ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಗ್ರಾಮ ಪಂಚಾಯತ್ ಚುನಾವಣೆ; ಉದ್ಧವ್ ಠಾಕ್ರೆ ಬಣಕ್ಕೆ ಹೆಚ್ಚಿನ ಸ್ಥಾನ

|
Google Oneindia Kannada News

ಮುಂಬೈ, ಅ.18: ಮಹಾರಾಷ್ಟ್ರ ಪಂಚಾಯತ್ ಚುನಾವಣೆ 2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ - ಶಿವಸೇನೆ (ಉದ್ಧವ್ ಠಾಕ್ರೆ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ 1079 ಸ್ಥಾನಗಳಲ್ಲಿ 464 ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ಆಡಳಿತ ಪಕ್ಷಕ್ಕಿಂತ ನೂರಕ್ಕೂ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಮಹಾ ವಿಕಾಸ್ ಅಘಾಡಿ ತನ್ನ ಪ್ರತಿಸ್ಪರ್ಧಿ ಎನ್‌ಡಿಎ ಗಿಂತ 107 ಸ್ಥಾನಗಳನ್ನು ಹೆಚ್ಚು ಗೆದ್ದಿದೆ. ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ (ಏಕನಾಥ್ ಶಿಂಧೆ) ಮೈತ್ರಿಯು 357 ಸ್ಥಾನಗಳನ್ನು ಗೆದ್ದಿದೆ. ಇತರ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ 258 ಸ್ಥಾನಗಳನ್ನು ಗೆದ್ದಿದ್ದಾರೆ.

'ಬಿಜೆಪಿ ಸೇರಲಿಲ್ಲ, ಹೀಗಾಗಿ ಸೌರವ್ ಗಂಗೂಲಿ ಬಿಸಿಸಿಐನಿಂದ ನಿರ್ಗಮಿಸಿದ್ದಾರೆ''ಬಿಜೆಪಿ ಸೇರಲಿಲ್ಲ, ಹೀಗಾಗಿ ಸೌರವ್ ಗಂಗೂಲಿ ಬಿಸಿಸಿಐನಿಂದ ನಿರ್ಗಮಿಸಿದ್ದಾರೆ'

ಮಹಾರಾಷ್ಟ್ರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ಗರಿಷ್ಠ 397 ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿಕೊಂಡಿದೆ.

Maharashtra Gram Panchayat Polls: Big win for Uddhav Thackerays MVA

1,079 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಶೇಕಡಾ 75ಕ್ಕೂ ಹೆಚ್ಚು ಮತದಾನವಾಗಿದೆ.

"ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 397 ಸ್ಥಾನಗಳನ್ನು ಗೆಲ್ಲುವ ಮೂಲಕ ನಂಬರ್ ಒನ್ ಪಕ್ಷವಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ 'ಬಾಳಾಸಾಹೆಬಂಚಿ ಶಿವಸೇನಾ' ಜಂಟಿಯಾಗಿ 478 ಕ್ಕೆ ತಲುಪಿದೆ" ಎಂದು ರಾಜ್ಯ ಬಿಜೆಪಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ಬಿಜೆಪಿ 235 ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ 134, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ 110, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) 128 ಮತ್ತು 'ಬಾಳಾಸಾಹೇಬಂಚಿ ಶಿವಸೇನೆ' 114 ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿಕೊಂಡಿದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಬಾರಿ 258 ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.

ಆದರೂ ಬಿಜೆಪಿ 397 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಹೇಳಿಕೊಂಡಿದ್ದು, ಮತದಾರರು 'ಬಾಳಾಸಾಹೆಬಂಚಿ ಶಿವಸೇನೆ' ಪರವಾಗಿ ತೀರ್ಪು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

Maharashtra Gram Panchayat Polls: Big win for Uddhav Thackerays MVA

"ನಾವು ತೆಗೆದುಕೊಂಡ ನಿರ್ಧಾರ (ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಬೇರ್ಪಡುವ) ಸಮರ್ಥನೀಯವಾಗಿದೆ. 'ಬಾಳಾಸಾಹೆಬಂಚಿ ಶಿವಸೇನೆ' ಮತ್ತು ಬಿಜೆಪಿಗೆ ಜನರಿಂದ ಅಪಾರ ಬೆಂಬಲ ಸಿಕ್ಕಿದೆ. ಜನರು ನಂಬಿಕೆಯಿಂದ ಮತ ಚಲಾಯಿಸಿದ್ದಾರೆ ಇದು ಫಲಿತಾಂಶದಲ್ಲಿ ತಿಳಿಯುತ್ತಿದೆ. ಅಭಿವೃದ್ಧಿಗೆ ನಾಂದಿ ಹಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ' ಎಂದು ಏಕನಾಥ್ ಹೇಳಿದ್ದಾರೆ.

ನಾಗ್ಪುರ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ಮುಕ್ತಾ ಕೊಕರ್ಡೆ ಮತ್ತು ಉಪಾಧ್ಯಕ್ಷರಾಗಿ ಕುಂದಾ ರಾವುತ್ ಸೋಮವಾರ ಆಯ್ಕೆಯಾಗಿದ್ದಾರೆ. ಶನಿವಾರದಂದು ನಡೆದ ನಾಗ್ಪುರ ಜಿಲ್ಲಾ ಪಂಚಾಯತ್ ಸಮಿತಿ ಅಧ್ಯಕ್ಷರು ಮತ್ತು ಉಪ ಅಧ್ಯಕ್ಷರ ಹುದ್ದೆಗಳಿಗೆ ನಡೆದ ಚುನಾವಣೆಯ ಫಲಿತಾಂಶಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದೆ.

ಬಿಜೆಪಿ ಒಂದೇ ಒಂದು ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ಕೇವಲ ಮೂರು ಉಪ ಸಭಾಪತಿ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಮಹಾರಾಷ್ಟ್ರ ಗ್ರಾಮ ಪಂಚಾಯತ್ ಚುನಾವಣೆಯ ಅಂತಿಮ ಫಲಿತಾಂಶ

*ಮಹಾ ವಿಕಾಸ್ ಅಘಾಡಿ 464*

ಕಾಂಗ್ರೆಸ್- 152

ಎನ್‌ಸಿಪಿ- 157

ಶಿವಸೇನೆ- 155

*ಎನ್‌ಡಿಎ- 357*

ಬಿಜೆಪಿ- 244

ಏಕನಾಥ್ ಶಿಂಧೆ ಬಣ -113

ಇತರರು 258

English summary
Maharashtra Gram Panchayat Polls: Big win for Uddhav Thackeray's MVA it won 464 out of 1079 seats, but, BJP Claims its won 397 Seats. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X