ಮಹಾರಾಷ್ಟ್ರ ಚುನಾವಣೆ ರೋಚಕ ತಿರುವು: ಚಿಕ್ಕಪ್ಪ vs ಸಹೋದರ ಮಗ ಸ್ಪರ್ಧೆ!
ಮಹಾರಾಷ್ಟ್ರ ಚುನಾವಣೆ ರೋಚಕ ತಿರುವು ಪಡೆದುಕೊಂಡಿದೆ. ಮಹಾರಾಷ್ಟ್ರ ಚುನಾವಣೆ ಮುಂದಿನ ತಿಂಗಳು 20ರಂದು ನಡೆಯಲಿದೆ. ಈ ಬಾರಿಯ ಮಹಾರಾಷ್ಟ್ರ ಚುನಾವಣೆ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಇದೀಗ ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಭಾವಿ ರಾಜಕೀಯ ಪವರ್ ಕುಟುಂಬದಲ್ಲೇ ಸ್ಪರ್ಧೆ ಏರ್ಪಟ್ಟಿದ್ದು, ಚಿಕ್ಕಪ್ಪ ಹಾಗೂ ಸಹೋದರ ಮಗ ಒಂದೇ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಮೂಲಕ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಹಾರಾಷ್ಟ್ರ ಚುನಾವಣೆ ಬದಲಾಗಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಇತಿಹಾಸ ಸೃಷ್ಟಿ ಮಾಡಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯು ಈಚೆಗೆ ಇಬ್ಭಾಗವಾಗಿದೆ. ಮಹಾರಾಷ್ಟ್ರದಲ್ಲಿ ಈಗ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಒಂದು ಬಣ (ಮೂಲ) ಶರದ್ ಪವಾರ್ ಅವರು ಕಾಂಗ್ರೆಸ್ ಮಿತ್ರ ಪಕ್ಷಗಳೊಂದಿಗೆ ಇದ್ದರೆ, ಆಡಳಿತ ಪಕ್ಷದಲ್ಲಿ ಅಜಿತ್ ಪವಾರ್ ಇದ್ದಾರೆ. ಶರದ್ ಪವಾರ್ ಅವರು ಹಿರಿಯ ರಾಜಕಾರಣಿ. ಕಾಂಗ್ರೆಸ್‌ನಿಂದ ಹೊರ ಬಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶುರು ಮಾಡಿದ್ದರು. ಕೇಂದ್ರ ಸಚಿವ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಆದರೆ, ಅಜಿತ್ ಪವಾರ್ ಹಾಗೂ ಶರದ್ ಪವಾರ್ ನಡುವೆ ಜಿದ್ದಾಜಿದ್ದಿನ ರಾಜಕೀಯ ಇದೆ.

ಈ ಇಬ್ಬರು ಪ್ರಭಾವಿ ರಾಜಕಾರಣಗಳು ಒಂದೇ ಕುಟುಂಬದವರು ಸಹ. ಶರದ್ ಪವಾರ್ ಅವರು ಅಜಿತ್ ಪವಾರ್ ಅವರಿಗೆ ಚಿಕ್ಕಪ್ಪ ಆಗುತ್ತಾರೆ. ಎರಡು ವರ್ಷಗಳ ಹಿಂದೆ ಅಜಿತ್ ಪವಾರ್ ಅವರು ಮೂಲ ನ್ಯಾಷನಲಿಸ್ಟ್‌ಕಾಂಗ್ರೆಸ್ ಪಾರ್ಟಿಯಿಂದ ಬೇರ್ಪಟ್ಟು ಆಡಳಿತ ಪಕ್ಷ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳೊಂದಿಗೆ ಕೈಜೋಡಿಸಿದ್ದರು. ಇದೀಗ ಅಜಿತ್ ಪವಾರ್ ಸೋಲಿಸಲು ಶರದ್ ಪವಾರ್ ಅವರು ತಮ್ಮ ಮೊಮ್ಮಗನನ್ನೇ ಅಖಾಡಕ್ಕೆ ಇಳಿಸಿದ್ದಾರೆ.
ಈ ಮೂಲಕ ಕುಟುಂಬದ ನಡುವೆಯೇ ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಜಿದ್ದಾಜಿದ್ದಿ ಶುರುವಾಗುತ್ತಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಮೊಮ್ಮಗ ಯುಗೇಂದ್ರ ಪವಾರ್ ಅವರ ವಿರುದ್ಧ ಸ್ಪರ್ಧೆ ಮಾಡುವಂತಾಗಿದೆ. ಯುಗೇಂದ್ರ ಪವಾರ್ ಅಜಿತ್ ಪವಾರ್ ಅವರ ಸಹೋದರ ಶ್ರೀನಿವಾಸ್ ಪವಾರ್ ಪುತ್ರನಾಗಿದ್ದಾರೆ.
ಜಿದ್ದಾಜಿದ್ದಿನ ಕಣವಾದ ಬಾರಾಮತಿ: ಮಹಾರಾಷ್ಟ್ರದ ಬಾರಾಮತಿ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿದೆ. ಈ ಕ್ಷೇತ್ರದಿಂದ ಅಜಿತ್ ಪವಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಅವರು ಈಗ ಆಡಳಿತರೂಢ ಪಕ್ಷದಲ್ಲಿದ್ದು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಅವರ ಸಹೋದರ ಮಗನ ವಿರುದ್ಧ ಅಂದರೆ ಯುಗೇಂದ್ರ ಪವಾರ್ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸಿನಿಮಾಗಿಂತ ಕಮ್ಮಿ ಇಲ್ಲ: ಮಹಾರಾಷ್ಟ್ರದಲ್ಲಿ ಈ ಬಾರಿ ಚುನಾವಣೆ ಉಳಿದ ವರ್ಷಗಳಿಗಿಂತ ಭಿನ್ನವಾಗಿ ಹಾಗೂ ಸಿನಿಮಾದಂತೆ ಇದೆ. ಪಕ್ಷ ತೊರೆದು ಪಕ್ಷವನ್ನು ದುರ್ಬಲ ಮಾಡಿರುವ ಅಜಿತ್ ಪವಾರ್ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕು ಎಂದು ಶರದ್ ಪವಾರ್ ಪ್ಲಾನ್ ಮಾಡುತ್ತಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷವೂ ವಿಭಜನೆಯಾಗಿದೆ. ಬಾಳಾಠಾಕ್ರೆ ಹಾಗೂ ಶಿವಸೇನಾ ಪಾರ್ಟಿಗೆ ಮಹಾರಾಷ್ಟ್ರದಲ್ಲಿ ದೊಡ್ಡ ಇತಿಹಾಸವೇ ಇದೆ.
ಬಾಳಾಠಾಕ್ರೆ ಅವರು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲ ಹಾಗೂ ಮಹಾರಾಷ್ಟ್ರ ಸ್ವಾಭಿಮಾನವನ್ನು ಎತ್ತಿಹಿಡಿದವರಾಗಿದ್ದರು. ಆದರೆ, ಅಂತಹ ಶಿವಸೇನಾ ಪಾರ್ಟಿಯೇ ಇದೀಗ ಇಬ್ಭಾಗವಾಗಿ ತನ್ನ ಹಳೆಯ ಅಸ್ತಿತ್ವವನ್ನು ಕಳೆದುಕೊಂಡಿದೆ.












Click it and Unblock the Notifications