ಮಧ್ಯಪ್ರದೇಶ: ಡ್ಯಾನ್ಸ್ ಮಾಡುವಾಗ ಗನ್ ಝಳಪಿಸಿದ ಕಾಂಗ್ರೆಸ್ ಶಾಸಕ
ಭೋಪಾಲ್ ಜನವರಿ 2: ವೇದಿಕೆ ಮೇಲೆ ನೃತ್ಯ ಮಾಡುವಾಗ ಕಾಂಗ್ರೆಸ್ ಶಾಸಕನೊಬ್ಬ ಗನ್ ಝಳಪಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೋಟ್ಮಾದ ಶಾಸಕರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಗನ್ ಝಳಪಿಸುತ್ತಾ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರನ್ನು ಕಾಂಗ್ರೆಸ್ ಶಾಸಕ ಸುನೀಲ್ ಸರಾಫ್ ಎಂದು ಗುರುತಿಸಲಾಗಿದೆ. ಶಾಸಕ ಸರಾಫ್ ವಿರುದ್ಧ ಸದ್ಯ ಕ್ರಮ ಕೈಗೊಳ್ಳುವುದಾಗಿ ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.
ವಿಡಿಯೊದಲ್ಲಿ ಸುನೀಲ್ ಸರಾಫ್ ಅವರು ವೇದಿಕೆಯಲ್ಲಿ ಇತರ ನಾಲ್ವರ ಜೊತೆ ನೃತ್ಯ ಮಾಡುವಾಗ ಬಂದೂಕವನ್ನು ಹಿಡಿದಿರುವುದನ್ನು ಕಾಣಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಕಾಂಗ್ರೆಸ್ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನುಪ್ಪುರ್ ಎಸ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ರೇವಾಂಚಲ್ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನ್ನ ಪತಿ ಮತ್ತು ಏಳು ತಿಂಗಳ ಮಗುವಿನೊಂದಿಗೆ ರೇವಾದಿಂದ ಭೋಪಾಲ್‌ಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಸರಾಫ್ ಮತ್ತು ಇನ್ನೊಬ್ಬ ಶಾಸಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಸಮಯದಲ್ಲಿ ಸರಾಫ್ ಮದ್ಯ ಸೇವಿಸಿದ್ದರು.
कोतमा से कांग्रेस विधायक सुनील सर्राफ के फायरिंग वाले वायरल वीडियो को लेकर अनूपपुर एसपी को कार्रवाई करने के निर्देश दिए हैं। pic.twitter.com/GNanfsnqoh
— Dr Narottam Mishra (@drnarottammisra) January 2, 2023
ಈ ವೇಳೆ ಮಹಿಳೆಯ ಪತಿ ಟ್ವಿಟರ್‌ನಲ್ಲಿ ಸಹಾಯಕ್ಕಾಗಿ ಪೊಲೀಸರನ್ನು ತಲುಪಿದರು. ಇದನ್ನು ಅನುಸರಿಸಿ ಸಾಗರ್‌ನಲ್ಲಿನ ರೈಲ್ವೆ ಪೊಲೀಸರು ರೈಲು ಹತ್ತಿ ಆಕೆಗೆ ಸಹಾಯ ಮಾಡಿದರು. ಈ ವಿಚಾರವಾಗಿ ಶಾಸಕ ಸರಾಫ್ ವಿರುದ್ಧ ಪ್ರಕರಣ ದಾಖಲಾಗಿತ್ತು.












Click it and Unblock the Notifications