Get Updates
Get notified of breaking news, exclusive insights, and must-see stories!

Mahakumbh Mela Stampede: ಮಹಾ ಕುಂಭಮೇಳ ಕಾಲ್ತುಳಿತ ದುರಂತ: ಒಂದೇ ಜಿಲ್ಲೆಯ ನಾಲ್ವರು ಕನ್ನಡಿಗರ ಸಾವು!

ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಅವಘಡ ಸಂಭವಿಸಿದ್ದು. ಈ ದುರಂತದಲ್ಲಿ ಕನ್ನಡಿಗರು ಸಹ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೆ ಒಮ್ಮೆ ಈ ಮಹಾ ಕುಂಭಮೇಳ ನಡೆಯುತ್ತದೆ. ಈ ಬಾರಿಯೂ ಮಹಾ ಕುಂಭಮೇಳಕ್ಕೆ ಕೋಟ್ಯಾಂತರ ಜನ ಸೇರಿದ್ದಾರೆ. ಮಂಗಳವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಈ ದುರಂತದಲ್ಲಿ ಕರ್ನಾಟಕದ ನಾಲ್ವರು ದಾರುಣ ಸಾವನ್ನಪ್ಪಿರುವುದು ವರದಿಯಾಗಿದೆ. ಕುಂಭಮೇಳದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಸಹಾಯವಾಣಿಯನ್ನು ಪ್ರಾರಂಭಿಸಿದೆ. ಅಲ್ಲದೆ ಕನ್ನಡಿಗರ ಪರಿಸ್ಥಿತಿಯ ಬಗ್ಗೆ ತಿಳಿಸುವಂತೆ ಉತ್ತರ ಪ್ರದೇಶದ ಸರ್ಕಾರಕ್ಕೆ ಕರ್ನಾಟಕ ಸರ್ಕಾರವು ಪತ್ರ ಸಹ ಬರೆದಿದೆ. ಇನ್ನು ಈ ದುರಂತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ತಡರಾತ್ರಿ ಜನಸಂದಣಿಯಿಂದ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಹಲವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ನಿಖರ ಸಂಖ್ಯೆ ಇನ್ನಷ್ಟೇ ಬರಬೇಕಿದೆ.

ಮಹಾ ಕುಂಭಮೇಳಕ್ಕೆ ಕರ್ನಾಟಕದಿಂದಲೂ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು. ಶತಮಾನಗಳಿಗೆ ಒಮ್ಮೆ ಮಾತ್ರ ನಡೆಯುವ ಈ ಮೇಳದಲ್ಲಿ ಭಾಗವಹಿಸಬೇಕು ಎನ್ನುವ ಆಸೆಯಿಂದ ಭಾಗಿಯಾಗಿದ್ದ ಕನ್ನಡಿಗರಿಗೆ ಆಘಾತ ಎದುರಾಗಿದೆ. ಈ ಕಾಲ್ತುಳಿತ ದುರಂತದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ನಾಲ್ವರು ಮೃತಪಟ್ಟಿರುವುದು ದೃಢಪಟ್ಟಿದೆ.

Mahakumbh Mela Stampede Tragedy 4 Kannadigas Die form Karnataka Belagavi

ಈ ಕುಂಭಮೇಳಕ್ಕೆ ಕರ್ನಾಟಕದಿಂದಲೂ ಸಾವಿರಾರು ಜನ ಭಾಗವಹಿಸಿದ್ದರು. ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ. ಆದರೆ, ಇದರಲ್ಲಿ ಇನ್ನೆಷ್ಟು ಜನ ಕನ್ನಡಿಗರು ಗಾಯಗೊಂಡಿದ್ದಾರೆ. ಇಲ್ಲವೇ ಪ್ರಾಣಾಪಾಯವೇನಾದರೂ ಸಂಭವಿಸಿದೆಯೇ ಎನ್ನುವ ನಿಖರ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ನಾಲ್ವರು ಕನ್ನಡಿಗರ ಸಾವು: ಇನ್ನು ಉತ್ತರ ಪ್ರದೇಶದ ಮಹಾಕುಂಭ ಮೇಳದಲ್ಲಿ ಪವಿತ್ರ ಪುಣ್ಯ ಸ್ನಾನ ಮಾಡುವಾಗ ನಾಲ್ವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಕುಂಭಮೇಳದಲ್ಲಿ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಕಾಲ್ತುಳಿತದ ನಂತರ ಬುಧವಾರ ಬೆಳಗ್ಗೆ ಪ್ರಯಾಗ್‌ರಾಜ್‌ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಳಗಾವಿಯ ನಿವಾಸಿಗಳಾದ ತಾಯಿ - ಮಗಳು, ಜ್ಯೋತಿ ಹತ್ತರವಾಠ್ ಹಾಗೂ ಮೇಘಾ ಹತ್ತರವಾಠ್ ಎನ್ನುವವರು ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ಜ್ಯೋತಿ ಸಹೋದರ ಗುರುರಾಜ್ ಅವರು ಹೇಳಿದ್ದಾರೆ. 13 ಜನರ ತಂಡದೊಂದಿಗೆ ಇವರು ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದರು.

