ಜಾತಿ ಕಾರಣಕ್ಕೆ ಪ್ರಿಯಕರನ ಹತ್ಯೆ, ಲವರ್ ಶವದ ಜೊತೆಗೇ ಮದುವೆ ಆದ ಯುವತಿ... Love Story
ಜಾತಿ & ಧರ್ಮದ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಜಗಳ ಹೆಚ್ಚುತ್ತಿದೆ, ಅದರಲ್ಲೂ ಪ್ರೀತಿ ಒಪ್ಪುವ ಮೊದಲು ಮನೆಯ ಮಂದಿ ಜಾತಿ ಕೇಳುವುದು ವಾಡಿಕೆ ಕೂಡ ಅಗಿ ಹೋಗಿದೆ. ಜಾತಿ ಮೀರಿ ಬೇರೆ ಜಾತಿ ಹುಡುಗನ ಜೊತೆಗೆ ಅಥವಾ ಹುಡುಗಿ ಜೊತೆಗೆ ಮದುವೆ ಮಾಡಿಕೊಂಡಿದ್ದೇ ಆದರೆ ಇಡೀ ಕುಟುಂಬ ಸೇರಿ ರಿವೇಂಜ್ ತೆಗೆದುಕೊಳ್ಳುತ್ತದೆ. ಇಂತಹ ಸಾಲು ಸಾಲು ಆಘಾತಕಾರಿ ಘಟನೆಗಳು ಮನಸ್ಸಿನಿಂದ ಮಾಸಿ ಹೋಗುವ ಮೊದಲೇ, ಜಾತಿ ಕಾರಣಕ್ಕೆ ಪ್ರಿಯಕರನ ಹತ್ಯೆ, ಲವರ್ ಶವದ ಜೊತೆಗೇ ಮದುವೆ ಆದ ಯುವತಿ...
ಭಾರತದ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು & ಭಾರತ ಈಗ ಆರ್ಥಿಕ ಅಭಿವೃದ್ಧಿಯಲ್ಲಿ ಅಮೆರಿಕ ರೀತಿಯ ದೊಡ್ಡ ದೊಡ್ಡ ದೇಶಗಳಿಗೇ ಸವಾಲು ಹಾಕುವ ಹಂತಕ್ಕೆ ಬೆಳೆದು ನಿಂತಿದೆ. ಎಐ, ಡಿಜಿಟಲ್ ವರ್ಲ್ಡ್ ಹೀಗೆ ಭಾರತ ಆಧುನಿಕ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದುತ್ತಾ ಇದೆ. ಹೀಗೆಲ್ಲಾ ಭಾರತ ತನ್ನ ಶಕ್ತಿ ಪ್ರದರ್ಶನ ಮಾಡುತ್ತಾ ಆಧುನಿಕ ಕಾಲದಲ್ಲಿ ಬೆಳೆಯುತ್ತಿದ್ದರೂ ಜಾತಿ & ಇತರ ವಿಚಾರಗಳು ಸಮಾಜವನ್ನು ಕಾಡುತ್ತಲೇ ಇವೆ. ಇಂತಹ ಸಮಯದಲ್ಲೇ ಕರ್ನಾಟಕ ಪಕ್ಕದ ರಾಜ್ಯದಲ್ಲಿ ಜಾತಿ ಕಾರಣಕ್ಕೆ ಪ್ರಿಯಕರನ ಜೀವವನ್ನೇ ತೆಗೆದಿರುವ ಆರೋಪ ಕೇಳಿ ಬಂದಿತ್ತು. ಆದರೆ ತನ್ನ ಲವರ್ ಜೀವ ಹೋಗಿದ್ದರೂ ಯುವತಿ ಮಾಡಿದ್ದೇನು ಗೊತ್ತಾ?

ಜಾತಿ ಕಾರಣಕ್ಕೆ ಪ್ರಿಯಕರನ ಹತ್ಯೆ, ಯುವತಿ...
