ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದ ಅಕ್ರಮ ಪಟಾಕಿ ಗೋಡೌನ್‌ನಲ್ಲಿ ಸ್ಫೋಟ, 4 ಸಾವು, 7 ಮಂದಿಗೆ ಗಾಯ

|
Google Oneindia Kannada News

ಭೋಪಾಲ್, ಅ.20: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಬನ್ಮೋರ್ ನಗರದಲ್ಲಿ ಗುರುವಾರ ಪಟಾಕಿ ಸಂಗ್ರಹಿಸಲಾಗಿದ್ದ ಗೋಡೌನ್‌ನಲ್ಲಿ ಸ್ಫೋಟ ಸಂಭವಿಸಿದ ನಂತರ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕೆಲವರು ಅವಶೇಷಗಳಡಿಯಲ್ಲಿ ಹೂತು ಹೋಗಿರುವ ಶಂಕೆ ವ್ಯಕ್ತವಾಗಿದೆ.

ದೀಪಾವಳಿ ಹಬ್ಬದ ಹಿನ್ನೆಲೆ ಗೋಡೌನ್ ಪಟಾಕಿಗಳಿಂದ ತುಂಬಿದ್ದರಿಂದ ಸ್ಪೋಟಗೊಂಡಿದೆ. ಈ ಗೋಡೌನ್ ಅಕ್ರಮ ಎಂದು ಹೇಳಲಾಗಿದೆ.

ಹುಷಾರ್: ದೀಪಾವಳಿಗೆ ಪಟಾಕಿ ಹೊಡೆದರೆ 200 ರೂಪಾಯಿ ದಂಡ, 6 ತಿಂಗಳು ಜೈಲು!ಹುಷಾರ್: ದೀಪಾವಳಿಗೆ ಪಟಾಕಿ ಹೊಡೆದರೆ 200 ರೂಪಾಯಿ ದಂಡ, 6 ತಿಂಗಳು ಜೈಲು!

"ಈ ಸ್ಫೋಟಕ್ಕೆ ಗನ್ ಪೌಡರ್ ಕಾರಣವೇ ಅಥವಾ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದುರ್ಘಟನೆ ಸಂಭವಿಸಿದೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಎಲ್ಲಾ ಗಾಯಾಳುಗಳು ಗಂಭೀರರಾಗಿದ್ದಾರೆ. ಗಾಯಾಳುಗಳು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ" ಎಂದು ಮೊರೆನಾ ಜಿಲ್ಲಾಧಿಕಾರಿ ಬಕ್ಕಿ ಕಾರ್ತಿಕೇಯನ್ ಮಾಹಿತಿ ನೀಡಿದ್ದಾರೆ.

Madhya Pradesh; Explosion in an illegal firecracker factory, 4 killed

ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಚಿಂತಾಜನಕರಾಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಒಂದು ಮಗುವನ್ನು ರಕ್ಷಿಸಲಾಗಿದೆ ಎಂದು ಕಾರ್ತಿಕೇಯನ್ ಹೇಳಿದ್ದಾರೆ.

ಪೊಲೀಸರು ಮತ್ತು ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಪೋಟದ ಅವಶೇಷಗಳನ್ನು ತೆರವುಗೊಳಿಸಲು ಯಂತ್ರಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ ರಾಜೇಶ್ ಚಾವ್ಲಾ ತಿಳಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಪಂಜಾಬ್‌ನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ದೀಪಾವಳಿ ಹಬ್ಬದ ಸಂಭ್ರಮಕ್ಕೂ ಮುನ್ನ ಬಟಾಲಾದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

English summary
Explosion in an illegal firecracker factory in Madhya Pradesh's Banmor Nagar. 4 killed, 7 have been injured. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X