ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಭೂಕಂಪಕ್ಕೆ ತುತ್ತಾಗಲಿದೆಯೇ ಭಾರತ-ಬಾಂಗ್ಲಾ?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ನ್ಯೂಯಾರ್ಕ್, ಜುಲೈ, 12: ಮತ್ತೊಂದು ಭೀಕರ ಭೂಕಂಪ ಎದುರಿಸಲು ಪ್ರಪಂಚ ಸಿದ್ಧವಾಗಬೇಕಿದೆಯೆ? ವಿಜ್ಞಾನಿಗಳು ನೀಡಿರುವ ಎಚ್ಚರಿಕೆ ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿದೆ.

ಬಾಂಗ್ಲಾದೇಶ ಮತ್ತು ಅದಕ್ಕೆ ತಾಗಿಕೊಂಡಿರುವ ಭಾರತದಲ್ಲಿ 9 ಮ್ಯಾಗ್ನಿಟ್ಯೂಡ್ ನಷ್ಟು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.[ಕಣ್ಣು ಕಾಣದ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ]

earthquake

ಗಂಗಾ ಮತ್ತು ಬ್ರಹ್ಮಪುತ್ರಾ ನದಿಯ ಇಕ್ಕೆಲಗಳು ನಿಸರ್ಗದ ಈ ಘೋರ ಅವತಾರಕ್ಕೆ ಸಾಕ್ಷಿಯಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿರುವ 140 ಮಿಲಿಯನ್ ಜನ ಅಪಾಯಕ್ಕೆ ತುತ್ತಾಗಬಹುದು. ಇದೊಂದು ರೀತಿಯ ಭೂಮಿಯ ಅಡಿಯಿಂದ ಎದುರಾಗಿರುವ ಆತಂಕ ಎಂದು ಹೇಳಿದ್ದಾರೆ.[ಭವಿಷ್ಯ: ಭೂಮಂಡಲಕ್ಕೆ ಎದುರಾಗಲಿದೆ 68 ದಿನಗಳ ಗಂಡಾಂತರ!]

ಕೋಲಂಬಿಯಾ ಯುನಿವರ್ಸಿಟಿಯ ಭೂವಿಜ್ಞಾನಿ ಮೈಕಲ್ ಸ್ಟೇಕ್ಲರ್ ಹೇಳುವಂತೆ 'ಹಲವಾರು ಸಂಶೋಧಕರು ಸಂಭವಿಸಬಹುದಾದ ಭೀಕರ ಅನಾಹುತದ ಬಗ್ಗೆ ಹೇಳಿದ್ದಾರೆ. ಆದರೆ ಇದರ ಸ್ಪಷ್ಟ ಚಿತ್ರಣ ನಮಗೆ ಸಿಗುತ್ತಿಲ್ಲ, ಡಾಟಾ ಕಲೆಹಾಕುವ ಕೆಲಸ ನಡೆಯುತ್ತಿದೆ' ಎಂದಿದ್ದಾರೆ.

400 ವರ್ಷಗಳಿಂದ ಕೂಡಿಕೊಂಡಿರುವ ಭೂಮಿ ಪದರಗಳು ಸರಿಯುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದರೆ 8.2 ಮಾಗ್ನಿಟ್ಯೂಡ್ ಗಿಂತ ಹೆಚ್ಚಿನ ಭೂಕಂಪ ಉಂಟಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.[450 ವರ್ಷಗಳ ಹಿಂದೆ ಮೋದಿ ಬಗ್ಗೆ ನಾಸ್ಟ್ರಡಾಮಸ್ ನುಡಿದಿದ್ದ ಭವಿಷ್ಯ!]

ಭೀಕರ ಭೂಕಂಪ ಸಂಭವಿಸಿದರೆ ಭಾರತದ ಪೂರ್ವ ಭಾಗ, ಬಾಂಗ್ಲಾದೇಶ ಮತ್ತು ಮಯನ್ಮಾರ್ ಸಂಪೂರ್ಣ ವಿನಾಶಕ್ಕೆ ತುತ್ತಾಗುವುದರಲ್ಲಿ ಅನುಮಾನವಿಲ್ಲ. ಹಿಂದೆ ಪ್ರಪಂಚವನ್ನೇ ನಡುಗಿಸಿದ್ದ ಸುನಾಮಿ ಮತ್ತೆ ಎದ್ದರೂ ಆಶ್ಚರ್ಯ ಪಡಬೇಕಾಗಿಲ್ಲ.

ವಿಜ್ಞಾನಿಗಳ ಇಂಥ ಸಂಶೋಧನೆ ಸುಳ್ಳಾಗಲಿ. ಪ್ರಪಂಚದ ಯಾವ ಭಾಗಕ್ಕೂ ಜೀವ ಸಂಕುಲಕ್ಕೂ ಹಾನಿಯಾಗದಿರಲಿ ಎಂಬುದಷ್ಟನ್ನೇ ನಾವು ಬೇಡಿಕೊಳ್ಳಲು ಸಾಧ್ಯ.

English summary
Bangladesh and its neighbourhood including India may be hit by a huge earthquake - although not imminent - that could reach a magnitude of nine, researchers have warned. The scientists said they have new evidence of increasing strain building beneath Bangladesh where two tectonic plates underlie the vast delta of the Ganges and Brahmaputra rivers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X