LPG Gas: ಎಲ್‌ಪಿಜಿ ಗ್ಯಾಸ್‌ಗೆ ಹೆಚ್ಚುವರಿ ಹಣ ಕಟ್ಟುತ್ತೀರಾ? ಈ ಹೊರೆ ತಪ್ಪಿಸುವುದ್ಹೇಗೆ? ಇಲ್ಲಿದೆ ಮಹತ್ವದ ಮಾಹಿತಿ

LPG: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಂದ ತುಂಬಾ ದಿನಗಳಿಂದಲೂ ಗಂಭೀರ ಆರೋಪ ಕೇಳಿಬರುತ್ತಿದೆ. ಅದುವೇ ಗ್ಯಾಸ್‌ ಡೆಲಿವರಿ ಸಿಬ್ಬಂದಿ ಹೆಚ್ಚುವರಿಯಾಗಿ ಶುಲ್ಕ ಪಡೆಯುತ್ತಾರೆ ಎಂದು. ಆದ್ದರಿಂದಲೇ ಇದೀಗ ಆಯಾ ಅನಿಲ ಕಂಪನಿಗಳು ಹೀಗೆ ಹಣ ಪಡೆದರೆ ನಮ್ಮನ್ನ ಸಂಪರ್ಕಿಸಬಹುದು, ಸಮಸ್ಯೆ ಬಗೆಹರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿವೆ.

ಮನೆಬಾಗಿಲಿಗೆ ಗ್ಯಾಸ್ ಸಿಲಿಂಡರ್ ತಲುಪಿಸುವ ವೇಳೆ ಡೆಲಿವರಿ ಸಿಬ್ಬಂದಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುವುದು ಮತ್ತು ಗ್ರಾಹಕರೊಂದಿಗೆ ಗಲಾಟೆ ಮಾಡುವ ಆರೋಪಗಳು ಕೇಳಿಬರುತ್ತಿವೆ. ಆದರೆ ಗ್ರಾಹಕರು ತಮ್ಮ ಗ್ಯಾಸ್ ರಸೀದಿಯಲ್ಲಿ ನಮೂದಿಸಲಾದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಸಾರಿಗೆ ಅಥವಾ ಸೇವಾ ಶುಲ್ಕವನ್ನು ನೀಡುವ ಅಗತ್ಯವಿಲ್ಲ ಎಂದು ನಿಯಮಗಳು ಸ್ಪಷ್ಟಪಡಿಸುತ್ತವೆ.

LPG Gas cylinder Delivery Rules No Extra Charges Allowed in All Over India Know How to Complain

ಡೆಲಿವರಿ ಶುಲ್ಕದ ಕುರಿತು ನಿಯಮಗಳು ಹೇಳೋದೇನು?

ಸಾಮಾನ್ಯವಾಗಿ ಆನ್‌ಲೈನ್ ಅಥವಾ ಫೋನ್ ಮೂಲಕ ಬುಕ್ ಮಾಡಿದ 3 ರಿಂದ 4 ದಿನಗಳಲ್ಲಿ ಸಿಲಿಂಡರ್ ಮನೆಗೆ ತಲುಪುತ್ತದೆ. ಗ್ಯಾಸ್ ಏಜೆನ್ಸಿಯ ಗೋಡೌನ್ 5 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಮನೆಬಾಗಿಲಿಗೆ ಸಿಲಿಂಡರ್ ತಲುಪಿಸಲು ಯಾವುದೇ ಪ್ರತ್ಯೇಕ ಸಾರಿಗೆ ಶುಲ್ಕ ಇರುವುದಿಲ್ಲ. ಒಂದು ವೇಳೆ ವಿಳಾಸವು 5 ರಿಂದ 15 ಕಿ.ಮೀ. ದೂರದಲ್ಲಿದ್ದರೆ, ಅನ್ವಯವಾಗುವ ಸಾರಿಗೆ ವೆಚ್ಚವನ್ನು ಕಂಪನಿಯು ಗ್ಯಾಸ್ ಬಿಲ್‌ನಲ್ಲೇ ಸೇರಿಸಿರುತ್ತದೆ. ಅದರಲ್ಲಿ ನಮೂದಿಸಿದ ಮೊತ್ತದಲ್ಲೇ ಈ ಎಲ್ಲ ವೆಚ್ಚಗಳು ಸೇರಿರುತ್ತವೆ. ಆದ್ದರಿಂದ ಡೆಲಿವರಿ ಬಾಯ್‌ಗಳಿಗೆ ಪ್ರತ್ಯೇಕವಾಗಿ ಹಣ ನೀಡುವುದು ಸಂಪೂರ್ಣ ನಿಯಮಬಾಹಿರವಾಗಿದೆ.

