕಾಗಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

Malayalam actress Mythili private pictures leak

ಪ್ರೊಡೆಕ್ಷನ್ ವಿಭಾಗದಲ್ಲಿ ಕಾರ್ಯಕಾರಿ ಹುದ್ದೆಯಲ್ಲಿರುವ ಕಿರಣ್ ಕುಮಾರ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. 2008ರಿಂದ ಮೈಥಿಲಿ ಜತೆ ಗೆಳೆತನ ಹೊಂದಿರುವ ಈತನ ಉದ್ದೇಶ ಏನು ಎಂಬುದು ಸ್ಪಷ್ಟವಾಗಿಲ್ಲ. ಆತನಿಗೆ ಮದುವೆಯಾಗಿದೆ ಎಂಬ ಸತ್ಯ ತಿಳಿದ ನಂತರ ಅವನ ಗೆಳೆತನಕ್ಕೆ ಮೈಥಿಲಿ ಫುಲ್ ಸ್ಟಾಪ್ ಇಟ್ಟಿದ್ದರು.

Malayalam actress Mythili private pictures leak


ಮೈಥಿಲಿಯ ವೈಯಕ್ತಿಕ ಬದುಕಿನ ಚಿತ್ರಗಳನ್ನು ಸಂಪಾದಿಸಿದ್ದ ಕಿರಣ್, ಆಕೆಗೆ ಬೆದರಿಕೆ ಒಡ್ಡಿ, ಹಣಕ್ಕಾಗಿ ಬೇಡಿಕೆ ಇಟ್ಟಿರುವ ಸಾಧ್ಯತೆಯಿದೆಯೂ ಇದೆ ಎಂದು ಎರ್ನಾಕುಲಂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ತನಿಖೆ ನಂತರ ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಚಿತ್ರಗಳನ್ನು ಹಂಚಲು ಕೆಲವರನ್ನು ಬಳಸಿಕೊಂಡಿದ್ದ. ಈ ರೀತಿ ಚಿತ್ರಗಳನ್ನು ಹಂಚುವವರನ್ನು ಕೂಡಲೇ ಬಂಧಿಸಲಾಗುವುದು ಎಂದು ಎರ್ನಾಕುಲಂ ಎಸಿಪಿ ಕೆ ಲಾಲ್ಜಿ ಹೇಳಿದ್ದಾರೆ.

ಕಿರಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 354, ಐಟಿ ಕಾಯ್ದೆ 66 (ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+