ಮಹಾರಾಷ್ಟ್ರ ಚುನಾವಣೆ: ಬಿಜೆಪಿಗೆ "ಪಂಚ್" ಕೊಟ್ಟ ಕಾಂಗ್ರೆಸ್, ಪ್ರಣಾಳಿಕೆ ನೋಡಿ ಬಿಜೆಪಿ ಕಂಗಾಲು!
ಮಹಾರಾಷ್ಟ್ರದಲ್ಲಿ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ಭರ್ಜರಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿಗೆ ಶಾಕ್ ಕೊಟ್ಟಿದೆ. ಮಹಾರಾಷ್ಟ್ರದಲ್ಲಿ ಇದೇ ತಿಂಗಳು 20ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇಲ್ಲೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಹಿಂದೆಯೇ ಬಿದ್ದಿದೆ. ಈಚೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಇದೀಗ ಇಲ್ಲಿ ಕಾಂಗ್ರೆಸ್ ಬಿಜೆಪಿಗೆ ಟಕ್ಕರ್ ಕೊಟ್ಟಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಪಕ್ಷಗಳೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿವೆ. ಹೀಗಾಗಿ, ಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ (ಮೈತ್ರಿ) ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಭರ್ಜರಿ ಚುನಾವಣೆ ಪ್ರಣಾಳಿಕೆಯನ್ನೇ ಬಿಡುಗಡೆ ಮಾಡಿದೆ. ಈ ಬಾರಿ ಚುನಾವಣೆಯಲ್ಲಿ ಐದು ಪ್ರಮುಖ ಕ್ಷೇತ್ರಗಳನ್ನು ಆಧರಿಸಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿರುವುದಾಗಿ ಮಹಾವಿಕಾಸ ಅಘಾಡಿ ಹೇಳಿದೆ. ಮಹಾವಿಕಾಸ ಅಘಾಡಿ (ಕಾಂಗ್ರೆಸ್, ಶಿವಸೇನಾ (ಉದ್ಧವ್‌ಠಾಕ್ರೆ) ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ (ಶರದ್ ಪವಾರ್)) ಒಕ್ಕೂಟವಾಗಿದೆ.
ಮಹಾರಾಷ್ಟ್ರದಲ್ಲಿ ಇದೇ 20ಕ್ಕೆ ಚುನಾವಣೆ ನಡೆಯಲಿದೆ. ಇಲ್ಲಿನ 288 ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 145 ಇಲ್ಲಿ ಮ್ಯಾಜಿಕ್ ನಂಬರ್ ಆಗಿದೆ.
ಮೀಸಲಾತಿ ತೆಗೆದುಹಾಕುವ ಭರವಸೆ: ಮಹಾರಾಷ್ಟ್ರದಲ್ಲಿ ಕಳೆದ ಎರಡು ವರ್ಷಗಳಿಂದ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಈಚೆಗೆ ಹಲವು ಸಮುದಾಯಗಳು ಬಿಜೆಪಿಯ ಮೇಲೆ ಇದೇ ಕಾರಣಕ್ಕೆ ಮುನಿಸಿಕೊಂಡಿವೆ. ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಈ ವಿಷಯವನ್ನೇ ಪ್ರಧಾನವನ್ನಾಗಿ ಇರಿಸಿಕೊಂಡಿದೆ. ಕಾಂಗ್ರೆಸ್ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದರೆ, ಶೇ 50ರಷ್ಟು ಮೀಸಲಾತಿಯನ್ನು ತೆಗೆದು ಹಾಕಲಾಗುವುದು ಎಂದು ಭರವಸೆ ನೀಡಿದೆ. ಇನ್ನು ಮಹಾವಿಕಾಸ್ ಅಘಾಡಿಯ ಪ್ರಣಾಳಿಕೆಗೆ ಮಹಾರಾಷ್ಟ್ರ ನಾಮ ಎಂದು ಹೆಸರಿಡಲಾಗಿದೆ.
ಐದು ಕ್ಷೇತ್ರಗಳ ಮೇಲೆ ಗಮನ: ಇನ್ನು ಮಹಾರಾಷ್ಟ್ರದಲ್ಲಿ ಐದು ಪ್ರಮುಖ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಮೈತ್ರಿ ಒಕ್ಕೂಟ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದ ಪ್ರಧಾನ ಕ್ಷೇತ್ರವಾದ ಕೃಷಿ ಇದೆ. ಅಲ್ಲದೇ ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಮತ್ತು ಉದ್ಯೋಗ, ನಗರಾಭಿವೃದ್ಧಿ, ಪರಿಸರ ಹಾಗೂ ಸಾರ್ವಜನಿಕ ಕಲ್ಯಾಣ ವಿಷಯಗಳನ್ನು ಪ್ರಧಾನವನ್ನಾಗಿ ಇರಿಸಿಕೊಂಡಿದೆ. ಮಹಾರಾಷ್ಟ್ರಕ್ಕಾಗಿ ನಾವು ಐದು ಆಧಾರ ಸ್ತಂಭಗಳನ್ನು ರಚಿಸಲಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ನೀಡಿರುವ ಪ್ರಮುಖ ಗ್ಯಾರಂಟಿ ಹಾಗೂ ಪ್ರಣಾಳಿಕೆಯ ಭರವಸೆ ಇಲ್ಲಿದೆ.
* ನಿರುದ್ಯೋಗಿ ಯುವಕರಿಗೆ ಮಾಸಿಕ 4000 ರೂಪಾಯಿ
* ಆರೋಗ್ಯ ವಿಮಾ ಯೋಜನೆ 25 ಲಕ್ಷ ರೂಪಾಯಿ
* ಉಚಿತವಾಗಿ ಔಷಧ ನೀಡುವ ಭರವಸೆ
* ಮಹಾರಾಷ್ಟ್ರದಲ್ಲಿ ಜಾತಿ ಗಣತಿ
* ಮೀಸಲಾತಿ ಮೇಲಿನ 50% ಮಿತಿ ತೆಗೆದುಹಾಕಲಾಗುವುದು
* ಮಹಾಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ
* ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಸೇವೆ












Click it and Unblock the Notifications