New Parliament Inauguration: ಪ್ರಧಾನಿ ಮೋದಿಗೆ ರಾಜದಂಡ ಹಸ್ತಾಂತರಿಸಲಿರುವ ಮಧುರೈ ಅಧೀನಂ ಪೀಠಾಧಿಪತಿ

ಇದೇ ಭಾನುವಾರ, ಮೇ 28ರಂದು ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇಳೆ ಐತಿಹಾಸಿಕ ರಾಜದಂಡ ಸೆಂಗೋಲ್ ಅನ್ನು ಹೊಸ ಸಂಸತ್ ಭವನದ ಸ್ಪೀಕರ್ ಕುರ್ಚಿ ಬಳಿ ಇರಿಸಲಿದ್ದಾರೆ.

ದೇಶದಲ್ಲಿ ರಾಜಪ್ರಭುತ್ವ ಕಾಲದಿಂದಲೂ ಅಧಿಕಾರ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರವನ್ನು ಸೆಂಗೋಲ್ ಮೂಲಕ ಮಾಡಲಾಗುತ್ತಿತ್ತು. ಚೋಳರ ಕಾಲದ ಈ ರಾಜದಂಡ ಭಾರತ ಸ್ವಾತಂತ್ರ್ಯದ ಸಂಕೇತವಾಗಿ ಅಂದಿನ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ನೀಡಲಾಗಿತ್ತು.

Madurai Adhinam Swamiji Will Hand Over The Sengol To Prime Minister Narendra Modi

ಬ್ರಿಟಿಷ ಸರ್ಕಾರದ ಕೊನೆಯ ಗವರ್ನರ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಸೆಂಗೋಲ್ ಅನ್ನು ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಅಧಿಕಾರ ಹಸ್ತಾಂತರ ಸಂಕೇತವಾಗಿ ನೀಡಿದ್ದರು.

ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಸ್ಮರಣಿಕೆ ಈವರೆಗೆ ಅಲಹಾಬಾದ್‌ನ ಆನಂದ ಭವನದ ಮ್ಯೂಸಿಯಂನಲ್ಲಿ ಬಂಧಿಯಾಗಿತ್ತು. ಗಾಜಿನ ಶೋಕೇಸ್‌ನಲ್ಲಿಟ್ಟು, ಅದರ ಕೆಳಗೆ ಹೀಗೆ ಬರೆಯಲಾಗಿತ್ತು 'ಗೋಲ್ಡನ್ ಸ್ಟಿಕ್ ಗಿಫ್ಟೆಡ್ ಟು ಪಂಡಿತ ಜವಹರಲಾಲ್ ನೆಹರು'. ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಉಡುಗೊರೆಯಾಗಿ ನೀಡಲಾದ ಚಿನ್ನದ ಊರುಗೋಲು ಎಂದರ್ಥ.

ಇದೀಗ ಅದೇ ರಾಜದಂಡ ಅಥವಾ ನ್ಯಾಯದಂಡವನ್ನು ತಮಿಳುನಾಡಿನ ಮಧುರೈ ಅಧೀನಂ ಮಠದ 293ನೇ ಪ್ರಧಾನ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರ ಮಾಡಲಿದ್ದಾರೆ.

ಹರಿಹರ ದೇಶಿಕ ಸ್ವಾಮೀಜಿ ಅವರು ಹೊಸ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸೆಂಗೋಲ್ ಅನ್ನು ಪ್ರದಾನ ಮಾಡುವುದಾಗಿ ಇಂದು (ಗುರುವಾರ) ಹೇಳಿದ್ದಾರೆ.

ಇದೇ ವೇಳೆ ಸೆಂಗೋಲ್ ರಾಜದಂಡದ ಮಹತ್ವ ಮತ್ತು ಇತಿಹಾಸದ ಬಗ್ಗೆ ಹರಿಹರ ದೇಶಿಕ ಸ್ವಾಮೀಜಿ ಮಾಹಿತಿ ಹಂಚಿಕೊಂಡಿದ್ದಾರೆ. ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರದ ಸಂಕೇತವಾಗಿ ಐತಿಹಾಸಿಕ ಸೆಂಗೋಲ್ ಅನ್ನು 1947ರ ಆಗಸ್ಟ್ 14ರಂದು ಪಂಡಿತ್ ಜವಹರಲಾಲ್ ನೆಹರು ಅವರಿಗೆ ನೀಡಲಾಗಿತ್ತು ಎಂದರು.

ಮಧುರೈ ಅಧೀನಂ ಮಠದ ಹರಿಹರ ದೇಶಿಕ ಸ್ವಾಮಿಗಳು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಕಿರಿಯ ಮಠಾಧೀಶರನ್ನಾಗಿ ಅಧೀನಂ ಮಠದ 292ನೇ ಪ್ರಧಾನ ಮಠಾಧಿಪತಿ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು 2019ರಲ್ಲಿ ಘೋಷಿಸಿದ್ದರು.

ಅಧೀನಂ ಮಠ ಪಂಥದ 20 ಪುರೋಹಿತರು ನೂತನ ಸಂಸತ್​ ಭವನದ ಹೊಸ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಸ ಸಂಸತ್ತಿನ ಸ್ಪೀಕರ್ ಆಸನದ ಬಳಿ ಸೆಂಗೋಲ್ ಅನ್ನು ಸ್ಥಾಪಿಸಲಾಗುವುದು. ಏಕೆಂದರೆ ಇದು ಸಂಸ್ಕೃತಿ ಸಂಪ್ರದಾಯಗಳನ್ನು ಆಧುನಿಕತೆಯೊಂದಿಗೆ ಸಂಯೋಜಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನೂತನ ಸಂಸತ್ತಿನಲ್ಲಿ ರಾಜದಂಡ ಸ್ಥಾಪನೆಯಿಂದ ಜನರು ಇದರ ಐತಿಹಾಸಿಕ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+