ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರಕ್ಕೆ ನಾಯಿ ಮತ್ತು ಹಂದಿ ಎಣ್ಣೆ ಕಲಬೆರಕೆ ಮಾಡುವ ಗ್ಯಾಂಗ್ ಬಂಧನ

|
Google Oneindia Kannada News

ತೆಲಂಗಾಣ, ಮಾರ್ಚ್ 2: ದುಡ್ಡಿಗಾಗಿ ಎಂತಹ ಕೀಳು ಕೆಲಸ ಮಾಡುವುದಕ್ಕಾದರೂ ಇಳಿಯುವಂತಹ ಜನ ನಮ್ಮ ಮಧ್ಯೆಯೇ ಇದ್ದಾರೆ. ಇಂತಹದೊಂದು ಕೆಟ್ಟ ಮನಸ್ಸಿನ ಗುಂಪನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಹಂದಿ ಮತ್ತು ನಾಯಿ ಕೊಬ್ಬಿನಿಂದ ಎಣ್ಣೆ ಸಿದ್ಧ ಮಾಡಿ ಅದನ್ನು ಕಲಬೆರಕೆ ಮಾಡಿ ಹೋಟೆಲ್ ಗಳಿಗೆ ಮಾರುವಂತಹ ತಂಡವನ್ನು ರಂಗಾರೆಡ್ಡಿ ಜಿಲ್ಲೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಂಗಾರೆಡ್ಡಿ ಜಿಲ್ಲೆಯ ಕೊತ್ತೂರು ಮಂಡಲದ ತಿಮ್ಮಾಪುರಂ ಪಂಚಾಯಿತಿ ರೈಲ್ವೆ ಸ್ಟೇಷನ್ ಬಳಿ ಹರಿ ಫೀಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲವರು ನಾಯಿ ಕೊಬ್ಬಿನಿಂದ ಎಣ್ಣೆ ತಯಾರಿಸುವುದು ಕಂಡು ಬಂದಿದೆ. ಖಚಿತ ಮಾಹಿತಿ ಪಡೆದ ಪೊಲೀಸರು ಕಲಬೆರಕೆ ತಯಾರಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ತೆಲಂಗಾಣ ಪೊಲೀಸರ ''ನಾಗೀನ್ ಡ್ಯಾನ್'' ವಿಡಿಯೋ ವೈರಲ್ತೆಲಂಗಾಣ ಪೊಲೀಸರ ''ನಾಗೀನ್ ಡ್ಯಾನ್'' ವಿಡಿಯೋ ವೈರಲ್

making-oil-from-dog-and-pigs-gang-arrest

ನಾಯಿ ಮತ್ತು ಹಂದಿಯಿಂದ ತಯಾರು ಮಾಡಿದ ಎಣ್ಣೆಯನ್ನು ಒಳ್ಳೆಯ ಎಣ್ಣೆ ಜೊತೆ ಮಿಶ್ರಣ ಮಾಡಿ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಇಂತಹ ಆರೋಪ ಕೇಳಿಬಂದ ಮೇಲೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಸೇರಿ ತನಿಖೆ ನಡೆಸಿ ಅಕ್ರಮ ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. ಅಂದ್ಹಾಗೆ, ಈ ರೀತಿ ನಾಯಿ ಮತ್ತು ಹಂದಿ ಕೊಬ್ಬಿನಿಂದ ಎಣ್ಣೆ ತಯಾರಿಸಿ ಕಲಬೆರಕೆ ಮಾಡುವ ದಂಧೆ ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹೈದರಾಬಾದ್ ನಲ್ಲೂ ಇಂತಹದೊಂದು ಮಾಫಿಯಾ ವರದಿಯಾಗಿತ್ತು.

English summary
A gang of adulterers have been arrested for making oil from dog and pig in telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X