ಮಹಾರಾಷ್ಟ್ರ, ಹರ್ಯಾಣ ಚುನಾವಣೆ; ಸೋಮವಾರ ಮತದಾನ

ನವದೆಹಲಿ, ಅಕ್ಟೋಬರ್ 20 : ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು, ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್, ಹರ್ಯಾಣದಲ್ಲಿ ಎಂ. ಎಲ್. ಕಟ್ಟರ್ ಮೊದಲ ಬಾರಿ ಮುಖ್ಯಮಂತ್ರಿಯಾಗಿ 5 ವರ್ಷದ ಆಡಳಿತ ಪೂರ್ಣಗೊಳಿಸಿದ್ದಾರೆ. ಎರಡನೇ ಅವಧಿಗೂ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಪ್ರಚಾರ ನಡೆಸಿದ್ದಾರೆ.

ಅಕ್ಟೋಬರ್ 21ರ ಸೋಮವಾರ ಎರಡೂ ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಸೀಟು, ಹರ್ಯಾಣ ವಿಧಾನಸಭೆಯಲ್ಲಿ 90 ಸೀಟುಗಳಿವೆ. ಅಕ್ಟೋಬರ್ 21ರಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಮಹಾರಾಷ್ಟ್ರ ವಿಧಾನಸಭೆ

ಮಹಾರಾಷ್ಟ್ರ ವಿಧಾನಸಭೆ

ಮಹಾರಾಷ್ಟ್ರ ವಿಧಾನಸಭೆಯ 288 ಸೀಟುಗಳಿಗೆ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಒಟ್ಟು 8,98,39,600 ಮತದಾರರು ಇದ್ದಾರೆ. 4,28,43,635 ಮಹಿಳೆಯರು ಮತ್ತು 4,68,75,750 ಪುರುಷ ಮತದಾರರು ಇದ್ದಾರೆ. 235 ಮಹಿಳೆಯರು ಸೇರಿದಂತೆ 3237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 95,473 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.

ಯಾವ ಮೈತ್ರಿಕೂಟಕ್ಕೆ ಗೆಲುವು?

ಯಾವ ಮೈತ್ರಿಕೂಟಕ್ಕೆ ಗೆಲುವು?

ಬಿಜೆಪಿ-ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಕಾಂಗ್ರೆಸ್ 147 ಮತ್ತು ಎನ್‌ಸಿಪಿ 121 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ.

ಹರ್ಯಾಣ ವಿಧಾನಸಭೆ ಚುನಾವಣೆ

ಹರ್ಯಾಣ ವಿಧಾನಸಭೆ ಚುನಾವಣೆ

ಹರ್ಯಾಣ ವಿಧಾನಸಭೆಯಲ್ಲಿ 90 ಸೀಟುಗಳಿವೆ. ರಾಜ್ಯದಲ್ಲಿ 1.83 ಕೋಟಿ ಮತದಾರರು ಇದ್ದಾರೆ. ಇವರಲ್ಲಿ 83 ಲಕ್ಷ ಮಹಿಳೆಯರು. 105 ಮಹಿಳೆಯರು ಸೇರಿದಂತೆ 1169 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 19,578 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ವಿವಿಧ ಪಕ್ಷಗಳು

ವಿವಿಧ ಪಕ್ಷಗಳು

ಹರ್ಯಾಣದಲ್ಲಿ ಬಿಎಸ್‌ಪಿ, ಎಎಪಿ, ಸ್ವರಾಜ್ ಇಂಡಿಯಾ ಸೇರಿದಂತೆ ವಿವಿಧ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಎಪಿ 46, ಬಿಎಸ್‌ಪಿ 87 ಕ್ಷೇತ್ರದಲ್ಲಿ ಕಣಕ್ಕಿಳಿದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+