Condom in Samosa: ಸಮೋಸಾ ಪ್ರಿಯರೇ ಎಚ್ಚರ! ಸಮೋಸಾದಲ್ಲಿ ಕಾಂಡೋಮ್, ಕಲ್ಲು, ತಂಬಾಕು, ಗುಟ್ಕಾ ಪತ್ತೆ!
ಪುಣೆ ಏಪ್ರಿಲ್ 9: ಮಹಾರಾಷ್ಟ್ರದ ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿರುವ (Pimpri Chinchwad) ಪ್ರತಿಷ್ಠಿತ ಆಟೋಮೊಬೈಲ್ ಕಂಪನಿಯ ಕ್ಯಾಂಟೀನ್‌ನಲ್ಲಿ ನೀಡಲಾದ ಸಮೋಸಾಗಳಲ್ಲಿ ಕಾಂಡೋಮ್, ಕಲ್ಲು, ತಂಬಾಕು, ಗುಟ್ಕಾ ಇತ್ಯಾದಿಗಳು ಕಂಡುಬಂದಿವೆ.
ಕಂಪನಿಯೊಂದರ ಉದ್ಯೋಗಿಗಳು ಸಮೋಸಾವನ್ನು ಸೇವಿಸುವಾಗ ಈ ವಸ್ತುಗಳು ಕಂಡು ಬಂದಿವೆ. ತಕ್ಷಣ ಪೊಲೀಸ್‌ರಿಗೆ ಈ ಬಗ್ಗೆ ದೂರು ನೀಡಲಾಗಿದ್ದು ವಿಚಾರಣೆ ವೇಳೆ ಭಯಾನಕ ಸತ್ಯ ಬಯಲಾಗಿದೆ. ಘಟನೆ ಬಳಿಕ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಹೊಸ ಗುತ್ತಿಗೆದಾರರಿಂದ ಅಡುಗೆ ಗುತ್ತಿಗೆ ಪಡೆಯುವುದನ್ನು ತಪ್ಪಿಸಲು ಉದ್ಯಮಿಯೊಬ್ಬರು ಈ ಭೀಕರ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಸೇಡಿಗಾಗಿ ಸಮೋಸಾದಲ್ಲಿ ಕಾಂಡೋಮ್ ಹಾಕಿದ ಪಾಪಿಗಳು:-
ಕ್ಯಾಂಟೀನ್ ಗುತ್ತಿಗೆ ರದ್ದುಪಡಿಸಿದ್ದರಿಂದ ಆರೋಪಿ ರಹೀಮ್ ಶೇಖ್ ಕೋಪಗೊಂಡಿದ್ದ ಎನ್ನಲಾಗಿದೆ. ಕ್ಯಾಟಲಿಸ್ಟ್ ಸರ್ವಿಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಆಟೋಮೊಬೈಲ್ ಸಂಸ್ಥೆಯ ಪ್ರಕಾರ, ಸಮೋಸಾದ ಗುತ್ತಿಗೆಯನ್ನು ಎಸ್‌ಆರ್‌ಎಸ್ ಎಂಟರ್‌ಪ್ರೈಸಸ್ ಎಂಬ ಕಂಪನಿಗೆ ನೀಡಲಾಯಿತು. ಈ ಕಂಪನಿ ಸಮೋಸಾಗಳನ್ನು ಪೂರೈಸಿದಾಗ ಒಂದು ದಿನ ಬ್ಯಾಂಡೇಜ್ ಅದರಲ್ಲಿ ಪತ್ತೆಯಾಗಿತ್ತು. ಇದರ ನಂತರ ಈ ಕಂಪನಿಯೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಲಾಯಿತು.
ಏನಿದು ಘಟನೆ?
