MP Train Accident: ಎರಡು ಗೂಡ್ಸ್ ರೈಲುಗಳು ಪರಸ್ಪರ ಡಿಕ್ಕಿ- ಓರ್ವ ಸಾವು, ಇಬ್ಬರಿಗೆ ಗಾಯ!
ಮಧ್ಯಪ್ರದೇಶದ ಸಿಂಗ್‌ಪುರ ರೈಲು ನಿಲ್ದಾಣದ ಬಳಿ ಬುಧವಾರ ಎರಡು ಸರಕು ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮ ಓರ್ವ ಲೋಕೋ ಚಾಲಕ ಸಾವನ್ನಪ್ಪಿದ್ದು, ಆತನ ಇಬ್ಬರು ಸಹಚರರು ಗಾಯಗೊಂಡಿದ್ದಾರೆ. ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ ರೈಲುಗಳ ಇಂಜಿನ್‌ಗಳು ಬೆಂಕಿಗೆ ಆಹುತಿಯಾಗಿ ಬೋಗಿಗಳು ಪಲ್ಟಿಯಾಗಿವೆ. ಇಬ್ಬರು ರೈಲ್ವೇ ಕಾರ್ಮಿಕರು ಬೋಗಿಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಾಹಿತಿಯ ಪ್ರಕಾರ, ಬಿಲಾಸ್‌ಪುರದಿಂದ ಕಟ್ನಿ ರೈಲು ಮಾರ್ಗದಲ್ಲಿ ಶಾಹದೋಲ್‌ಗೆ 10 ಕಿಮೀ ಮೊದಲು ಸರಕು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಬಳಿಕ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ. ಡಿಕ್ಕಿ ಹೊಡೆದ ರಬಸಕ್ಕೆ ಒಂದು ಇಂಜಿನ್ ಮೇಲೆ ಇನ್ನೊಂದು ರೈಲಿನ ಇಂಜಿನ್ ಬಿದ್ದಿದೆ.

ಬೆಳಗ್ಗೆ 6:30ಕ್ಕೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದ್ದು, ರೈಲ್ವೇ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಅಪಘಾತದ ನಂತರ, ಬಿಲಾಸ್‌ಪುರ-ಕಟ್ನಿ ಮಾರ್ಗದ ಎಲ್ಲಾ ರೈಲುಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಮಧ್ಯ ರೈಲ್ವೆಯು ರೈಲು ಹಳಿತಪ್ಪಿದ ಕುರಿತು ಬುಲೆಟಿನ್ ಅನ್ನು ಬಿಡುಗಡೆ ಮಾಡಿತು. ಘಟನೆ ಕಾರಣ ಎಲ್ಲಾ ಮೂರು ಮಾರ್ಗಗಳಲ್ಲಿ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ.
ರದ್ದುಗೊಂಡ ರೈಲುಗಳು
1. ರೈಲು ಸಂಖ್ಯೆ 08740 ಬಿಲಾಸ್‌ಪುರ್‌ನಿಂದ ಶಹದೋಲ್‌ಗೆ ಚಲಿಸುವ ಬಿಲಾಸ್‌ಪುರ್-ಶಾಹದೋಲ್ MEMU ಇಂದು (ಏಪ್ರಿಲ್ 19) ರದ್ದಾಗಿದೆ.
2. ಶಹದೋಲ್‌ನಿಂದ ಅಂಬಿಕಾಪುರಕ್ಕೆ ಚಲಿಸುವ ರೈಲು ಸಂಖ್ಯೆ 08749 ಶಹದೋಲ್-ಅಂಬಿಕಾಪುರ MEMU ರೈಲು ಇಂದು (ಏಪ್ರಿಲ್ 19) ರದ್ದಾಗಿದೆ.
3. ಅಂಬಿಕಾಪುರದಿಂದ ಅನುಪ್ಪುರ್‌ಗೆ ಚಲಿಸುವ ರೈಲು ಸಂಖ್ಯೆ 08758 ಅಂಬಿಕಾಪುರ-ಅನುಪ್ಪುರ್ MEMU ರೈಲು ಇಂದು ಇದು ಕೂಡ (ಏಪ್ರಿಲ್ 19) ರದ್ದಾಗಿದೆ.
4. ಅನುಪ್ಪುರ್‌ನಿಂದ ಮನೇಂದ್ರಗಢ್‌ಗೆ ಚಲಿಸುವ ರೈಲು ಸಂಖ್ಯೆ 08759 ಅನುಪ್ಪುರ್-ಮನೇಂದ್ರಗಢ್ MEMU ರೈಲು ಇಂದು (ಏಪ್ರಿಲ್ 19) ರದ್ದಾಗಿದೆ.
5. ಮಾನೇಂದ್ರಗಢ್‌ನಿಂದ ಅಂಬಿಕಾಪುರಕ್ಕೆ ಚಲಿಸುವ ರೈಲು ಸಂಖ್ಯೆ 08757 ಮನೇಂದ್ರಗಢ್-ಅಂಬಿಕಾಪುರ MEMU ರೈಲು 20 ಏಪ್ರಿಲ್ 2023 ರಂದು ರದ್ದಾಗುತ್ತದೆ.
6. ಅಂಬಿಕಾಪುರದಿಂದ ಶಾಹದೋಲ್‌ಗೆ ಚಲಿಸುವ ರೈಲು ಸಂಖ್ಯೆ 08750 ಅಂಬಿಕಾಪುರ-ಶಾಹದೋಲ್ ಮೆಮು ರೈಲು 20 ಏಪ್ರಿಲ್ 2023 ರಂದು ರದ್ದಾಗುತ್ತದೆ.
7. ಶಹದೋಲ್‌ನಿಂದ ಬಿಲಾಸ್‌ಪುರಕ್ಕೆ ಚಲಿಸುವ ರೈಲು ಸಂಖ್ಯೆ 08739 ಶಹದೋಲ್-ಬಿಲಾಸ್‌ಪುರ್ MEMU ರೈಲು ಇಂದು (ಏಪ್ರಿಲ್ 19) ರದ್ದಾಗಿದೆ.
8. ರೈಲು ಸಂಖ್ಯೆ 18576 ಅಂಬಿಕಾಪುರದಿಂದ ಶಹದೋಲ್‌ಗೆ ಚಲಿಸುವ ಅಂಬಿಕಾಪುರ-ಶಾಹದೋಲ್ ಇಂದು (ಏಪ್ರಿಲ್ 19) ರದ್ದಾಗಿದೆ.
9. ಶಹದೋಲ್‌ನಿಂದ ಅಂಬಿಕಾಪುರಕ್ಕೆ ಚಲಿಸುವ ರೈಲು ಸಂಖ್ಯೆ 18755 ಶಹದೋಲ್-ಅಂಬಿಕಾಪುರ MEMU ರೈಲು ಇಂದು (ಏಪ್ರಿಲ್ 19) ರದ್ದಾಗಿದೆ.
10. ಬಿಲಾಸ್‌ಪುರದಿಂದ ಇಂದೋರ್‌ಗೆ ಚಲಿಸುವ ರೈಲು ಸಂಖ್ಯೆ 18234 ಬಿಲಾಸ್‌ಪುರ್-ಇಂದೋರ್ ನರ್ಮದಾ ಎಕ್ಸ್‌ಪ್ರೆಸ್ ರೈಲು ಇಂದು (ಏಪ್ರಿಲ್ 19) ರದ್ದಾಗಿದೆ.
ಮರುನಿಗದಿಗೊಳಿಸಿದ ರೈಲುಗಳು
1. ರೈಲು ಸಂಖ್ಯೆ 20847 ದುರ್ಗ್ - ಉಧಮ್‌ಪುರ್ ಎಕ್ಸ್‌ಪ್ರೆಸ್ ದುರ್ಗದಿಂದ ಹೊರಡುವುದು ಇಂದು 2 ಗಂಟೆಗಳ ಕಾಲ ವಿಳಂಬವಾಗಲಿದೆ.
ಗಮ್ಯಸ್ಥಾನದ ಮೊದಲು ರೈಲುಗಳನ್ನು ರದ್ದುಗೊಳಿಸಲಾಗಿದೆ
1. ರೈಲು ಸಂಖ್ಯೆ. 08747 ಬಿಲಾಸ್ಪುರ್ - ಕಟ್ನಿಯನ್ನು ಪೆಂಡ್ರಾ ರಸ್ತೆಯಲ್ಲಿ ರದ್ದುಗೊಳಿಸಲಾಗಿದೆ.
2. ರೈಲು ಸಂಖ್ಯೆ. 11266 ಅಂಬಿಕಾಪುರ - ಜಬಲ್ಪುರ್ ಬಿಜುರಿಯಲ್ಲಿ ರದ್ದುಗೊಳಿಸಲಾಗಿದೆ.
3. ರೈಲು ಸಂಖ್ಯೆ. 11265 ಜಬಲ್‌ಪುರ - ಅಂಬಿಕಾಪುರವನ್ನು ಜಬಲ್‌ಪುರ ವಿಭಾಗದಲ್ಲಿ ರದ್ದುಗೊಳಿಸಲಾಗಿದೆ.












Click it and Unblock the Notifications