Get Updates
Get notified of breaking news, exclusive insights, and must-see stories!

Video: ರಿಕ್ಷಾ ಜೊತೆ ಯುವತಿಯನ್ನೇ ಎಳೆದೊಯ್ದ ಆಟೋ ಚಾಲಕ!

ಮುಂಬೈ, ಅಕ್ಟೋಬರ್ 15: ಮಾನವೀಯ ಸಮಾಜದಲ್ಲಿ ಬರುಬರುತ್ತಾ ಮನುಷ್ಯನಲ್ಲಿ ಮಾನವೀಯತೆಯೇ ಮರೆಯಾಗುತ್ತಿದೆಯಾ ಎಂಬ ಅನುಮಾನವನ್ನು ಹುಟ್ಟಿಸುವ ವಿಚಿತ್ರ ಘಟನೆಗಳು ನಡೆಯುತ್ತಿವೆ. ಅಂಥದ್ದೇ ಒಂದು ಘಟನೆಗೆ ಮಹಾರಾಷ್ಟ್ರದ ಥಾಣೆ ಸಾಕ್ಷಿಯಾಗಿದೆ.

ಕಳೆದ ಅಕ್ಟೋಬರ್ 14ರ ಶುಕ್ರವಾರ ಮುಂಜಾನೆ ಮಹಾರಾಷ್ಟ್ರದ ಥಾಣೆಯಲ್ಲಿ 21 ವರ್ಷದ ಮಹಿಳೆಯೊಬ್ಬರನ್ನು ಆಟೋ ರಿಕ್ಷಾ ಚಾಲಕನು ನಿರ್ದಯವಾಗಿ ಕಿರುಕುಳಕ್ಕೆ ಒಳಪಡಿಸಿರುವ ಘಟನೆ ನಡೆದಿದೆ. ಈ ಮಹಿಳೆಯನ್ನು ಆಟೋರಿಕ್ಷಾದೊಂದಿಗೆ ಎಳೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 6.45ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆಯನ್ನು ಆಟೋರಿಕ್ಷಾ ಚಾಲಕನು ವಾಹನದೊಂದಿಗೆ ಎಳೆದುಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

 Maharashtra: College Girl Molested dragged for 500 meters by Auto rickshaw driver in Thane

ಮಹಿಳೆಯ ಮೇಲೆ ಆಟೋ ಚಾಲಕನ ದೌರ್ಜನ್ಯ:

ಸಂತ್ರಸ್ತೆಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಆಕೆ ಕಾಲೇಜಿಗೆ ತೆರಳುತ್ತಿದ್ದ ವೇಳೆ ಆರೋಪಿಯು ಕಿರುಕುಳ ನೀಡಿದ್ದಾನೆ ಎಂದು ಗೊತ್ತಾಗಿದೆ. ಹಿರಿಯ ಇನ್ಸ್‌ಪೆಕ್ಟರ್ ಜೈರಾಜ್ ರಾಣಾವರೆ ಪ್ರಕಾರ, ಆಟೋ ಚಾಲಕನು ಆಕೆಯ ಬಗ್ಗೆ ಕೆಲವು ಟೀಕೆಗಳನ್ನು ಮಾಡಿದ್ದಾನೆ. ಮಹಿಳೆ ಅವನನ್ನು ಪ್ರಶ್ನಿಸಿದಾಗ, ಅವನು ಅವಳ ಕೈಯನ್ನು ಹಿಡಿದು ಎಳೆದನು. ತ್ರಿಚಕ್ರ ವಾಹನವನ್ನು ಚಲಾಯಿಸಲು ಪ್ರಾರಂಭಿಸಿದ ಸಂದರ್ಭದಲ್ಲಿ ಚಾಲಕನು ಆಕೆಯ ಕೈ ಬಿಡುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೂ, ಆಕೆಯೇ ಚಾಲಕನ ಕೈ ಹಿಡಿದುಕೊಂಡಿದ್ದಳು ಎಂದು ಚಾಲಕನು ಆರೋಪಿಸಿದ್ದಾನೆ, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 Maharashtra: College Girl Molested dragged for 500 meters by Auto rickshaw driver in Thane

ಸಿಸಿ ಟಿವಿ ವಿಡಿಯೋದಲ್ಲಿ ಏನಿದೆ?:

ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಪ್ರಕಾರ, ಆಟೋ ಚಾಲಕನು ಮಹಿಳೆಯನ್ನು ವಾಹನದೊಂದಿಗೆ ಸುಮಾರು 500 ಮೀಟರ್ ಎಳೆದೊಯ್ದಿದ್ದಾನೆ. ಬಳಿಕ ಆಕೆ ಬಿದ್ದಿದ್ದು, ಆರೋಪಿ ಪರಾರಿಯಾಗಿದ್ದನು. ಈ ಸಂಬಂಧ ಆಟೋ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಆಟೋ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+