ಇದಾದ ನಂತರ ಮತ್ತೊಂದು ಕಂಪನಿ ಮನೋಹರ್ ಎಂಟರ್ ಪ್ರೈಸಸ್ ಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆಯನ್ನು ಬೇರೆ ಕಂಪನಿಗೆ ನೀಡಿರುವುದರಿಂದ ಕುಪಿತಗೊಂಡ ರಹೀಮ್ ಶೇಖ್, ಕಂಪನಿಯ ಮಾಲೀಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು. ರಹೀಮ್ ಶೇಖ್ ತನ್ನ ಇಬ್ಬರು ಉದ್ಯೋಗಿಗಳನ್ನು ಮನೋಹರ್ ಎಂಟರ್‌ಪ್ರೈಸಸ್‌ನ ಕ್ಯಾಂಟೀನ್‌ಗೆ ಸೇರಿಸಿದರು.

ಈ ಉದ್ಯೋಗಿಗಳಾದ ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಅವರು ಕಾಂಡೋಮ್, ತಂಬಾಕು ಮತ್ತು ಕಲ್ಲುಗಳನ್ನು ಒಳಗೊಂಡಿರುವ ಸಮೋಸಾಗಳನ್ನು ಸಿದ್ಧಪಡಿಸಿದ್ದಾರೆ. ಸಮೋಸಾಗಳನ್ನು ತಿನ್ನುವಾಗ ಅದರಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ. ಇದಾದ ಬಳಿಕ ದೂರು ದಾಖಲಾಗಿದೆ.
ಪೊಲೀಸ್ ಹೇಳಿಕೆ-
ನಾವು ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 328 (ವಿಷದಿಂದ ಆಹಾರ ತಯಾರಿಕೆ) ಮತ್ತು 120 ಬಿ (ಅಪರಾಧ ಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಚಿಖ್ಲಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಆರೋಪಿಗಳಿಬ್ಬರೂ ತಾವು ಎಸ್‌ಆರ್‌ಎಸ್ ಎಂಟರ್‌ಪ್ರೈಸಸ್‌ನ ಉದ್ಯೋಗಿಗಳಾಗಿದ್ದು, ಅವರ ಮಾಲೀಕರು ಮನೋಹರ್ ಎಂಟರ್‌ಪ್ರೈಸಸ್ ಪೂರೈಸುವ ಆಹಾರದಲ್ಲಿ ಕಲಬೆರಕೆ ಮಾಡಲು ನಮ್ಮನ್ನು ಕಳುಹಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಘಟನೆಯಲ್ಲಿ ರಹೀಮ್ ಶೇಖ್, ಅಜರ್ ಶೇಖ್ ಮತ್ತು ಮಝರ್ ಶೇಖ್ ಆರೋಪಿಗಳು ಎಂದು ಗುರುತಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯಲ್ಲಿ ತೊಡಗಿದ್ದಾರೆ.
ಇಂತಹದ್ದೇ ಘಟನೆ-
ಈ ಘಟನೆಯು ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ದಂಕೌರ್‌ನಲ್ಲಿರುವ ದ್ರೋಣಾಚಾರ್ಯ ಪದವಿ ಕಾಲೇಜಿನ ಸುಮಾರು 20 ಶಿಕ್ಷಕರು ಹೊಸ ವರ್ಷದ ಮುನ್ನಾದಿನದ ಆಚರಣೆಯ ಸಂದರ್ಭದಲ್ಲಿ ಸ್ಥಳೀಯ ಸಿಹಿತಿಂಡಿಯೊಂದಿಗೆ ಸಮೋಸವನ್ನು ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾದ ಇದೇ ರೀತಿಯ ಆತಂಕಕಾರಿ ಘಟನೆಯನ್ನು ನೆನಪಿಸುತ್ತದೆ. ನಂತರದ ತನಿಖೆಯಲ್ಲಿ ಸಮೋಸಾಗಳು ಹಳಸಿದವುಗಳಲ್ಲದೆ ವಿಷಕಾರಿ ಹುಳುಗಳನ್ನು ಒಳಗೊಂಡಿದ್ದವು ಎಂದು ತಿಳಿದುಬಂದಿದೆ.












Click it and Unblock the Notifications