ವಿದೇಶದಲ್ಲಿರುವ ಭಾರತೀಯರು ವಾಪಸ್; ವಿಮಾನದ ದರ ಎಷ್ಟು?

ನವದೆಹಲಿ, ಮೇ 06 : ಕೊರೊನಾ ಲಾಕ್ ಡೌನ್ ಪರಿಣಾಮ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಮೇ 7ರಂದು ಆರಂಭವಾಗಲಿದೆ. ಏರ್ ಇಂಡಿಯಾ ಇದಕ್ಕಾಗಿ 64 ವಿಮಾನಗಳ ಹಾರಾಟ ನಡೆಸಲಿದೆ.

ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಮೇ 7 ರಿಂದ 13ರ ತನಕ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತದೆ. ಇದಕ್ಕಾಗಿ 64 ಏರ್ ಇಂಡಿಯಾ ವಿಮಾನ ಬಳಕೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

"ಮೇ 13ರ ಬಳಿಕ ದೇಶದ ಖಾಸಗಿ ವಿಮಾನಗಳನ್ನು ಸಹ ಬಳಕೆ ಮಾಡಿಕೊಳ್ಳಲಾಗುತ್ತದೆ. ವಿದೇಶಕ್ಕೆ ಬರುವವರಿಂದ ಪ್ರಯಾಣ ದರವನ್ನು ವಸೂಲಿ ಮಾಡಲಾಗುತ್ತದೆ" ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.

Air India

"ದೆಹಲಿ-ಲಂಡನ್ ವಿಮಾನದಲ್ಲಿ ಬರುವವರಿಗೆ 50 ಸಾವಿರ, ಡಾಕಾ-ದೆಹಲಿ ವಿಮಾನದಲ್ಲಿ ಬರುವವರಿಗೆ 12 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ವಿದೇಶದಿಂದ ಬಂದ ಎಲ್ಲರನ್ನೂ ಸ್ಕ್ರೀನಿಂಗ್ ಮಾಡಿ, 14 ದಿನ ಕ್ವಾರಂಟೈನ್‌ನಲ್ಲಿಡಲಾಗುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.

ಯುಎಇ, ಯುಕೆ, ಅಮೆರಿಕ, ಖತಾರ್, ಸೌದಿ ಅರೇಬಿಯಾ, ಸಿಂಗಪುರ, ಮಲೇಷ್ಯಾ, ಫಿಲಿಫೈನ್ಸ್, ಬಾಂಗ್ಲಾದೇಶ, ಕುವೈತ್, ಓಮನ್ ಸೇರಿದಂತೆ 12 ದೇಶಗಳಿಂದ ಭಾರತೀಯರನ್ನು ಏರ್ ಇಂಡಿಯಾ ವಿಮಾನದ ಮೂಲಕ ಕರೆತರಲಾಗುತ್ತದೆ. ಯುಎಇಗೆ 10, ಅಮೆರಿಕ ಮತ್ತು ಯುಕೆಗೆ 5 ವಿಮಾನಗಳು ಸಂಚಾರ ನಡೆಸಲಿವೆ.

ಬಾಂಗ್ಲಾದೇಶ, ಮಲೇಷ್ಯಾಕ್ಕೆ 7, ಕುವೈತ್ ಮತ್ತು ಫಿಲಿಫೈನ್ಸ್‌ಗೆ 5, ಓಮನ್‌ಗೆ 2, ಸಿಂಗಾಪುರ ಮತ್ತು ಖತಾರ್‌ಗೆ 5 ವಿಮಾನಗಳು ಸಂಚಾರ ನಡೆಸಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿದೇಶದಿಂದ ಆಗಮಿಸುವವರಿಗಾಗಿ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಭಾರತದಲ್ಲಿ ಮಾರ್ಚ್‌ನಲ್ಲಿ ಮೊದಲ ಹಂತದ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಪ್ರಯಾಣಿಕ ವಿಮಾನಗಳ ಸಂಚಾರ ರದ್ದು ಮಾಡಲಾಯಿತು. ಲಾಕ್ ಡೌನ್‌ ಅನ್ನು ಏಪ್ರಿಲ್‌ನಲ್ಲಿ ವಿಸ್ತರಣೆ ಮಾಡಲಾಯಿತು. ಮೇ 4 ರಿಂದ 17ರ ತನಕ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ.

ಲಾಕ್ ಡೌನ್ ಮುಗಿದ ಮೇಲೆ ಪ್ರಯಾಣಿಕ ವಿಮಾನಗಳ ಸಂಚಾರ ಆರಂಭವಾಗಲಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆಸಲು ವಿಶೇಷ ವಿಮಾನ ಮೇ 7 ರಿಂದ 13ರ ತನಕ ಹಾರಾಟ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+