ಹೌದು, ಮೊದಲೇ ಹೇಳಿದಂತೆ ಆಧುನಿಕ ಭಾರತದಲ್ಲೂ ಜಾತಿ ಕಾರಣ ಮುಂದೆ ಇಟ್ಟುಕೊಂಡು ಕೆಲವರು ಮಾಡಬಾರದ ಕೆಲಸ ಮಾಡುವಂತೆ ಆಗಿದೆ. ಅದರಲ್ಲೂ ಜೀವವನ್ನೇ ತೆಗೆಯುವ ಹಂತ ಕೂಡ ಎದುರಾಗಿದೆ. ಕರ್ನಾಟಕ ಪಕ್ಕದ ರಾಜ್ಯದಲ್ಲಿ ಜಾತಿ ಕಾರಣಕ್ಕೆ ಪ್ರಿಯಕರನ ಜೀವವನ್ನೇ ತೆಗೆದ ಘಟನೆ ಜಗತ್ತಿನಾದ್ಯಂತ ಈಗ ವೈರಲ್ ಆಗುತ್ತಿದೆ. ಹಾಗೇ, ಲವರ್ ಶವದ ಜೊತೆಗೇ ಮದುವೆ ಆದ ಯುವತಿಯ ಕರುಣಾಜನಕ ಕಥೆಗೆ ಮನುಷ್ಯರು ಕಂಬನಿ ಮಿಡಿದಿದ್ದಾರೆ...
ಪ್ರಿಯಕರನ ಮೃತದೇಹದ ಜೊತೆಗೆ ಮದುವೆ
ಹೌದು, ಜಾತಿ ವಿಚಾರಕ್ಕೆ ಮಗಳ ಪ್ರೀತಿ ನಿರಾಕರಿಸಿದ ಕುಟುಂಬ ಒಂದು ಆಕೆ ಪ್ರಿಯಕರನ ಕೊಂದೇ ಹಾಕಿರುವ ಭೀಕರ ಘಟನೆ ಮಹಾರಾಷ್ಟ್ರದ ನಾಂದೇಡ್ ಭಾಗದಲ್ಲಿ ನಡೆದಿದೆ. 25 ವರ್ಷದ ಸಕ್ಷಾಮ್ ಟೆಟೆ ಹತ್ಯೆ ಆಗಿರುವ ದುರ್ದೈವಿ. ಆದರೆ ತಮ್ಮ ಕುಟುಂಬಸ್ಥರು ಮಾಡಿದ ಈ ಕೃತ್ಯವನ್ನು ಖಂಡಿಸಿ ಯುವತಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿ ಕೊನೆಗೂ ತನ್ನ ಪ್ರೀತಿ ಉಳಿಸಿಕೊಂಡಿದ್ದಾಳೆ ಎಂಬ ವಿಚಾರ ಈಗ ಸಂಚಲನ ಸೃಷ್ಟಿಸಿದೆ... ಈ ಘಟನೆ ಇದೀಗ ಹಳ್ಳಿಯಿಂದ ದಿಲ್ಲಿ ತನಕ ಸದ್ದು ಮಾಡ್ತಾ ಇದ್ದು ಜಾತಿ ಕಾರಣ ಪ್ರೀತಿಯನ್ನೇ ಕೊಲೆ ಮಾಡಿದ ಪಾಪಿಗಳ ವಿರುದ್ಧ ಭಾರಿ ಆಕ್ರೋಶವೂ ವ್ಯಕ್ತವಾಗುತ್ತಿದೆ. ಅಲ್ಲದೆ ಆಧುನಿಕ ಕಾಲದಲ್ಲೂ ಈ ರೀತಿ ಜಾತಿ ವಿಚಾರಕ್ಕೆ ಕೊಲೆ ಮಾಡುವವರಿಗೆ ಸರಿಯಾದ ಶಿಕ್ಷೆ ಆಗಬೇಕು ಅಂತಾ ಇದೀಗ ಜನ ಆಗ್ರಹಿಸುತ್ತಿದ್ದಾರೆ.












Click it and Unblock the Notifications