Maharashtra Assembly Elections 2024: ಮಹಾರಾಷ್ಟ್ರದಲ್ಲಿ ಈ ಮೈತ್ರಿಕೂಟಕ್ಕೆ ಅಧಿಕಾರ ಗದ್ದುಗೆ: ಸಮೀಕ್ಷೆ
ಬೆಂಗಳೂರು, ನವೆಂಬರ್ 11: ಮಹಾರಾಷ್ಟ್ರದ ಎಲ್ಲ 288 ವಿಧಾನಸಭಾ ಚುನಾವಣೆ 2024 ಇದೇ ನವೆಂಬರ್ 20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಮಧ್ಯೆ ಮಹತ್ವ ಸಮೀಕ್ಷಾ ವರದಿಯೊಂದು ಪ್ರಟಕಗೊಂಡಿದ್ದು, ಇದರಲ್ಲಿ ಬಿಜೆಪಿ ಮೈತ್ರಿಕೂಟ ಮಹಾಯುತಿ ಭರ್ಜರಿ ಗೆಲುವು ದಾಖಲಿಸಿದೆ ಎಂದು ಭವಿಷ್ಯ ನುಡಿದಿದೆ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮಹಾಯತಿಗೆ (ಬಿಜೆಪಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ- ಅಜಿತ್ ಪವಾರ್ ಬಣ-), ಶಿವಸೇನಾ (ಏಕ್‌ನಾಥ್ ಶಿಂಧೆ ಬಣ) ಮಹಾರಾಷ್ಟ್ರ ರಾಜ್ಯದಲ್ಲಿ ಗೆಲುವು ಸಿಗಲಿದೆ.

ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿಲ ಮಹಾಯುತಿ ಮೈತ್ರಿಕೂಟಕ್ಕೆ 145 ರಿಂದ 165 ಸ್ಥಾನಗಳಲ್ಲಿ ವಿಜಯ ಸಾಧಿಸುವ ಮೂಲಕ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಮ್ಯಾಟ್ರಿಜ್ ಸಮೀಕ್ಷೆಯ ವರದಿ ಮಾಹಿತಿ ನೀಡಿದೆ.
ಮಹಾಯುತಿಗೆ ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿಗೆ (ಕಾಂಗ್ರೆಸ್, ಶಿವಸೇನೆ (ಯುಬಿಟಿ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್ ಬಣ, ಬಣ, ಉದ್ಧವ್ ಠಾಕ್ರೆ) ಸರಿಸುಮಾರು 106 ರಿಂದ 126 ಸೀಟುಗಳು ಬರಲಿವೆ ಎಂದು ಈ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.
ಪ್ರಸಕ್ತ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟ, ಮಹಾಯುತಿ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಮ್ಯಾಟ್ರಿಜ್ ಸಂಸ್ಥೆಯು ಕಳೆದ ಅಕ್ಟೋಬರ್ 10 ಮತ್ತು ನವೆಂಬರ್ 9ರವರೆಗೆ ಒಟ್ಟು 109,000 ಕ್ಕೂ ಹೆಚ್ಚು ಮಂದಿಯ ಪ್ರತಿಕ್ರಿಯೆ ಸಂಗ್ರಹಿಸಿ, ಅಭಿಪ್ರಾಯ ಪರಿಶೀಲಿಸಿ ಸಮೀಕ್ಷೆ ಬಿಡುಗಡೆ ಮಾಡಿದೆ.
ಒಟ್ಟಾರೆ ಮತದಾರರ ಪ್ರಮಾಣದಲ್ಲಿ ನೋಡುವುದಾದರೆ, ಮಹಾವಿಕಾಸ ಆಘಾಡಿಯು ಶೇಕಡಾ 41ರಷ್ಟು ಮತಗಳನ್ನು ಪಡೆದರೆ, ಮಹಾಯುತಿಯು ಸುಮಾರು ಶೇಖಡಾ 47 ರಷ್ಟು ಮತಗಳು ಗಳಿಸಲಿದೆ. ಸಣ್ಣ ಸಣ್ಣ ಪಕ್ಷಗಳು ಸಹಿತ ಒಟ್ಟು ಶೇಕಡಾ 12ರಷ್ಟು ಮತಗಳನ್ನು ಸಂಗ್ರಹಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.
ಬಿಜೆಪಿ ನೇತೃತ್ವದ ಮಹಾಯುತಿಗೆ ಪಶ್ಚಿಮ ಮಹಾರಾಷ್ಟ್ರದಲ್ಲಿ ಶೇಕಡಾ 48, ವಿದರ್ಭ ಶೇಕಡಾ 48, ಮುಂಬೈನ ಥಾಣೆ ಸೇರಿ ಕೊಂಕಣದಲ್ಲಿ ಶೇಕಡಾ 52 ರಷ್ಟು ಅತ್ಯಧಿಕ ಬೆಂಬಲ ಸಿಗಲಿದೆ. ಇತ್ತ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಗೆ (MVA) ಉತ್ತರ ಮಹಾರಾಷ್ಟ್ರ ಶೇಕಡಾ 47ರಷ್ಟು, ಮರಾಠವಾಡದಲ್ಲಿ ಶೇಕಡಾ 44ರಷ್ಟು ರಷ್ಟು ಮತ ಹಂಚಿಕೆ ಆಗಲಿವೆ. ಈ ಮೂಲಕ ಬಿಜೆಪಿಗೆ ಟಕ್ಕರ್, ತೀವ್ರ ಪೈಪೋಟಿ ನೀಡಲಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.
ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ಎದರುಸುವ ಮಹಾರಾಷ್ಟ್ರದಲ್ಲಿ ನವೆಂಬರ್ 23 ಚುನಾವಣೆ ಆಯೋಗದಿಂದ ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications