Get Updates
Get notified of breaking news, exclusive insights, and must-see stories!

ಸಂವಿಧಾನ ಉಳಿವಿಗೆ ಮೋದಿಯನ್ನು ಕೊಲ್ಲಿ ಎಂದ ಕಾಂಗ್ರೆಸ್ ನಾಯಕನ ವಿರುದ್ಧ ಆಕ್ರೋಶ

ನವದೆಹಲಿ, ಡಿ. 12: ಸಂವಿಧಾನ ಉಳಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಿ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕನ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ.

ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ 'ಸಂವಿಧಾನವನ್ನು ಉಳಿಸಲು ಬಯಸಿದರೆ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಬೇಕು" ಎಂದು ತಮ್ಮ ಭಾಷಣದಲ್ಲಿ ಹೇಳಿ, ಭಾರೀ ವಿವಾದವನ್ನು ಹುಟ್ಟುಹಾಕಿದ್ದಾರೆ.

ಹೇಳಿಕೆ ನೀಡಿದ ತಕ್ಷಣ ಅದನ್ನು ಸರಿಪಡಿಸಿಕೊಂಡು, ಕೊಲ್ಲುವುದು ಎಂದರೆ ಸೋಲಿಸುವುದು ಎಂದು ಸ್ಪಷ್ಟಪಡಿಸಿದ್ದಾರೆ. ಅದರೆ, ಅಷ್ಟೋತ್ತಿಗಾಗಲೇ ಅದು ಹಲವೆಡೆ ಹಂಚಿಹೋಗಿತ್ತು. ರಾಜಾ ಪಟೇರಿಯಾ ಹೇಲಿಕೆಗೆ ಭಾರೀ ಆಕ್ರೋಶ ಉಂಟಾಗಿದ್ದು, ಅವರನ್ನು ಬಂಧಿಸಬೇಕು ಎಂದು ಹಲವು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

Madhya Pradesh Congress minister call to kill Modi, FIR filed

ಮಧ್ಯಪ್ರದೇಶ ಸರ್ಕಾರವು ಮಾಜಿ ರಾಜ್ಯ ಸಚಿವ ರಾಜಾ ಪಟೇರಿಯಾ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ಆದೇಶಿಸಿದೆ. ಕೇಂದ್ರ ಸಚಿವರೊಬ್ಬರು ಇದು "ಕ್ಷಮಿಸಲಾಗದ ಅಪರಾಧ" ಎಂದು ಕರೆದಿದ್ದಾರೆ.

ಇನ್ನು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ: "ಭಾರತ್ ಜೋಡೋ ಯಾತ್ರೆ ಮಾಡುವವರ ನಿಜವಾದ ಮುಖ ಹೊರಬರುತ್ತಿದೆ" ಎಂದು ಕಿಡಿಕಾರಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ರಾಜಾ ಪಟೇರಿಯಾ ಅವರು ಪಕ್ಷದ ಕಾರ್ಯಕರ್ತರ ಸಭೆಯಂತೆ ತೋರುವ ಸಭೆಯೊಂದರಲ್ಲಿ ಮಾತನಾಡುತ್ತಿದ್ದಾರೆ. "ಮೋದಿ ಚುನಾವಣೆಯನ್ನು ಕೊನೆಗೊಳಿಸುತ್ತಾರೆ. ಮೋದಿ ಧರ್ಮ, ಜಾತಿ, ಭಾಷೆಯ ಆಧಾರದ ಮೇಲೆ ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟುಗಳು ಮತ್ತು ಅಲ್ಪಸಂಖ್ಯಾತರ ಜೀವನ ಅಪಾಯದಲ್ಲಿದೆ. ಹೀಗಾಗಿ ಸಂವಿಧಾನವನ್ನು ಉಳಿಸಬೇಕಾದರೆ ಮೋದಿಯನ್ನು ಕೊಲ್ಲಲು ಸಿದ್ಧರಾಗಿ" ಎಂದಿದ್ದಾರೆ.

Madhya Pradesh Congress minister call to kill Modi, FIR filed

ನಂತರ ಅದೇ ವೀಡಿಯೊದಲ್ಲಿ, "ಕೊಲೆ" ಎಂಬ ಪದಕ್ಕೆ ಸೋಲು ಎಂದು ಅರ್ಥ ಎಂದು ಹೇಳಿಕೊಂಡಿದ್ದಾರೆ. ತಾನು ಮಹಾತ್ಮ ಗಾಂಧಿಯವರ ಅಹಿಂಸೆಯ ಸಿದ್ಧಾಂತವನ್ನು ಅನುಸರಿಸುತ್ತೇನೆ. ಅಲ್ಪಸಂಖ್ಯಾತರನ್ನು ರಕ್ಷಿಸಲು ಪ್ರಧಾನಿ ಮೋದಿಯನ್ನು ಚುನಾವಣೆಯಲ್ಲಿ ಸೋಲಿಸುವುದು ಅಗತ್ಯ ಎಂದು ಮಾತು ಮುಂದುವರೆಸಿದ್ದಾರೆ.

ಪನ್ನಾ ಜಿಲ್ಲೆಯ ಪಾವಾಯಿ ಪಟ್ಟಣದಿಂದ ಈ ವಿಡಿಯೋ ಹೊರಬಿದ್ದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+