ಮಧ್ಯಪ್ರದೇಶ ಸಿಎಂ ರೇಸ್: ಕುತೂಹಲ ಕೆರಳಿಸಿದ ರಾಮ್ ರಾಮ್ ಪೋಸ್ಟ್
ಭೋಪಾಲ್, ಡಿಸೆಂಬರ್ 9: ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತ ಪಡೆದು ವಾರ ತುಂಬಿದರೂ ಇನ್ನು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಇದರಿಂದ ಸಿಎಂ ಯಾರಾಗುತ್ತಾರೆ ಎಂಬ ಗೊಂದಲ ಹೆಚ್ಚಾಗಿದೆ. ಈಗ ಹಿಂದಿನ ಸರ್ಕಾರದಲ್ಲಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಅವರ ಟ್ವೀಟ್ ಬಹಳಷ್ಟು ಕುತೂಹಲ ಹೆಚ್ಚಿಸಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತ ಪಡೆದು ವಾರ ತುಂಬಿದರೂ ಸರ್ಕಾರ ರಚನೆಯ ಪ್ರಕ್ರಿಯೆ ನಡೆದಿಲ್ಲ. ವಾಸ್ತವವಾಗಿ ಸಿಎಂ ಸ್ಥಾನಕ್ಕೆ ಹಲವಾರು ಅಭ್ಯರ್ಥಿಗಳು ಆಕಾಂಕ್ಷಿಗಳು ಇರುವುದರಿಂದ ಶಿವರಾಜ್ ಸಿಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿರುವ ಎಲ್ಲರಿಗೂ ರಾಮ್ ರಾಮ್ ಎಂಬ ಟ್ವೀಟ್ ಸಕಾಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಆದರೆ, ಈ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಂಬಂತೆ ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ನಂತರ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಶಾಸಕರು ಮತ್ತು ಉನ್ನತ ನಾಯಕತ್ವ ನಿರ್ಧರಿಸುತ್ತದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಹೇಳಿದ್ದಾರೆ.
"ಹೈಕಮಾಂಡ್‌ನ ಮೂವರು ವೀಕ್ಷಕರು ಸೋಮವಾರ ಬೆಳಿಗ್ಗೆ ಭೋಪಾಲ್‌ಗೆ ಆಗಮಿಸುತ್ತಾರೆ. ಸಂಜೆ 4 ಗಂಟೆಗೆ ಶಾಸಕರು ಸಭೆ ಸೇರಿ ತಮ್ಮ ನಾಯಕರನ್ನು ಆಯ್ಕೆ ಮಾಡಲಿದ್ದಾರೆ. ಶಾಸಕರಿಗೆ ಆಹ್ವಾನ ಕಳುಹಿಸಲಾಗಿದೆ. ಪಕ್ಷದ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಮತ್ತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
सभी को राम-राम... pic.twitter.com/QpaOxpZyMk
— Office of Shivraj (@OfficeofSSC) December 9, 2023
ಶಿವರಾಜ್ ಸಿಂಗ್ ಚೌಹಾಣ್ ಅವರ ಟ್ವೀಟ್ ಕುರಿತು ಕೇಳಲಾದ ಪ್ರಶ್ನೆಗೆ, "ಇದು ಭಗವಾನ್ ರಾಮನ ದೇಶ. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಭಗವಾನ್ ರಾಮನ ಭವ್ಯವಾದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ನಾವು ಬೆಳಿಗ್ಗೆ ಒಬ್ಬರಿಗೊಬ್ಬರು ರಾಮ್ ಎಂದು ಹೇಳುವ ಮೂಲಕ ಶುಭಾಶಯ ಕೋರುತ್ತೇವೆ.
ರಾಮನ ಹೆಸರಿನೊಂದಿಗೆ ದಿನವನ್ನು ಪ್ರಾರಂಭಿಸುವುದು ನಮ್ಮ ಸಂಸ್ಕೃತಿ. ಬಿಜೆಪಿಯು ಕೇಡರ್ ಆಧಾರಿತ ಸಂಘಟನೆಯಾಗಿದ್ದು, ನಾಯಕತ್ವದ ಯಾವುದೇ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರು ಸ್ವೀಕರಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಅವರು ಹೇಳಿದರು.

"ನಮ್ಮ ನಾಯಕ. ಗೌರವಾನ್ವಿತ ಪ್ರಧಾನಿ, ಗೌರವಾನ್ವಿತ ಅಮಿತ್ ಶಾ ಜಿ, ಗೌರವಾನ್ವಿತ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ನಾಯಕತ್ವವು ಈ ನಿರ್ಧಾರ ತೆಗೆದುಕೊಳ್ಳುತ್ತದೆ. ನಿರ್ಧಾರವನ್ನು ಕಾರ್ಯಕರ್ತರು ಗೌರವಿಸುತ್ತಾರೆ. ಸಿಎಂ ಯಾರೆಂಬುದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತದೆ" ಎಂದು ಶರ್ಮಾ ಹೇಳಿದರು.
ಇನ್ನೊಂದು ಪ್ರಶ್ನೆಗೆ ಶಾಸಕರು ತಮ್ಮ ನಾಯಕನನ್ನು ನಿರ್ಧರಿಸುತ್ತಾರೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಪಕ್ಷದ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನು ಮಧ್ಯಪ್ರದೇಶದಲ್ಲಿ ತನ್ನ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ವೀಕ್ಷಕರನ್ನಾಗಿ ಬಿಜೆಪಿ ಶುಕ್ರವಾರ ನೇಮಿಸಿದೆ.












Click it and Unblock the Notifications