• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಘರ್ ವಾಪಸಿ, ಲವ್ ಜಿಹಾದ್, ಕರೀನಾ ಕಪೂರ್ ಚಿತ್ರ :ಸೈಫ್ ಗರಂ

By Mahesh
|

ನವದೆಹಲಿ, ಜ.8: ಲವ್ ಜಿಹಾದ್, ಘರ್ ವಾಪಸಿ ಕಾರ್ಯಕ್ರಮಗಳು ಮೋದಿ ಸರ್ಕಾರವನ್ನು ಬಿಡದಂತೆ ಕಾಡುತ್ತಿವೆ. ಮುಖಂಡರ ವಿವಾದಾತ್ಮಕ ಹೇಳಿಕೆಗಳು ಒಂದೆಡೆಯಾದರೆ, ವಿಎಚ್ ಪಿ ಮಾಡಿರುವ ಪ್ರಮಾದ ಈಗ ಭಾರಿ ಚರ್ಚೆಗೆ ಗುರಿಯಾಗಿದೆ.

ವಿಶ್ವ ಹಿಂದೂ ಪರಿಷತ್​ ನ ದುರ್ಗಾವಾಹಿನಿ ಘಟಕ ಹೊರಡಿಸುವ ‘ಹಿಮಾಲಯ ಧ್ವನಿ' ಪತ್ರಿಕೆಯಲ್ಲಿ ಲವ್ ಜಿಹಾದ್ ಹಾಗೂ ಘರ್ ವಾಪಸಿ ಬಗ್ಗೆ ಲೇಖನ ಬರೆಯಲಾಗಿದೆ. ಪತ್ರಿಕೆಯ ಮುಖಪಟದಲ್ಲಿ ನಟಿ ಕರೀನಾ ಕಪೂರ್ ಚಿತ್ರ ಬಳಸಲಾಗಿದೆ. ಕರೀನಾ ಅವರ ಅರ್ಧ ಮುಖ ಕಾಣಿಸುತ್ತಿದ್ದು, ಇನ್ನರ್ಧ ಮುಖವನ್ನು ನಕಾಬ್(ಬುರ್ಖಾದಿಂದ) ಮುಚ್ಚಲಾಗಿದೆ. ಧರ್ಮಾಂತರವೇ ರಾಷ್ಟ್ರಾಂತರ ಎಂಬ ಅಡಿ ಬರಹ ನೀಡಲಾಗಿದೆ.

ಪತ್ರಿಕೆಯಲ್ಲಿ ಬಂದಿರುವ ಲೇಖನದಲ್ಲಿ ಲವ್ ಜಿಹಾದ್ ಬಗ್ಗೆ ಉಲ್ಲೇಖ ಮಾಡಲಾಗಿದೆ. ಲವ್ ಜಿಹಾದ್ ಹೆಸರಲ್ಲಿ ಮುಸ್ಲೀಮರನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಹಿಂದೂ ಯುವತಿಯರನ್ನು ಮರು ಮಂತಾಂತರದ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂದು ಬರೆಯಲಾಗಿದೆ. ಈ ಬಗ್ಗೆ ತಿಳಿದು ಕೊಂಡ ಕರೀನಾ ಕಪೂರ್ ಪತಿ ನಟ ಸೈಫ್ ಅಲಿಖಾನ್ ಅವರು ವಿಎಚ್‌ಪಿಯ ಪತ್ರಿಕೆಯ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯಲ್ಲಿ ಹಿಂದೂಪರ ಸಂಘಟನೆಗಳು ಆಯೋಜಿಸಿರುವ 'ಘರ್ ವಾಪಸಿ' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಲಾಗಿದೆ.ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ನಟ ಸೈಫ್ ಅಲಿಖಾನ್ ರನ್ನು ಮದುವೆಯಾಗಿದ್ದಾರೆ. ಆದರೂ ಇಬ್ಬರು ಪರಸ್ಪರ ತಮ್ಮ ಧರ್ಮಗಳನ್ನು ಗೌರವಿಸುತ್ತಿದ್ದು, ಇಬ್ಬರು ತಮ್ಮ-ತಮ್ಮ ಧರ್ಮಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೆ ಇದನ್ನು ಯಾರೂ ಪಾಲನೆ ಮಾಡುತ್ತಿಲ್ಲ ಎನ್ನುವ ಅರ್ಥದಲ್ಲಿ ಕರೀನಾ ಅವರ ಭಾವಚಿತ್ರವನ್ನು ಬಳಸಲಾಗಿದೆ ಎಂದು ವಿಎಚ್‌ಪಿ ಸಮರ್ಥನೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಪಾದಕೀಯ ಮಂಡಳಿಯ ರಜನಿ ತುಕ್ರಾಲ್, ಲವ್ ಜಿಹಾದ್ ಬಗ್ಗೆ ಅನೇಕ ಚರ್ಚೆಗಳಾಗಿವೆ. ಪಾಕಿಸ್ತಾನ ಹಾಗೂ ಭಾರತ ಇಬ್ಭಾಗವಾಗಲು ಮತಾಂತರವೂ ಕಾರಣ. ಓರ್ವ ಹೆಣ್ಣು ಲವ್ ಜಿಹಾದ್ ಮೂಲಕ ಮುಸ್ಲಿಂ ಯುವಕನನ್ನು ವರಿಸಿ ಇಸ್ಲಾಂ ಧರ್ಮ ಅನುಸರಿಸಬಹುದಾದರೆ, ತನ್ನ ಮೂಲ ಧರ್ಮ ಚಿಂತನೆಗೆ ಬೆಲೆ ಕೊಟ್ಟು ಮರು ಮತಾಂತರ ಏಕೆ ಆಗಬಾರದು. ಆಕೆಯ ಹಕ್ಕನ್ನು ಏಕೆ ಕಸಿದುಕೊಳ್ಳಲಾಗುತ್ತಿದೆ. ಜಾತ್ಯಾತೀತ ಪಕ್ಷಗಳು ಈ ಬಗ್ಗೆ ಏಕೆ ಪ್ರಶ್ನಿಸುತ್ತಿಲ್ಲ ಎಂದು ಪತ್ರಿಕೆಯ ಮುಖಪುಟ ಹಾಗೂ ಲೇಖನವನ್ನು ಸಮರ್ಥಿಸಿಕೊಂಡಿದ್ದಾರೆ.

ಐದಾರು ವರ್ಷಗಳ ಕಾಲ ಲಿವ್ ಇನ್ ಸಂಬಂಧದಲ್ಲಿದ್ದ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅವರು 2012ರಲ್ಲಿ ಮದುವೆಯಾಗಿದ್ದರು. ಈಗ ವಿಎಚ್ ಪಿ ಪತ್ರಿಕೆಯಲ್ಲಿ ಕರೀನಾ ಅವರ ಚಿತ್ರ ಬಳಕೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reportedly young women's wing of the Vishwa Hindu Parishad (VHP) Durga Vahini has launched a fresh campaign in support of Ghar Wapsi campaign, which recently created uproar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more