ಮಹಿಳಾ ಪೊಲೀಸ್ ಪೇದೆಗೆ ಲಿಂಗ ಬದಲಾವಣೆಗೆ ಅವಕಾಶ ನೀಡಿದ ಸರ್ಕಾರ

ಭೋಪಾಲ್, ಆಗಸ್ಟ್ 17: ಮನುಷ್ಯನಿಗೆ ಇರವಂತಹ ಆಸೆಗಳಿಗೆ ಮೀತಿಯೆ ಇಲ್ಲದಾಗಿದೆ. ಇತ್ತೀಚೆಗೆ ವಿದೇಶದಲ್ಲೊಬ್ಬ ವ್ಯಕ್ತಿ ನಾಯಿ ಆಗುವ ಆಸೆ ಕಂಡಿದ್ದ. ಇದೀಗ ಮಹಿಳಾ ಪೊಲೀಸ್ ಪೇದೆ ಪುರುಷನಾಗಲು ಬಯಸಿ ಸರ್ಕಾರದಿಂದಲೇ ಅನುಮತಿ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಹಿಳಾ ಪೊಲೀಸ್ ಕಾನ್ಸ್ ಟೆಬಲ್‌ವೊಬ್ಬರು ಪುರುಷನಾಗಿ ಬದಲಾಗುವ ಆಸೆ ವ್ಯಕ್ತಪಡಿಸಿದ್ದರು. ಈ ಸಂಬಂಧ ಲಿಂಗ ಬದಲಾವಣೆ ಅವಕಾಶ ನೀಡುವಂತೆ ಅವರು ಆಪರೇಷನ್ ಮಾಡಿಸಿಕೊಳ್ಳಲು ಅನುಮತಿ ಕೋರಿದ್ದರು. ಅವರ ಕೋರಿಕೆಗೆ ಸಹಮತ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಸರ್ಕಾರ ಲಿಂಗ ಬದಲಾವಣೆಯ ಆಪರೇಷನ್‌ ಮಾಡಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ.

Madya Pradesh Govt Allowed To Sex Change Operation For Women Police Constable In Bhopal

ಪುರುಷನಾಗಿ ಬದಲಾಗುವ ಇಂಗಿತ ವ್ಯಕ್ತಪಡಿಸಿದ್ದ ಮಹಿಳಾ ಪೇದೆ ಹೆಸರು ದೀಪಿಕಾ ಕೊಥಾರಿ ಎಂದು ಗೊತ್ತಾಗಿದೆ. ದೀಪಿಕಾ ಆವರು ಮಧ್ಯಪ್ರದೇಶದ ರಾತ್ಲಮ್ ಜಿಲ್ಲೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಿಂಗ ಬದಲಾವಣೆ ಬಯಸಿ ಅವರು ಗೃಹ ಇಲಾಖೆಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವ ಗೃಹ ಇಲಾಖೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿದೆ.

ಗೃಹ ಇಲಾಖೆ ಪ್ರತಿಕ್ರಿಯೆ

ಈ ಮೂಲಕ ಲೈಂಗಿಕ ಬದಲಾವಣೆಗೆ ಅನುಮತಿ ಪಡೆದ ಮಧ್ಯಪ್ರದೇಶ ರಾಜ್ಯದ ಎರಡನೇ ಮಹಿಳಾ ಪೊಲೀಸ್ ಪೇದೆ ಇವರಾಗಿದ್ದಾರೆ ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ಜೋಹರಾ ತಿಳಿಸಿದ್ದಾರೆ.

ರಾಜ್ಯ ಗೃಹ ಇಲಾಖೆ ಸೋಮವಾರ ಹೊರಡಿಸಿದ ಆದೇಶದಲ್ಲಿ, ಕೊಠಾರಿ 'ಲಿಂಗ ಗುರುತಿನ ಅಸ್ವಸ್ಥತೆ' ಹೊಂದಿದ್ದರು.

ಪೇದೆ ಸಲ್ಲಿಸಿದ್ದ ವೈದ್ಯಕೀಯ ವರದಿಗಳನ್ನು ಪರಿಶೀಲಿಸಲಾಗಿದೆ. ಅವುಗಳ ಆಧಾರದ ಮೇಲೆ ಲಿಂಗ ಬದಲಾವಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದದೆ.

ಸರ್ಕಾರಿ ಉದ್ಯೋಗಗಿಳಿಗೆ ಲಿಂಗ ಬದಲಾವಣೆ ಅವಕಾಶ ನೀಡುವಲ್ಲಿ ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಲಿಂಗ ಬದಲಾವಣೆಯ ಬಳಿಕ ಪುರುಷನಾಗುವ ದೀಪಿಕಾ ಅವರಿಗೆ ಮಹಿಳಾ ಉದ್ಯೋಗಿಗಳಿಗೆ ಸಿಗುವ ಯಾವ ಸೌಕರ್ಯಗಳು ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾನೂನು ಇಲಾಖೆ, ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಗಣಿಸಿದ ನಂತರವೇ ದೀಪಿಕಾ ಅವರಿಗೆ ಲಿಂಗ ಬದಲಾವಣೆಗೆ ಅನುಮತಿ ನೀಡುವ ನಿರ್ಧಾರ ಮಾಡಲಾಯಿತು ಎಂದು ಸರ್ಕಾರ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+