ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಇ-ಹುಂಡಿ ಮೂಲಕ ಕಾಣಿಕೆ ಹಾಕಿ

Posted By:
Subscribe to Oneindia Kannada

ತಿರುವನಂತಪುರಂ, ನವೆಂಬರ್ 24: ನೋಟು ಬ್ಯಾನ್ ಬಿಸಿ ದೇವರನ್ನು ಬಿಟ್ಟಿಲ್ಲ. ಹಳೆ ನೋಟುಗಳು ರಾಶಿ ರಾಶಿಯಾಗಿ ಕಾಣಿಕೆ ರೂಪದಲ್ಲಿ ಹುಂಡಿ ಸೇರುತ್ತಿವೆ. ಈಗ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನೋಟು ಸಮಸ್ಯೆಗೆ ಪರಿಹಾರ ರೂಪವಾಗಿ ಇ-ಹುಂಡಿಯನ್ನು ಗುರುವಾರ (ನವೆಂಬರ್ 24) ದಿಂದ ಪರಿಚಯಿಸಲಾಗಿದೆ.

ನವೆಂಬರ್ 8ರ ಮಧ್ಯರಾತ್ರಿ 500 ಹಾಗೂ 1,000 ರುಪಾಯಿ ನಿಷೇಧಿಸಲಾಗಿದ್ದು, ಭಕ್ತಾದಿಗಳು ಕೂಡಿಟ್ಟ ಹಣವನ್ನು ಭಗವಂತನ ಪಾದಕ್ಕೆ ಅರ್ಪಿಸುತ್ತಿದ್ದಾರೆ. [ಬೆಂಗಳೂರಿನಿಂದ ಶಬರಿಮಲೆಗೆ ರಾಜಹಂಸ ಬಸ್]

Lord Ayyappa will accept cards now, E-hundi at Sabarimala

ಈಗ ಶಬರಿಮಲೆ ದೇಗುಲಕ್ಕೆ ಭಕ್ತಾದಿಗಳು ಇ ಹುಂಡಿ ಮೂಲಕ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಕಾಣಿಕೆ ಸಲ್ಲಿಸಬಹುದಾಗಿದೆ. ಆಳಪುಳ ಸಬ್ ಕಲೆಕ್ಟರ್ ಇ ಚಂದ್ರಶೇಖರ್ ಅವರು ಇ- ಹುಂಡಿ ಸೇವೆಯನ್ನು ಕಾರ್ಡ್ ಸ್ವೈಪ್ ಮಾಡುವ ಉದ್ಘಾಟಿಸಿ ಮೊದಲ ಕಾಣಿಕೆ ಸಲ್ಲಿಸಿದರು.[ಶಬರಿಮಲೆ: ಹೆಸರು ಬದಲಾವಣೆ ಹಿಂದಿನ ಪ್ರಮುಖ ಕಾರಣ ಇದು]

ಕಾಣಿಕೆ ಸಲ್ಲಿಸಲು ಯಾವುದೇ ಮಿತಿ ಇಲ್ಲ, 1 ರೂಪಾಯಿಯಿಂದ ನಿಮ್ಮ ಶಕ್ತ್ಯಾನುಸಾರವಾಗಿ ಎಷ್ಟು ಬೇಕಾದರೂ ದೇವರಿಗೆ ಕಾಣಿಕೆ ಸಲ್ಲಿಸಬಹುದು ಎಂದು ತಿರುವಾಂಕೂರು ದೇವಸ್ಥ ಮಂಡಳಿಯ ಸದಸ್ಯ ಅಜಯ ಥಾರಯಿಲ್ ಹೇಳಿದ್ದಾರೆ.

ನವೆಂಬರ್ 16ರಿಂದ ಮೂರು ತಿಂಗಳ ಮಹಾ ಮಂಡಲಂ ಮಕರವಿಳಕ್ಕು ಹಬ್ಬ ಆರಂಭವಾಗಿದೆ. ಜನವರಿ 14ರಂದು ಮಹಾಪೂಜೆ, ಮಕರ ಜ್ಯೋತಿ ದರ್ಶನ ಪ್ರಾಪ್ತಿಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: E-hundi at Sabarimala now
English summary
The Ayyappa swamy temple at Sabarimala introduced e-hundis on Thursday in a bid to sail over cash crunch in the country following demonetisation of Rs 500 and Rs 1,000 notes. Devotees thronging the shrine can now can make electronic transfer of offerings with debit and credit cards.
Please Wait while comments are loading...