ಈ ಕ್ರಿಕೆಟ್ ಟೂರ್ನಿ ಗೆದ್ದೋರಿಗೆ ಮೇಕೆ, ಸೋತವರಿಗೆ ಹುಂಜ!
ಪಂದ್ಯಾವಳಿ ಗೆದ್ದ ಚಾಂಪಿಯನ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ಮೇಕೆಯನ್ನು ಉಡುಗೊರೆಯಾಗಿ ನೀಡಲಾಗಿದ್ದರೆ, ಫೈನಲ್ ನಲ್ಲಿ ಸೋತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಹುಂಜವನ್ನು ಬಹುಮಾನವಾಗಿ ನೀಡಲಾಗಿದೆ.
ಮುಂಬೈ, ಮಾರ್ಚ್ 23: ಖಂಡಿತವಾಗಿಯೂ ಈ ಸುದ್ದಿ ನಿಮಗೆ funny ಅನ್ನಿಸಬಹುದು. ಆದರೆ, ಇದು ಖಂಡಿತವಾಗಿಯೂ ನಿಜ.
ಕ್ರಿಕೆಟ್ ಆಗಲೀ, ಯಾವುದೇ ಕ್ರೀಡಾ ಟೂರ್ನಿಯಾಗಲೀ ಗೆದ್ದ ತಂಡವು ಪಾರಿತೋಷಕ ಅಥವಾ ನಗದು ಬಹುಮಾನ ಅಥವಾ ಇವೆರಡನ್ನೂ ಪಡೆಯುವುದು ವಾಡಿಕೆ.

ಆದರೆ, ಮಹಾರಾಷ್ಟ್ರದ ಪಾಲ್ ಗಢ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡದ ಪ್ರತಿಯೊಬ್ಬ ಆಟಗಾರನಿಗೆ ಮೇಕೆ ಹಾಗೂ ರನ್ನರ್ ಅಪ್ ಆಗುವ ತಂಡದ ಪ್ರತಿ ಆಟಗಾರನಿಗೆ ಹುಂಜವನ್ನು ಆಯೋಜಕರು ನೀಡಿದ್ದಾರೆ.
ಇಷ್ಟೇ ಅಲ್ಲ, ಉತ್ತಮವಾಗಿ ಆಟ ತೋರುವ ಆಟಗಾರನಿಗೆ ಹಾಗೂ ಬೌಂಡರಿ, ಸಿಕ್ಸರ್ ಸಿಡಿಸುವ ಆಟಗಾರನಿಗೆ ಎಷ್ಟು ಬೌಂಡರಿ, ಸಿಕ್ಸರ್ ಸಿಡಿಸುತ್ತಾರೋ ಅಷ್ಟು ಬೇಯಿಸಿದ ಮೊಟ್ಟೆಗಳನ್ನು ನೀಡಲಾಗಿದೆ.
ಇನ್ನು, ಪಂದ್ಯಗಳನ್ನು ನೋಡ ಬರುವ ಪ್ರೇಕ್ಷಕರ ಮನಸ್ಸನ್ನೂ ಮುದಗೊಳಿಸಲಾಗಿದೆ. ಅವರಿಗೊ ಪಂದ್ಯದ ಸಮಯದಲ್ಲಿ ಬೇಯಿಸಿದ ಮೊಟ್ಟೆ ನೀಡಲಾಗಿದೆ. ಇದೆಲ್ಲವನ್ನೂ ನೋಡಿದರೆ, ಇದು ನಾನ್ವೆಜ್ ಪ್ರಿಯರಿಗಾಗಿ ಆಯೋಜಿಸಲಾಗಿದ್ದ ಪಂದ್ಯಾವಳಿಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ?












Click it and Unblock the Notifications