ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ ಶೇಕಡಾ 74.6ರಷ್ಟು, ಮಿಜೋರಾಂನಲ್ಲಿ 79% ಮತದಾನ

|
Google Oneindia Kannada News

Recommended Video

ಮಧ್ಯಪ್ರದೇಶ ಶೇಕಡಾ 74.6ರಷ್ಟು, ಮಿಜೋರಾಂನಲ್ಲಿ 79% ಮತದಾನ | Oneindia Kannada

ಮಧ್ಯಪ್ರದೇಶ ಹಾಗೂ ಮಿಜೋರಾಂ ವಿಧಾನಸಭೆಗಳಿಗೆ ಬುಧವಾರ ಮತದಾನ ಪೂರ್ಣಗೊಂಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಮಿಜೋರಾಂನಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಎರಡೂ ರಾಜ್ಯಗಳಲ್ಲಿ ಆಯಾ ಪಕ್ಷಗಳು ಸತತವಾಗಿ ಆಯ್ಕೆ ಆಗುತ್ತಿವೆ.

ಈ ಬಾರಿ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಶೇಕಡಾ 74.6ರಷ್ಟು ಹಾಗೂ ಮಿಜೋರಾಂನಲ್ಲಿ 79% ಅಥವಾ 7,70,395 ಮತದಾರರು ಮತದಾನ ಮಾಡಿರುವ ಬಗ್ಗೆ ವರದಿಯಾಗಿದೆ.

ನಾಲ್ಕನೇ ಬಾರಿಯ ಅವಕಾಶಕ್ಕಾಗಿ ಮಧ್ಯಪ್ರದೇಶದ ಜನರ ಎದುರು ಚೌಹಾಣ್ನಾಲ್ಕನೇ ಬಾರಿಯ ಅವಕಾಶಕ್ಕಾಗಿ ಮಧ್ಯಪ್ರದೇಶದ ಜನರ ಎದುರು ಚೌಹಾಣ್

ಮಧ್ಯಪ್ರದೇಶದಲ್ಲಿ ಮೂರು ಅವಧಿಗೆ ಮುಖ್ಯಮಂತ್ರಿ ಆಗಿರುವ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ, ಮಿಜೋರಾಂನಲ್ಲಿ ಸತತವಾಗಿ ಗೆಲ್ಲುತ್ತಿರುವ ಕಾಂಗ್ರೆಸ್ ಗೂ ಈ ಚುನಾವಣೆ ಸವಾಲಿನ ವಿಚಾರವೇ ಎಂಬುದರಲ್ಲಿ ಎರಡು ಮಾತಿಲ್ಲ. ಇಡೀ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳ ಪೈಕಿ ಮಿಜೋರಾಂ ಕೂಡ ಒಂದು. ಇಲ್ಲಿ ಬಿಜೆಪಿ ಇನ್ನೂ ಖಾತೆ ಕೂಡ ತೆರೆದಿಲ್ಲ.

Voting

ಮಧ್ಯಪ್ರದೇಶದಲ್ಲಿ ಮತದಾನ ಯಂತ್ರ ಸಮಸ್ಯೆ ಆಗಿರುವ ಬಗ್ಗೆ ನೂರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಅವುಗಳನ್ನು ಪ್ರಾಮಾಣಿಕವಾಗಿ ಬದಲಾವಣೆ ಮಾಡಬೇಕು ಎಂದು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ನಾಯಕ ಕಮಲ್ ನಾಥ್ ಮನವಿ ಮಾಡಿದ್ದರು.

ಮಧ್ಯಪ್ರದೇಶದಾದ್ಯಂತ ಮತಯಂತ್ರ ಸಮಸ್ಯೆ ಬಗ್ಗೆ ವರದಿಗಳಾಗಿವೆ. ಪ್ರಜಾಪ್ರಭುತ್ವದಲ್ಲಿ ಮತ ಎಂಬುದು ಜನರ ಧ್ವನಿ. ಅದನ್ನು ಹತ್ತಿಕ್ಕಲು ಯತ್ನಿಸುವುದು ಆತಂಕಕಾರಿ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಟ್ವೀಟ್ ಮಾಡಿದ್ದಾರೆ.

ಮಿಜೋರಾಂ ಚುನಾವಣೆ: ಆಡಳಿತ ವಿರೋಧಿ ಅಲೆ ಜಯಿಸಬಲ್ಲದೆ ಕಾಂಗ್ರೆಸ್?ಮಿಜೋರಾಂ ಚುನಾವಣೆ: ಆಡಳಿತ ವಿರೋಧಿ ಅಲೆ ಜಯಿಸಬಲ್ಲದೆ ಕಾಂಗ್ರೆಸ್?

ಮಿಜೋರಾಂ-ಮಧ್ಯಪ್ರದೇಶದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಇನ್ನು ಮಧ್ಯಪ್ರದೇಶದಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಮೂವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಚುನಾವಣೆ ಆಯೋಗ ಹತ್ತು ಲಕ್ಷ ಪರಿಹಾರ ಘೋಷಿಸಿದೆ.

ಮಧ್ಯಪ್ರದೇಶ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆ ಫಲಿತಾಂಶವು ರಾಜಸ್ತಾನ, ಛತ್ತೀಸ್ ಗಢ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಜತೆಗೆ ಡಿಸೆಂಬರ್ 11ರಂದು ಪ್ರಕಟಗೊಳ್ಳಲಿದೆ.

English summary
The provisional polling figure for Madhya Pradesh was 74.6 per cent. The corresponding drop in Mizoram was higher -- 77 per cent, down from last election's 83.4 per cent, the Election Commission said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X