ಹೆಚ್ಚುವರಿ ಹಣಕ್ಕೆ ಒತ್ತಾಯಿಸಿದರೆ ದೂರು ನೀಡುವುದ್ಹೇಗೆ?

* ಡೆಲಿವರಿ ಸಿಬ್ಬಂದಿ ಬಿಲ್ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದರೆ ಅಥವಾ ಬಲವಂತ ಮಾಡಿದರೆ ಗ್ರಾಹಕರು ಅಧಿಕೃತವಾಗಿ ದೂರು ದಾಖಲಿಸಬಹುದು.

* ತಕ್ಷಣವೇ ನಿಮ್ಮ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕರಿಗೆ ದೂರು ನೀಡಿ.

* ಏಜೆನ್ಸಿಯಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ, ನಿಮ್ಮ ಗ್ಯಾಸ್ ಸರಬರಾಜು ಕಂಪನಿಯ ಉಚಿತ ಸಹಾಯವಾಣಿಗೆ ಕರೆ ಮಾಡಬಹುದು.

ಇಂಧನ ಕಂಪನಿಗಳ ಸಹಾಯವಾಣಿಗಳ ವಿವರ

* Indane Gas: 7718955555

* Bharat Gas: 1800224344

* HP Gas: 9222201122

ಸಾಮಾನ್ಯ ಸಹಾಯವಾಣಿ, ಸಾಮಾಜಿಕ ಜಾಲತಾಣ ದೂರು..

* ಎಲ್ಲಾ ಗ್ಯಾಸ್ ಕಂಪನಿಗಳ ಗ್ರಾಹಕರು 1800-233-3555 ಎಂಬ ಉಚಿತ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು.

* ಇದರ ಜೊತೆಗೆ, ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆ MoPNG e-Seva ಖಾತೆಯನ್ನು (@MoPNG_eSeva) X (ಟ್ವಿಟರ್) ಅಥವಾ ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡುವ ಮೂಲಕ ನೇರವಾಗಿ ದೂರು ಸಲ್ಲಿಸಬಹುದು.

ಎಲ್‌ಪಿಜಿ ಬಳಕೆದಾರರಿಗೆ ಮಹತ್ವದ ಸಲಹೆಯೊಂದನ್ನ ನೀಡಲಾಗಿದೆ. ಸಿಲಿಂಡರ್ ಪಡೆಯುವಾಗ ಬಿಲ್ ಮೊತ್ತವನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಿ. ನಿಯಮಬಾಹಿರವಾಗಿ ವಸೂಲಿ ಮಾಡುವ ಹೆಚ್ಚುವರಿ ಹಣವನ್ನು ತಡೆಗಟ್ಟುವ ಹಕ್ಕು ಗ್ರಾಹಕರಿಗೆ ಇದೆ.

ಇ-ಕೆವೈಸಿ ಮಾಡಿಸದಿದ್ದರೆ ಏನಾಗಲಿದೆ?

ಇನ್ನೂ ಎಲ್‌ಪಿಜಿ ಇ-ಕೆವೈಸಿ ಪೂರ್ಣಗೊಳಿಸುವ ಅವಧಿಯನ್ನು ಸೆಪ್ಟೆಂಬರ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಹಲವು ಬಾರಿ ಸಮಯ ನೀಡಲಾಗಿದ್ದು, ಮತ್ತೊಮ್ಮೆ ದಿನಾಂಕ ವಿಸ್ತರಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಆದ್ದರಿಂದ ಈಗಲೇ ಈ ಪ್ರಕ್ರಿಯೆ ಮುಗಿಸಿಕೊಳ್ಳುವುದು ಉತ್ತಮ.

ನಿಗದಿತ ಸಮಯದೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಗ್ರಾಹಕರಿಗೆ ಸಿಗುವ ಗ್ಯಾಸ್ ಸಬ್ಸಿಡಿ ಹಂತ-ಹಂತವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಹೀಗೆ ಆದ್ರೆ ಸಿಲಿಂಡರ್ ಖರೀದಿಸುವಾಗ ಪೂರ್ಣ ಚಿಲ್ಲರೆ ಮಾರುಕಟ್ಟೆ ದರವನ್ನು ಪಾವತಿಸಬೇಕಾಗಬಹುದು. ಇದನ್ನು ಪೂರ್ಣಗೊಳಿಸಲು ಗ್ರಾಹಕರ ವೈಯಕ್ತಿಕ ವಿವರಗಳು, ಗ್ಯಾಸ್ ಸಂಪರ್ಕದ ಮಾಹಿತಿ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+