LPG: ಗೃಹಬಳಕೆ ಎಲ್‌ಪಿಜಿ ಬಳಕೆದಾರರಿಗೆ ನೆಮ್ಮದಿ ಸುದ್ದಿ

LPG: ದೇಶಾದ್ಯಂತ ಗೃಹಬಳಕೆಯ (ಎಲ್‌ಪಿಜಿ) ಬಳಸುತ್ತಿರುವವರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಇ-ಕೆವೈಸಿ ಪೂರ್ಣಗೊಳಿಸಲು ನೀಡಿದ್ದ ಡೆಡ್‌ಲೈನ್ ಅನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಗೃಹಬಳಕೆಯ ಎಲ್‌ಪಿಜಿ (LPG) ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಇ-ಕೆವೈಸಿ ಪೂರ್ಣಗೊಳಿಸಲು ನೀಡಲಾಗಿದ್ದ ಆಗಸ್ಟ್ 23ರ ಅಂತಿಮ ಗಡುವನ್ನು ಈಗ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಕೊನೆಯ ದಿನಗಳಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.

LPG e-KYC Deadline Extended to August 31 2026 Check New Rules and Process Know complete details

ತೈಲ ಸಂಸ್ಥೆಗಳ ಸ್ಪಷ್ಟನೆ ಏನು?

ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಹೆಚ್‌ಪಿಸಿಎಲ್ ತೈಲ ಮಾರಾಟ ಸಂಸ್ಥೆಗಳು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುವುದನ್ನು ಮುಂದುವರೆಸಲು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿವೆ. ಇನ್ನೂ ಇ-ಕೆವೈಸಿ ಮಾಡಿಸದ ಗ್ರಾಹಕರಿಗೆ ಜಾಗೃತಿ ಮೂಡಿಸಲು ಎಸ್‌ಎಮ್‌ಎಸ್ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತಿದೆ.

ದೇಶಾದ್ಯಂತ ಒಟ್ಟು 32.97 ಕೋಟಿ ಸಕ್ರಿಯ ಎಲ್‌ಪಿಜಿ ಗ್ರಾಹಕರಿದ್ದು, ಈ ಪೈಕಿ ತೆಲಂಗಾಣ ರಾಜ್ಯದಲ್ಲೇ 1.26 ಕೋಟಿ ಗ್ರಾಹಕರಿದ್ದಾರೆ. ತೆಲಂಗಾಣದಲ್ಲಿ ಈಗಾಗಲೇ ಶೇಕಡಾ 82ರಷ್ಟು ಗ್ರಾಹಕರು ಇ-ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ದಿನವೊಂದಕ್ಕೆ ಸುಮಾರು 20,000 ದಿಂದ 30,000 ಜನರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.

ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ..

ಗ್ಯಾಸ್ ಏಜೆನ್ಸಿಗಳಿಗೆ ನೇರವಾಗಿ ತೆರಳಿ ಇ-ಕೆವೈಸಿ ಮಾಡಿಸುವುದರ ಜೊತೆಗೆ, ಆಯಾ ಗ್ಯಾಸ್ ಕಂಪನಿಗಳ ಮೊಬೈಲ್ ಆಪ್‌ಗಳ ಮೂಲಕವೂ (IndianOil ONE, HP Pay, Hello BPCL) ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಆಗಸ್ಟ್ 31ರ ನಂತರವೂ ಸಿಲಿಂಡರ್ ಪೂರೈಕೆ ತಕ್ಷಣವೇ ಸ್ಥಗಿತಗೊಳ್ಳುವುದಿಲ್ಲ. ಆದರೆ ಇ-ಕೆವೈಸಿ ಪೂರ್ಣಗೊಳಿಸದವರಿಗೆ ಗ್ಯಾಸ್ ಸಿಲಿಂಡರ್ ಯಾವ ದರದಲ್ಲಿ ಪೂರೈಕೆಯಾಗಲಿದೆ ಎಂಬುದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನೀಡುವ ಮುಂದಿನ ಆದೇಶಗಳನ್ನ ಆಧರಿಸಿರುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗ್ರಾಹಕರ ನೂಕುನುಗ್ಗಲನ್ನು ತಪ್ಪಿಸಲು ಮತ್ತು ಎಲ್ಲರಿಗೂ ಅವಕಾಶ ನೀಡಲು ತೈಲ ಸಂಸ್ಥೆಗಳು ಆಗಸ್ಟ್ 31ರ ವರೆಗೂ ಸಮಯಾವಕಾಶ ಕಲ್ಪಿಸಿವೆ. ಸಬ್ಸಿಡಿ ಮತ್ತು ಯಾವುದೇ ತೊಂದರೆಯಿಲ್ಲದೆ ಪೂರೈಕೆಗಾಗಿ ಗ್ರಾಹಕರು ಆದಷ್ಟು ಬೇಗ ಇ-ಕೆವೈಸಿ ಪೂರ್ಣಗೊಳಿಸಲು ಮನವಿ ಮಾಡಲಾಗಿದೆ.

ಇ-ಕೆವೈಸಿ ಪ್ರಕ್ರಿಯೆಗೆ ಸರಳ ವಿಧಾನಗಳು

* ಗೂಗಲ್ ಪ್ಲೇ ಸ್ಟೋರ್‌ನಿಂದ ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ (Indane Oil One, HP Pay, ಅಥವಾ Hello BPCL) ಮತ್ತು ಇದರೊಂದಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ 'Aadhaar FaceRD' ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

* ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಗ್ರಾಹಕರ ನೋಂದಣಿ ಸಂಖ್ಯೆ ಇರಬೇಕಾಗುತ್ತದೆ.

* ಆ್ಯಪ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ ಲಾಗಿನ್ ಆಗಿ.

* ಇ-ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಫೋನ್ ಕ್ಯಾಮೆರಾ ಮೂಲಕ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ. ಆಗ ಕೆಲವೇ ನಿಮಿಷಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯವಾಗುತ್ತದೆ.

ಒಂದು ವೇಳೆ ಮೊಬೈಲ್ ಆ್ಯಪ್ ಬಳಸಿ ಇ-ಕೆವೈಸಿ ಮಾಡಲು ಸಾಧ್ಯವಾಗದಿದ್ದರೆ ಅಥವಾ ತಾಂತ್ರಿಕ ಸಮಸ್ಯೆಗಳು ಎದುರಾದರೆ ಚಿಂತಿಸುವ ಅಗತ್ಯವಿಲ್ಲ. ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ನೇರವಾಗಿ ಭೇಟಿ ನೀಡಬಹುದು. ಅಲ್ಲಿ ಆಧಾರ್ ಕಾರ್ಡ್, ಗ್ಯಾಸ್ ಪಾಸ್‌ಬುಕ್ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ, ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್ ಮೂಲಕ ಸುಲಭವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಒಟ್ಟಿನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ಗ್ರಾಹಕರಿಗೆ ನೆಮ್ಮದಿ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+