Mahakumbh Mela Stampede Tragedy 4 Kannadigas Die form Karnataka Belagavi

ಬೆಳಗಾವಿಯ ಮತ್ತೋರ್ವ ನಿವಾಸಿ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಲ್ಲಿನ ಶೆಟ್ಟಿ ಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಅವರು ಸಹ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಅಲ್ಲದೆ ಅವರ ಪತ್ನಿ ಕಾಂಚನಾ ಕೋಪರ್ಡೆ ಎನ್ನುವವರಿಗೆ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸಂಜೆಯ ವೇಳೆಗೆ ನಾಲ್ವರು ಮೃತಪಟ್ಟಿರುವುದು ವರದಿಯಾಗಿದೆ. ಬೆಳಗಾವಿಯ ಶಿವಾಜಿ ನಗರದ ನಿವಾಸಿ ಮಹಾದೇವಿ ಬಾವನೂರ ಅವರು ಸಾವನ್ನಪ್ಪಿದ್ದಾರೆ. ಇವರು ಮಂಗಳವಾರ ಪುಣ್ಯ ಸ್ನಾನ ಮಾಡಲು ಹೋಗುವಾಗ ಕಾಲ್ತುಳಿತದಲ್ಲಿ ಸಿಕ್ಕು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಅಧಿಕಾರಿಗಳೊಂದಿಗೆ ಸಂಪರ್ಕ: ಇನ್ನು ಬೆಳಗಾವಿಯಿಂದ ಹೋಗಿರುವ ಹಲವರು ಮಿಸ್ಸಿಂಗ್‌ ಆಗಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ. ಈ ಸಂಬಂಧ ಉತ್ತರ ಪ್ರದೇಶದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಬೆಳಗಾವಿ ಜಿಲ್ಲಾಧಿಕಾರಿ‌ ಮೊಹಮ್ಮದ್‌ ರೋಷನ್ ಅವರು ಹೇಳಿದ್ದಾರೆ.

ಮಿಸ್ಸಿಂಗ್ ಪ್ರಕರಣ ಈ ವರೆಗೆ ವರದಿ ಆಗಿಲ್ಲ. ನಾವು 24ಗಂಟೆ ವರೆಗೆ ಕಾಯುತ್ತೇವೆ. ಅಲ್ಲದೆ ಉತ್ತರ ಪ್ರದೇಶದ ಐಎಎಸ್ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದೇವೆ. ಜಿಲ್ಲಾಡಳಿತದಿಂದ ಯಾವುದೇ ಸಹಾಯ ಬೇಕು ಎಂದರೂ ಮಾಡಲು ಸಿದ್ಧವಿದ್ದೇವೆ. ಜನಸಂಖ್ಯೆ ಹೆಚ್ಚು ಇರೋ ಕಾರಣಕ್ಕೆ ಹುಡುಕುವುದು ಕಷ್ಟ ಆಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳಿಗೆ ಹೋಗುವವರಿಗೆ ಗೈಡ್‌ಲೈನ್ಸ್‌ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಬೆಳಗಾವಿಯಿಂದ ಮಹಾಕುಂಭ ಮೇಳಕ್ಕೆ ಹೋಗಿದ್ದು ಆತಂಕ ಎದುರಾಗಿದ್ದರೆ ಕುಟುಂಬಸ್ಥರು ಡಿಸಿ ಕಚೇರಿಗೆ ಸಂಪರ್ಕ ಮಾಡಬಹುದು. ಅಲ್ಲಿಂದ ಬರುವುದಕ್ಕೆ ಸಮಸ್ಯೆ ಆಗುತ್ತಿದ್ದರೆ ಜಿಲ್ಲಾಡಳಿತದಿಂದ ಪರಿಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+