ವೈರಲ್ ಆಯ್ತು ಬಿಜೆಪಿ ಶಾಸಕನ ಕಿಸ್ಸಿಂಗ್ ವಿಡಿಯೋ

ಚಲಿಸುತ್ತಿದ್ದ ಬಸ್ ನಲ್ಲಿ ಯುವತಿಗೆ ಮುತ್ತಿಕ್ಕಿ ಸುದ್ದಿಯಾಗಿರುವ ಮಹಾರಾಷ್ಟ್ರದ ಬಿಜೆಪಿ ನಾಯಕ ರವೀಂದ್ರ ಜವಾಂಥಾಡೆ. ಬಸ್ ನಲ್ಲಿದ್ದ ಸಿಸಿಟಿವಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

ಮುಂಬೈ, ಜುಲೈ 5: ಮಹಾರಾಷ್ಟ್ರದ ಬಿಜೆಪಿ ನಾಯಕ ರವೀಂದ್ರ ಜವಾಂಥಾಡೆ ಎಂಬುವರು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ನಾಯಕ ರವೀಂದ್ರ ಜವಾಂಥಾಡೆ ಅವರು ಯುವತಿಯೊಬ್ಬಳಿಗೆ ಚಲಿಸುತ್ತಿದ್ದ ಬಸ್ ನಲ್ಲಿ ಮುತ್ತಿಟ್ಟ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 Maharashtra: Video of BJP leader kissing in moving bus goes viral, woman says was raped

ಬಸ್ ನಲ್ಲಿದ್ದ ಸಿಸಿಟಿವಿಯಲ್ಲಿ ಶಾಸಕನ ಈ ಸರಸವು ದಾಖಲಾಗಿದ್ದು, ಇದರ ವಿಡಿಯೋಗಳ ತುಣುಕುಗಳು ಈಗ ವೈರಲ್ ಆಗಿವೆ. ಇದರ ಬೆನ್ನಲ್ಲೇ, ಆ ಯುವತಿಯು ಶಾಸಕನ ವಿರುದ್ಧ ಅತ್ಯಾಚಾರದ ಪ್ರಕರಣದ ದಾಖಲಿಸಿದ್ದಾರೆ.

ಏನಿದೆ ವಿಡಿಯೋದಲ್ಲಿ?
ಇತ್ತೀಚೆಗೆ, ಗಡಚಿರೋಲಿ ಜಿಲ್ಲೆಯಲ್ಲಿ ಸಂಚರಿಸುವ ಬಸ್ ನಲ್ಲಿ ಶಾಸಕ ರವೀಂದ್ರ ಬವಾಂಥಾಡೆ ಅವರು ಯುವತಿಯೊಬ್ಬಳ ಜತೆ ಅಕ್ಕಪಕ್ಕದ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾರೆ. ಇಬ್ಬರೂ ಪರಿಚಿತರೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆಯೆಂದು ಹೇಳಲಾಗಿದೆ.

ಆ ಬಸ್ ಚಂದ್ರಾಪುರ ಪ್ರಾಂತ್ಯದಲ್ಲಿ ಚಲಿಸುತ್ತಿದ್ದ ವೇಳೆ, ಆ ಯುವತಿಯ ಮೇಲೆ ಜಾರಿದ ಆತ ಆ ಯುವತಿಗೆ ಮುತ್ತಿಕ್ಕಲು ಆರಂಭಿಸಿದ್ದಾನೆ. ಇದಕ್ಕೆ ಆ ಯುವತಿಯು ಯಾವುದೇ ಪ್ರತಿರೋಧ ಒಡ್ಡುವುದಿಲ್ಲ. ಬದಲಾಗಿ, ಆತ ಕೃತ್ಯಕ್ಕೆ ಸಹಕರಿಸುವುದು ವಿಡಿಯೋದಲ್ಲಿ ದಾಖಲಾಗಿದೆ.

ಕೆಲ ನಿಮಿಷಗಳವರೆಗೆ ಇದು ಹಾಗೇ ಮುಂದುವರಿದಿದೆ. ಅವರಿಬ್ಬರೂ ನಿಗದಿತ ಸ್ಥಳದಲ್ಲಿ ಇಳಿದುಹೋಗಿದ್ದಾರೆ. ಆದರೆ, ಈ ವಿಡಿಯೋದ ತುಣುಕುಗಳು ವೈರಲ್ ಆಗಲಾರಂಭಿಸಿವೆ. ಈ ತುಣುಕುಗಳು ವೈರಲ್ ಆಗುತ್ತಿದ್ದಂತೆ ಆ ಬಿಜೆಪಿ ಶಾಸಕ ಭೂಗತರಾಗಿದ್ದಾರೆ.

ಆದರೆ, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಆ ಯುವತಿಯು ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ಶಾಸಕರು ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿದ್ದಾರೆ. ತಮ್ಮನ್ನು ಮದುವೆಯಾಗುವುದಾಗಿ ಹೇಳಿ, ಕೆಲಸ ಕೊಡಿಸುವ ಆಮಿಷವನ್ನೂ ತೋರಿಸಿ ಈ ರೀತಿಯ ತಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದೂ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರವೀಂದ್ರ ಎಂಬ ಹೆಸರಿನ ರಾಜಕಾರಣಿಗಳು ಯಾವುದಾದರೊಂದು ವಿವಾದಕ್ಕೆ ಸಿಗುತ್ತಲೇ ಇರುತ್ತಾರೇನೋ? ಏಕೆಂದರೆ, ಕೆಲ ತಿಂಗಳುಗಳ ಹಿಂದೆ ಮಹಾರಾಷ್ಟ್ರದ ಸಂಸದ, ಶಿವಸೇನೆಯ ರವೀಂದ್ರ ಗಾಯಕ್ವಾಡ್ ಎಂಬುವರು ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದೇಶೀಯ ವಿಮಾನ ಪ್ರಯಾಣದಿಂದ ನಿಷೇಧಕ್ಕೊಳಗಾಗಿದ್ದರು. ಇದೀಗ, ರವೀಂದ್ರ ಜವಾಂಥಾಡೆ ಈಗ ವಿವಾದಕ್ಕೆ ಸಿಲುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+