LPG Price: ಗೃಹಬಳಕೆ ಎಲ್‌ಪಿಜಿ ಬಳಕೆದಾರರಿಗೆ 5 ದಿನಗಳಲ್ಲಿ ಭರ್ಜರಿ ಸಿಹಿಸುದ್ದಿ
LPG price cut November 2025: ಅಕ್ಟೋಬರ್ ತಿಂಗಳು ಮುಗಿಯಲು ಇನ್ನು ಐದು ದಿನವಷ್ಟೇ ಬಾಕಿ ಇದೆ. ಸಾಮಾನ್ಯವಾಗಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರಗಳು ಏರಿಳಿತ ಕಾಣುತ್ತವೆ. ಹೀಗಾಗಿ ನವೆಂಬರ್ 1ರಂದೇ ಗೃಹಬಳಕೆ ಎಲ್‌ಪಿಜಿ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ಸಿಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಸಾಮಾನ್ಯವಾಗಿ ಕೆಲ ತಿಂಗಳು ಎಲ್‌ಪಿಜಿ ದರವು ತುಸು ಕಡಿಮೆಯಾಗಿ ನಿರಾಳ ಮೂಡಿಸಿತ್ತು. ಆದರೆ ನವೆಂಬರ್‌ನಿಂದ ದರ ಭಾರೀ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ದೇಶದಾದ್ಯಂತ ಈಗ ಕೋಟಿಗಟ್ಟಲೆ ಎಲ್‌ಪಿಜಿ ಬಳಕೆದಾರರಿದ್ದಾರೆ. ಸದ್ಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ಕಾರವು ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿತ ಘೋಷಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಹೊಸ ದರಗಳು ನವೆಂಬರ್ ಮೊದಲ ದಿನದಿಂದಲೇ ಜಾರಿಗೆ ಬರಲಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಇದು ಅತಿದೊಡ್ಡ ಬೆಲೆ ಕಡಿತಗಳಲ್ಲಿ ಒಂದಾಗಲಿದೆ. ಎಲ್‌ಪಿಜಿಯನ್ನು ಕೈಗೆಟುಕುವಂತೆ ಮಾಡುವ ಸರ್ಕಾರದ ಪ್ರಯತ್ನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಮನೆಯ ವೆಚ್ಚಗಳು ಸಾಮಾನ್ಯವಾಗಿ ಹೆಚ್ಚಾಗುತ್ತಿದ್ದು, ದರ ಇಳಿಕೆಯಿಂದ ಗ್ರಾಹಕರು ನೆಮ್ಮದಿಯಾಗಿ ಇರಲಿದ್ದಾರೆ.

ಬೆಲೆ ಎಷ್ಟು ಕಡಿತ?
ಲಕ್ಷಾಂತರ ಕುಟುಂಬಗಳು ದಿನನಿತ್ಯದ ಅಡುಗೆಗಾಗಿ ಬಳಸುವ 14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳ ಮೇಲೆ ಬೆಲೆ ಕಡಿತವು ನೇರ ಪರಿಣಾಮ ಬೀರಲಿದೆ. ಹಣದುಬ್ಬರ ಮತ್ತು ಇಂಧನ ವೆಚ್ಚಗಳು ಗಗನಕ್ಕೇರಿರುವ ಸಮಯದಲ್ಲಿ, ಈ ನಿರ್ಧಾರವು ರಿಲೀಫ್ ನೀಡಲಿದೆ. ಅಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೆ ಈಗಾಗಲೇ ಪ್ರತಿ ಮರುಪೂರಣಕ್ಕೆ ₹300ರವರೆಗೆ ಸರ್ಕಾರಿ ಸಬ್ಸಿಡಿ ನೀಡಲಾಗುತ್ತಿದೆ. ಇದರಿಂದ ಒಟ್ಟು ಉಳಿತಾಯ ಇನ್ನೂ ಹೆಚ್ಚಾಗಿದೆ. ಈ ಬೆಲೆ ಕಡಿತದಿಂದಾಗಿ ಕಡಿಮೆ ಆದಾಯದ ಕುಟುಂಬಗಳ ಮೇಲಿನ ಆರ್ಥಿಕ ಒತ್ತಡ ಇಳಿಯಲಿದೆ. ಅಲ್ಲದೆ ಶುದ್ಧ ಅಡುಗೆ ಇಂಧನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹250ರವರೆಗೆ ಕಡಿತ ಕಾಣುವ ನಿರೀಕ್ಷೆ ಇದೆ. ಹೀಗಾಗಿ ದಿನನಿತ್ಯದ ಜೀವನದ ಅಗತ್ಯ ಭಾಗವಾಗಿ ಅಡುಗೆ ಅನಿಲವನ್ನು ಅವಲಂಬಿಸಿರುವ ಮನೆಗಳಿಗೆ ಇದರಿಂದ ಭಾರೀ ಅನುಕೂಲವಾಗಲಿದೆ. ಒಂದೆಡೆ ಜಾಗತಿಕವಾಗಿ ಇಂಧನ ಬೆಲೆಗಳು ಏರಿಳಿತ, ದೇಶೀಯ ಹಣದುಬ್ಬರದಿಂದ ಆಹಾರ ಮತ್ತು ಮನೆಯ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಸಂದರ್ಭದಲ್ಲಿ ಬೆಲೆ ಕಡಿತವು ತಕ್ಷಣದ ಆರ್ಥಿಕ ಪರಿಹಾರ ಎನ್ನಲಾಗಿದೆ. ತಿಂಗಳಿಗೆ ಎರಡು ಸಿಲಿಂಡರ್ ಬಳಸುವ ಕುಟುಂಬಕ್ಕೆ ಒಟ್ಟಾರೆಯಾಗಿ ವಾರ್ಷಿಕ ಉಳಿತಾಯ ₹5,000ಕ್ಕೂ ಹೆಚ್ಚು ಮೀರಬಹುದು ಎಂದು ಅಂದಾಜಿಸಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಕಳೆದ ತಿಂಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 51.50 ರೂಪಾಯಿಗಳಷ್ಟು ಕಡಿಮೆ ಮಾಡಿದ್ದವು. ಪರಿಷ್ಕರಣೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಈಗ 1,580 ರೂಪಾಯಿಗಳಿಗೆ ಲಭ್ಯವಾಗುತ್ತಿದೆ. ಆದರೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಇಳಿಕೆಯಿಂದ ಎಲ್‌ಪಿಜಿ ಸಿಲಿಂಡರ್ ಬಳಸುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಪ್ರಯೋಜನವಾಗಿತ್ತು. ಈಗ ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೂ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ.












Click it and Unblock the Notifications