ವಿಚಾರವಾದಿಗಳ ಬಂಧನ: ಮೋದಿ ಹತ್ಯೆ ಸಂಚಿನ ಸಾಕ್ಷ್ಯ ಇದೆ ಎಂದ ಪೊಲೀಸರು
ಮುಂಬೈ, ಆಗಸ್ಟ್ 31: ಹಲವು ವಿಚಾರವಾದಿಗಳನ್ನು ಬಂಧಿಸಿದ್ದ ಮಹಾರಾಷ್ಟ್ರ ಪೊಲೀಸ್ ಇಲಾಖೆ ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದು, ನಮ್ಮ ಬಳಿ ದೋಷಾರೋಪಣೆ ಹೊರಿಸುವ ಸಾಕ್ಷ್ಯಗಳಿವೆ ಎಂದಿದೆ.
ಮಾವೋವಾದಿಗಳು ಸರ್ಕಾರಕ್ಕೆ ತೊಂದರೆ ತಂದೊಡ್ಡುವ ಅಥವಾ ಸರ್ಕಾರಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿದ್ದರು ಎಂಬುದು ವಿಚಾರವಾದಿಗಳ ಮನೆಯ ಮೇಲೆ ದಾಳಿ ನಡೆಸಿದಾಗ ನಮಗೆ ಗೊತ್ತಾಗಿದೆ ಎಂದು ಮಹಾರಾಷ್ಟ್ರ ಪೊಲೀಸ್ ಎಡಿಜಿ ಪರಂಬೀರ್ ಸಿಂಗ್ ಹೇಳಿದ್ದಾರೆ.
ಮಹಾರಾಷ್ಟ್ರ ಪೊಲೀಸರು ಹೈದರಾಬಾದ್, ಚತ್ತೀಸ್ಘಡ್, ಮುಂಬೈ, ದೆಹಲಿ ಇನ್ನೂ ಹಲವೆಡೆ ದಾಳಿ ನಡೆಸಿ ಐದು ಮಂದಿ ವಿಚಾರವಾದಿಗಳನ್ನು ಬಂಧಿಸಿದ್ದರು. ಈ ಬಗ್ಗೆ ದೇಶದಾದ್ಯಂತ ಭಾರಿ ವಿರೋಧವೂ ವ್ಯಕ್ತವಾಗಿತ್ತು.

ಐದು ವಿಚಾರವಾದಿಗಳ ಬಂಧನ
ಆಂಧ್ರ ಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ಆಗಸ್ಟ್ 28ರಂದು ಬಂಧಿಸಿದ್ದರು.

ಎಲ್ಲ ಬಂಧಿತರನ್ನು ಗೃಹ ಬಂಧನಕ್ಕೆ
ಬಂಧಿತರಾಗಿದ್ದ ಎಲ್ಲ ವಿಚಾರವಾದಿಗಳನ್ನು ಗೃಹ ಬಂಧನಕ್ಕೆ ಒಳಪಡಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಸುಪ್ರೀಂಕೋರ್ಟ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದು ಮಹಾರಾಷ್ಟ್ರ ಪೊಲೀಸರಿಗೆ ಆದ ಹಿನ್ನೆಡೆ ಎನ್ನಲಾಗಿದೆ.

ಮಹತ್ವದ ಸಾಕ್ಷ್ಯ ವಶಪಡಿಸಿಕೊಂಡಿರುವ ಪೊಲೀಸರು
ಮಹಾರಾಷ್ಟ್ರ ಪೊಲೀಸರು ಹೇಳುವ ಪ್ರಕಾರ ಬಂಧಿಸಿರುವ ಕಬೀರ್ ಕಲಾ ಮಂಚ್ ಸಂಘಕ್ಕೆ ಸದಸ್ಯರಾಗಿದ್ದಾರೆ. ದಾಳಿಯ ಸಮಯ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ. ಬಂಧಿತರ ಲ್ಯಾಪ್‌ಟಾಪ್, ಮೊಬೈಲ್‌ಗಳ ಪಾಸ್‌ವರ್ಡ್‌ಗಳನ್ನು ಬ್ರೇಕ್ ಮಾಡಿರುವ ಪೊಲೀಸರು. ಬಂಧಿತ ಹೋರಾಟಗಾರರು ನಿಷೇಧಿತ ಸಿಪಿಐಎಂ ಜೊತೆಗೆ ಒಡನಾಟ ಇರಿಸಿಕೊಂಡಿರುವುದಕ್ಕೆ ಸಾಕ್ಷ್ಯಿಯಾಗಿ ಹಲವು ಇ-ಮೇಲ್‌ಗಳಿವೆ ಎಂದು ಹೇಳಿದ್ದಾರೆ.

'ರಾಜೀವ್ ಗಾಂಧಿ ಮಾದರಿಯಲ್ಲಿ ಮೋದಿ ರಾಜ್ ಅಂತ್ಯ'
ಬಂಧಿತ ಹೋರಾಟಗಾರರೊಬ್ಬರಿಂದ ವಶಪಡಿಸಿಕೊಂಡ ಪತ್ರವೊಂದನ್ನು ತೋರಿಸಿದ ಪೊಲೀಸ್ ಎಡಿಜಿ, ಆ ಪತ್ರದಲ್ಲಿ 'ಮೋದಿ ರಾಜ್' ಅನ್ನು 'ರಾಜೀವ್ ಗಾಂಧಿ ಮಾದರಿ'ಯಲ್ಲಿ ಅಂತ್ಯ ಮಾಡಬೇಕು ಎಂದು ಉಲ್ಲೇಖವಿರುವುದನ್ನು ತೋರಿಸಿದರು. ಅದೇ ಪತ್ರದಲ್ಲಿ 'ಗ್ರೆನೆಡ್ ಲಾಂಚರ್ ಖರೀದಿಗೆ ಹಣ ಸಂಗ್ರಹಣೆ ಮಾಡುವ ಬಗ್ಗೆಯೂ ಬರೆಯಲಾಗಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್ ಆಕ್ಷೇಪ
ಮಹಾರಾಷ್ಟ್ರ ಪೊಲೀಸರು ವಿಚಾರವಾದಿಗಳನ್ನು ಬಂಧಿಸಿದ ಬಗ್ಗೆ ಆಕ್ಷೇಪ ಎತ್ತಿದ್ದ ಸುಪ್ರೀಂಕೋರ್ಟ್ 'ಭಿನ್ನಾಭಿಪ್ರಾಯ ಸಮಾಜದಲ್ಲಿ ಸಮತೋಲನ ಕಾಪಾಡುತ್ತದೆ, ಅದನ್ನು ಅದುಮಿಡುವ ಯತ್ನ ಮಾಡಿದರೆ ಸ್ಫೋಟಗೊಳ್ಳುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಸೆಪ್ಟೆಂಬರ್ 6ರಂದು ಸುಪ್ರೀಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ.
-
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications