ಬಾಲಘಾಟ್ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ ಇಪ್ಪತ್ತು ಮಂದಿ ಸಾವು

ಭೋಪಾಲ್, ಜೂನ್ 7: ಕನಿಷ್ಠ ಇಪ್ಪತ್ತು ಮಂದಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಮಧ್ಯಪ್ರದೇಶದ ಬಾಲಘಾಟ್ ನ ಪಟಾಕಿ ಕಾರ್ಖಾನೆಯೊಂದರಲ್ಲಿ ಬುಧವಾರ ಭಾರೀ ಅವಘಡದಲ್ಲಿ ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದೆ.

ಪಟಾಕಿಗಳ ದಾಸ್ತಾನು ಮಾಡಿದ್ದ ಸ್ಥಳದಲ್ಲಿ ಯಾರೋ ಬೀಡಿಯೋ ಸಿಗರೇಟೋ ಸೇದಿ ತುಂಡನ್ನು ಎಸೆದು ಹೋಗಿದ್ದು, ಅದರಿಂದಲೇ ಇಂಥ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ನಡೆದ ತನಿಖೆಯಿಂದ ಗೊತ್ತಾಗಿದೆ ಎಂಬುದು ಪೊಲೀಸರು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ.[ರೈತರ ಕ್ರೋಧಾಗ್ನಿಗೆ ಸಿಕ್ಕು ಹೊತ್ತಿ ಉರಿಯುತ್ತಿದೆ ಮಧ್ಯಪ್ರದೇಶ]

Madhya Pradesh: Explosion at firecracker factory kills many in Balaghat

ಅಂದಹಾಗೆ ಈ ಬಾಲಘಾಟ್ ನ ಐದು ಕಿಲೋಮೀಟರ್ ದೂರದಲ್ಲಿ ಇರುವ ನೈನ್ ಪುರ ರಸ್ತೆಯಲ್ಲಿ ಪಟಾಕಿ ಕಾರ್ಖಾನೆಯಿದೆ. ಅವಘಡ ಸಂಭವಿಸಿದ ವೇಳೆ ನಲವತ್ತು ಮಂದಿ ಕಾರ್ಖಾನೆಯ ಒಳಗೆ ಇದ್ದರು. ತಕ್ಷಣವೇ ಸ್ಥಳವನ್ನು ತಲುಪಿದ ರಕ್ಷಣಾ ಸಿಬ್ಬಂದಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ಆದರೆ, ಈ ಘಟನೆಯಲ್ಲಿ ಮೃತಪಟ್ಟವರ ದೇಹಗಳು ಗುರುತಿಸಲಾಗದಂಥ ಸ್ಥಿತಿಯಲ್ಲಿವೆ. ಇಡೀ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲು ತನಿಖೆ ಮುಂದುವರಿದಿದೆ. ಎರಡು ವರ್ಷದ ಹಿಂದೆ ಕೂಡ ಇದೇ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ ಸಂಭವಿಸಿ ದೊಡ್ಡ ಅನಾಹುತವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+