ಒಬ್ಬನೇ ನದಿ ಕ್ಲೀನ್ ಮಾಡಿ 'ರಿಯಲ್ ಹೀರೋ' ಆದ ಯುವಕನ ಮಂದೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ಸ್ ಎಲ್ಲಿ? ಆನಂದ್ ಮಹೀಂದ್ರಾ ಫಿದಾ

Inspiring Story: ಯಾವುದೇ ಸರ್ಕಾರಿ ಅನುದಾನವಿಲ್ಲ, ಜೆಸಿಬಿ ಯಂತ್ರಗಲಿಲ್ಲ, ಜೊತೆಗೆ ಸಹಾಯಕ್ಕೆ ನಿಲ್ಲುವವರು ಯಾರೂ ಇಲ್ಲ. ಕೇವಲ ಕೈಗೆ ಕವರ್ ಕಟ್ಟಿಕೊಂಡು ಬಿದಿರಿನ ಕೋಲು ಹಿಡಿದು, ಕೆಟ್ಟ ವಾಸನೆಯಿಂದ ಕೂಡಿದ್ದ ನದಿಗೆ ಇಳಿದ ಯುವಕನಿಗೆ ಇವನಿಗೇನೋ ತಲೆ ಕೆಟ್ಟಿದೆ ಎಂದು ಲೇವಡಿ ಮಾಡಿದವರೇ ಹೆಚ್ಚು. ಈ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೆ ಟನ್‌ಗಟ್ಟಲೆ ಕೊಳೆತ ತ್ಯಾಜ್ಯವನ್ನು ತೆರವುಗೊಳಿಸಿ, ನದಿಗೆ ಹೊಸ ರೂಪ ನೀಡಿ ಗಮನ ಸೆಳೆದಿದ್ದಾನೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿರುವ ವಿಚಾರವಾಗಿದೆ.

ಮಧ್ಯಪ್ರದೇಶದ ರಾಜಗಢ್ ಜಿಲ್ಲೆಯ ಬಿಯಾಓರಾ ತಾಲೂಕಿನಲ್ಲಿ 'ಬಿಟ್ಟು ತಬಾಹಿ' ಅಂತಲೇ ಕರೆಯಲ್ಪಡುವ 20 ವರ್ಷದ ಯುವಕ ಸುರೇಂದ್ರ ಸಿಂಗ್ ಚೌಧರಿ ಕೈಗೊಂಡ ಅಪ್ರತಿಮ ಪರಿಸರ ಸೇವೆಯು ಇಂದು ದೇಶಾದ್ಯಂತ ದೊಡ್ಡ ಮಟ್ಟದ ಪ್ರಶಂಸೆಗೆ ಪಾತ್ರವಾಗಿದೆ. ತೀವ್ರ ಕಲುಷಿತಗೊಂಡು, ತ್ಯಾಜ್ಯದ ಕೂಪವಾಗಿದ್ದ ಬಿಯಾಓರಾದ 'ಅಜ್ನಾರ್' ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದಿದ್ದಾನೆ.

Madhya Pradesh Youth Cleans Polluted Ajnar River Alone Anand Mahindra Praises Him in Tweeter Viral

ಮಧ್ಯದಲ್ಲೇ ಕೈಕೊಟ್ಟ ಸ್ನೇಹಿತರು

ಇವರ ಈ ಪರಿಸರ ಕಾಳಜಿಯ ಅಭಿಯಾನ ಮತ್ತು ಅಪ್ರತಿಮ ಪರಿಶ್ರಮವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ರೋಚಕ ಸ್ಟೋರಿ ಭಾರಿ ವೈರಲ್ ಆಗಿದೆ. ಜನವರಿ 26ರ ಗಣರಾಜ್ಯೋತ್ಸವದ ಶುಭ ದಿನದಂದು ಬಿಟ್ಟು ತಬಾಹಿ ಹಾಗೂ ಅವರ ಕೆಲ ಗೆಳೆಯರು ಸೇರಿ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು.

ಆರಂಭದಲ್ಲಿ ಸ್ನೇಹಿತರು ಸಾಥ್ ನೀಡಿದರು. ದಿನಕಳೆದಂತೆ ಕೆಲಸದ ತೀವ್ರತೆ ಹಾಗೂ ಕಷ್ಟವನ್ನು ಕಂಡು ಜೊತಗಿದ್ದವರೆಲ್ಲದರೂ ಹಿಂದೆ ಸರಿದರು. ಆದರೆ ಬಿಟ್ಟು ಮಾತ್ರ ಸೋಲೊಪ್ಪಿಕೊಳ್ಳದೆ, ಯಾವುದೇ ಸರ್ಕಾರಿ ಸಹಾಯ ಅಥವಾ ದೊಡ್ಡ ಸಂಘಟನೆಗಳ ಬೆಂಬಲವಿಲ್ಲದೆ ನದಿಯಿಳಿದು ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದರು.

ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಬಿಟ್ಟು

ಪ್ಲಾಸ್ಟಿಕ್ ತ್ಯಾಜ್ಯ, ಜಲಸಸ್ಯಗಳು, ಹೊಂಡ ಮತ್ತು ಕೊಳೆತ ಕಸದಿಂದ ನದಿಯು ಅಕ್ಷರಶಃ ಚರಂಡಿಯಂತೆ ಮಾರ್ಪಟ್ಟಿತ್ತು. ಈ ಬೃಹತ್ ನದಿಯನ್ನು ಒಬ್ಬನೇ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದು ಅನೇಕರು ಇವರನ್ನು ತಮಾಷೆ ಮಾಡಲು ಶುರುಮಾಡಿದರು. ಇನ್ನು ಕೆಲವರು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೆಚ್ಚು ಲೈಕ್ಸ್ ಮತ್ತು ಫಾಲೋವರ್ಸ್‌ಗಾಗಿ ಹೀಗೆ ನಾಟಕ ಮಾಡುತ್ತಿದ್ದಾನೆ ಎಂದು ಲೇವಡಿ ಮಾಡಿದರು. ಆದರೂ ಬಿಟ್ಟು ಈ ಯಾವುದೇ ಟೀಕೆಗಳಿಗೆ ಕಿವಿಗೊಡದೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ವಚ್ಛತೆಯ ವಿಡಿಯೊಗಳನ್ನು ಹಂಚಿಕೊಳ್ಳುತ್ತಾ ಕಾರ್ಯನಿರತರಾದರು.

ಬದಲಾದ ಅಜ್ನಾರ್ ನದಿಯ ಸ್ವರೂಪ

ವಾರಗಳ ಕಾಲ ಪರಿಶ್ರಮ ಪಟ್ಟ ನಂತರ ನದಿಯ ನೋಟವೇ ಬದಲಾಯಿತು. ಕಸ-ಕಡ್ಡಿಗಳೆಲ್ಲವೂ ತೆರವುಗೊಂಡು ನದಿಯ ನೀರು ತಿಳಿಯಾಗಿ ಹರಿಯಲು ಆರಂಭಿಸಿತು. ಬಿಟ್ಟು ಹಂಚಿಕೊಂಡಿದ್ದ 'ಮೊದಲು ಮತ್ತು ನಂತರದ' (Before and After) ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.

ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್ ಮಹೀಂದ್ರಾ

ಈ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ, ಬಿಟ್ಟು ಅವರ ಸಾಹಸವನ್ನು 'ಸೋಮವಾರದ ಸ್ಫೂರ್ತಿ' (Monday Motivation) ಎಂದು ಬಣ್ಣಿಸಿದರು. 'ಸಾಮಾಜಿಕ ಜಾಲತಾಣಗಳು ಕೇವಲ ಸಣ್ಣಪುಟ್ಟ ವಿಷಯಗಳಿಗಷ್ಟೇ ಸೀಮಿತಗೊಳ್ಳುತ್ತವೆ ಎಂಬ ಮಾತುಗಳಿವೆ. ಆದರೆ ಲೈಕ್ಸ್ ಪಡೆಯುವ ಬಯಕೆಯು ಇಂತಹ ಒಳ್ಳೆಯ ಕೆಲಸಕ್ಕೆ ಪ್ರೇರಣೆಯಾಗುವುದಾದರೆ ಅದು ನಿಜಕ್ಕೂ ಸ್ವಾಗತಾರ್ಹ,' ಎಂದು ಬರೆದು ಯುವಕನ ಶ್ರಮವನ್ನು ಕೊಂಡಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಈ ವಿಡಿಯೋಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ಬಿಟ್ಟು ಅವರನ್ನು 'ರಿಯಲ್ ಹೀರೋ' ಎಂದು ಬಣ್ಣಿಸಿದ್ದಾರೆ. ಸರ್ಕಾರದ ನೆರವಿಗಾಗಿ ಕಾಯದೆ, ಒಬ್ಬನೇ ವ್ಯಕ್ತಿ ಧೃಡ ನಿರ್ಧಾರ ಮಾಡಿದರೆ ಸಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಹುದು ಎಂಬುದಕ್ಕೆ ಬಿಟ್ಟು ತಬಾಹಿ ಅವರ ಈ ಮಹತ್ವದ ಕಾರ್ಯವೇ ಪ್ರಮುಖ ಉದಾಹರಣೆಯಾಗಿದೆ ಎಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+