ನಾಯಕನಿಗೆ ನಮನ: ಕರುಣಾನಿಧಿ ಪುಣ್ಯಸ್ಮರಣೆಗೆ ತಮಿಳಿನಲ್ಲಿ ಟ್ವೀಟ್ ಮಾಡಿದ ಡಿಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 07: ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಐದನೇ ಪುಣ್ಯಸ್ಮರಣೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.
'ನಾಯಕನಿಗೆ ನಮನ! ತಮಿಳುನಾಡಿನ ಮಾಜಿ ಸಿಎಂ, ಪ್ರಮುಖ ರಾಜಕಾರಣಿ ಮತ್ತು ಪ್ರೀತಿಯ ಜನನಾಯಕ ಎಂ. ಕರುಣಾನಿಧಿ ಅವರನ್ನು ಅವರ 5 ನೇ ಪುಣ್ಯತಿಥಿಯಂದು ಸ್ಮರಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

'ಸಾಮಾಜಿಕ ನ್ಯಾಯದ ಉದ್ದೇಶಕ್ಕಾಗಿ ಅವರು ದುಡಿದರು. ಅವರು ನೀಡಿದ ಕೊಡುಗೆಯು ಸಾಮಾನ್ಯ ಜನರ ಜೀವನವನ್ನು ತಲುಪಿತು. ಜನರ ಹೃದಯದಲ್ಲಿ ಅವರು ಹುಟ್ಟುಹಾಕಿದ ಪರಂಪರೆ ಜೀವಂತವಾಗಿರಲಿದೆ' ಎಂದು ಶಿವಕುಮಾರ್ ಹೇಳಿದ್ದಾರೆ.
ಎಂ ಕರುಣಾನಿಧಿ ಅವರ 5ನೇ ಪುಣ್ಯತಿಥಿಯ ಅಂಗವಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರು ಸೋಮವಾರ ಮರೀನಾ ಬೀಚ್‌ನಲ್ಲಿರುವ ಕರುಣಾನಿಧಿ ಸ್ಮಾರಕಕ್ಕೆ ಶಾಂತಿ ಮೆರವಣಿಗೆ ನಡೆಸಿದರು.
ಸ್ಟಾಲಿನ್‌ರಿಂದ ಶಾಂತಿ ಮೆರವಣಿಗೆ
ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ 5ನೇ ಪುಣ್ಯತಿಥಿಯ ಅಂಗವಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಇತರ ಡಿಎಂಕೆ ನಾಯಕರು ಸೋಮವಾರ ಚೆನ್ನೈನ ಮರೀನಾ ಬೀಚ್ ಶಾಂತಿ ಮೆರವಣಿಗೆ ನಡೆಸಿದರು. ಕರುಣಾನಿಧಿ ಅವರ ಸಮಾಧಿ ಮರೀನಾ ಬೀಚ್‌ನಲ್ಲಿದೆ.

1969 ಮತ್ತು 2011 ರ ನಡುವೆ ಸುಮಾರು ಎರಡು ದಶಕಗಳ ಕಾಲ ಐದು ಅವಧಿಗಳಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ ಕರುಣಾನಿಧಿ ಸೇವೆ ಸಲ್ಲಿಸಿದ್ದಾರೆ.
ಮುತ್ತುವೇಲ್ ಕರುಣಾನಿಧಿ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸಂಸದೆ ಕನಿಮೋಳಿ ಅವರ ತಂದೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಾತ.

ತಮಿಳು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಕರುಣಾನಿಧಿ ಅವರನ್ನು ಕಲೈಜ್ಞರ್ ( ಕಲಾವಿದ ) ಎಂದು ತಮಿಳುನಾಡಿನ ಜನರು ಕರೆಯುತ್ತಾರೆ. ಮುತ್ತಮಿಜ್ ಅರಿಗ್ನಾರ್ (ತಮಿಳು ವಿದ್ವಾಂಸ) ಎಂದು ಬಣ್ಣಿಸುತ್ತಾರೆ. ಕರುಣಾನಿಧಿ ಅವರು 6,863 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮಿಳುನಾಡಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸಿಎಂ ಆಗಿದ್ದಾರೆ.
ಎಂ ಕರುಣಾನಿಧಿ ಅವರು ದ್ರಾವಿಡ ಚಳುವಳಿಯನ್ನು ಹುಟ್ಟು ಹಾಕಿದವರಲ್ಲಿ ಪ್ರಮುಖರು ನಾಯಕರು.












Click it and Unblock the Notifications