ಮೋದಿ ಪ್ರತಿಸ್ಪರ್ಧಿ ಮಧುಸೂದನ ಮಿಸ್ತ್ರಿ ಅರೆಸ್ಟ್

ವಡೋದರಾ, ಏ.3: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬ್ಯಾನರ್/ ಪೋಸ್ಟರುಗಳನ್ನು ಹರಿದುಹಾಕಿದ ಕಾಂಗ್ರೆಸ್ ಅಭ್ಯರ್ಥಿ ಮಧುಸೂದನ ಮಿಸ್ತ್ರಿ ಅವರನ್ನು ಇಂದು ಗುರುವಾರ ಬಂಧಿಸಿದ್ದಾರೆ. ನಗರದ ಡಿಸಿಪಿ ಡೀಪಾಂಕರ್ ತ್ರಿವೇದಿ ಅವರು ಮಿಸ್ತ್ರಿ ಬಂಧನವನ್ನು ಖಚಿತಪಡಿಸಿದರು.

ಮಧುಸೂದನ ಮಿಸ್ತ್ರಿ ಪುಂಡಾಟಿಕೆ: ನಗರದ ದಂಡಿಯಾ ಬಜಾರ್ ಪ್ರದೇಶದಲ್ಲಿ ಹಾಕಲಾಗಿದ್ದ ಜಾಹೀರಾತುಗಳಲ್ಲಿ ನರೇಂದ್ರ ಮೋದಿ ಅವರ ಫೋಟೋಗಳು ರಾರಾಜಿಸುತ್ತಿದ್ದವು. ಅದನ್ನು ಕಂಡು ಕೆರಳಿದ ಕಾಂಗ್ರೆಸ್ ಅಭ್ಯರ್ಥಿ/ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಖುದ್ದಾಗಿ ಸ್ಥಳಕ್ಕೆ ತೆರಳಿ ಫೋಟೋಗಳು ಹರಿಯಲಾರಂಭಿಸಿದ್ದಾರೆ. ಇದನ್ನು ಕಂಡ ಸ್ಥಳದಲ್ಲಿಯೇ ಇದ್ದ ಪೊಲೀಸರು ತಕ್ಷಣ ಮಧುಸೂದನ ಮಿಸ್ತ್ರಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ls-polls-modi-rival-madhusudan-mistry-held-in-vadodara

ಮಧುಸೂದನ ಮಿಸ್ತ್ರಿ ಜತೆಗೆ ಇನ್ನೂ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಿಸ್ತ್ರಿ ತಂಡವು ರಸ್ತೆ ವಿಭಜಕಗಳಲ್ಲಿ ಹಾಕಲಾಗಿದ್ದ ಮೋದಿ ಜಾಹೀರಾತುಗಳಿಗೆ ಮಸಿ ಬಳಿಯುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮಧುಸೂದನ ಮಿಸ್ತ್ರಿ ರಸ್ತೆ ವಿಭಜಕದಲ್ಲಿದ್ದ ಕಂಬವನ್ನು ಹತ್ತಿ ಮೋದಿ ಜಾಹೀರಾತನ್ನು ಹರಿದುಹಾಕಿ, ಅದರ ಮೇಲೆ ತಮ್ಮ ಭಾವಚಿತ್ರವಿರುವ ಜಾಹೀರಾತನ್ನು ಹಾಕುವ ಕಾಯಕದಲ್ಲಿ ತೊಡಗಿದ್ದರು. ಮಧುಸೂದನ ಮಿಸ್ತ್ರಿ ಮತ್ತು ಅವರ ತಂಡವು ಈ ಭಾಗದಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲು ಸ್ಥಳೀಯ ಪೊಲೀಸರಿಂದ ಪೂರ್ವಾನುಮತಿಯನ್ನು ಪಡೆದಿರಲಿಲ್ಲ. ಘಟನಾವಳಿಯ ವಿಡಿಯೋ ನೋಡಿದ ಬಳಿಕ ಮಧುಸೂದನ ಮಿಸ್ತ್ರಿ ತಂಡದ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಡಿಸಿಪಿ ತ್ರಿವೇದಿ ಹೇಳಿದ್ದಾರೆ.

Lok Sabha polls - Narendra Modi rival Madhusudan Mistry held in Vadodara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+