Lok Sabha Election 2024: ಮೇ 25 ರಂದು ಲೋಕಸಭಾ ಚುನಾವಣೆ; ಎಲ್ಲೆಲ್ಲಿ ಮತದಾನ? ಇಲ್ಲಿದೆ ಸಂಪೂರ್ಣ ವಿವರ
ನವದೆಹಲಿ, ಮೇ 23: ದೇಶಾದ್ಯಂತ 2024 ರ ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದ್ದು, ಇದೀಗ ಐದನೇ ಹಂತದ ಚುನಾವಣೆ ನಡೆದಿದೆ. ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನ ಮೇ 25 ರಂದು ನಡೆಯಲಿದೆ.
ಲೋಕಸಭೆ ಚುನಾವಣೆಯ 6 ನೇ ಹಂತದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಲ್ಲಿ ಶನಿವಾರ (ಮೇ 25) ದಂದು ಚುನಾವಣೆ ನಡೆಯಲಿದೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಲೋಕಸಭೆ ಚುನಾವಣೆಯ 6 ನೇ ಹಂತದಲ್ಲಿ ಮತದಾನದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಹಾರ (8 ಸ್ಥಾನಗಳು), ಹರಿಯಾಣ (ಎಲ್ಲಾ 10 ಸ್ಥಾನಗಳು), ಜಮ್ಮು ಮತ್ತು ಕಾಶ್ಮೀರ (ಒಂದು ಸ್ಥಾನ), ಜಾರ್ಖಂಡ್ (4 ಸ್ಥಾನಗಳು), ದೆಹಲಿ (ಎಲ್ಲಾ 7 ಸ್ಥಾನಗಳು), ಒಡಿಶಾ (6 ಸ್ಥಾನಗಳು), ಉತ್ತರ ಪ್ರದೇಶ (14 ಸ್ಥಾನಗಳು) ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದೆ. ಇನ್ನೂ 58 ಲೋಕಸಭಾ ಕ್ಷೇತ್ರಗಳಿಂದ 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2024 ರ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ 5 ಹಂತದ ಮತದಾನ ಪೂರ್ಣಗೊಂಡಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 19, ಎರಡನೇ ಹಂತ ಏಪ್ರಿಲ್ 26, ಮೂರನೇ ಹಂತ ಮೇ 7,ನಾಲ್ಕನೇ ಹಂತ ಮೇ 13 ಮತ್ತು ಐದನೇ ಹಂತ ಮೇ 20 ರಂದು ನಡೆಸಲಾಯಿತು. ಆರನೇ ಹಂತವು ಮೇ 25 ರಂದು ಮತ್ತು ಏಳನೇ ಹಂತವು ಜೂನ್ 1 ರಂದು ನಡೆಯಲಿದೆ. ಇನ್ನೂ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಜೂನ್ 4 ರಂದು ಪ್ರಕಟಗೊಳಲಿದೆ.
6 ನೇ ಹಂತದಲ್ಲಿ ಚುನಾವಣೆ ಯಾವ ಕ್ಷೇತ್ರಗಳಿಗೆ ನಡೆಯಲಿದೆ?
ಬಿಹಾರ (8 ಸ್ಥಾನಗಳು)
1. ವಾಲ್ಮೀಕಿ ನಗರ
2. ಪಶ್ಚಿಮ ಚಂಪಾರಣ್
3. ಪೂರ್ವಿ ಚಂಪಾರಣ್
4. ಶಿಯೋಹರ್
5. ವೈಶಾಲಿ
6. ಗೋಪಾಲ್ಗಂಜ್
7. ಸಿವಾನ್
8. ಮಹಾರಾಜ್ಗಂಜ್
ಹರಿಯಾಣ (10 ಸ್ಥಾನಗಳು)
1. ಅಂಬಾಲಾ
2. ಕುರುಕ್ಷೇತ್ರ
3. ಸಿರ್ಸಾ
4. ಹಿಸಾರ್
5. ಕರ್ನಾಲ್
6. ಸೋನಿಪತ್
7. ರೋಹ್ಟಕ್
8. ಭಿವಾನಿ-ಮಹೇಂದ್ರಗಢ
9. ಗುರ್ಗಾಂವ್
10. ಫರಿದಾಬಾದ್
ಜಮ್ಮು ಮತ್ತು ಕಾಶ್ಮೀರ
1. ಅನಂತನಾಗ್-ರಜೌರಿ
ಜಾರ್ಖಂಡ್ (4 ಸ್ಥಾನಗಳು)
1. ಗಿರಿದಿಹ್
2. ರಾಂಚಿ
3. ಜಮ್ಶೆಡ್‌ಪುರ
4. ಧನ್ಬಾದ್
ದೆಹಲಿ ( 7 ಸ್ಥಾನಗಳು)
1. ಚಾಂದಿನಿ ಚೌಕ್
2. ಈಶಾನ್ಯ ದೆಹಲಿ
3. ಪೂರ್ವ ದೆಹಲಿ
4. ನವದೆಹಲಿ
5. ವಾಯುವ್ಯ ದೆಹಲಿ
6. ಪಶ್ಚಿಮ ದೆಹಲಿ
7. ದಕ್ಷಿಣ ದೆಹಲಿ
ಒಡಿಶಾ (6 ಸ್ಥಾನಗಳು)
1. ಸಂಬಲ್ಪುರ
2. ಕಿಯೋಂಜರ್
3. ಧೆಂಕನಲ್
4. ಪುರಿ
5. ಭುವನೇಶ್ವರ
6. ಕಟಕ್
ಉತ್ತರ ಪ್ರದೇಶ (14 ಸ್ಥಾನಗಳು)
1. ಸುಲ್ತಾನ್‌ಪುರ
2. ಪ್ರತಾಪಗಢ
3. ಫುಲ್ಪುರ್
4. ಅಲಹಾಬಾದ್
5. ಅಂಬೇಡ್ಕರ್ ನಗರ
6. ಡೊಮರಿಯಾಗಂಜ್
7. ಸಂತ ಕಬೀರ್ ನಗರ
8. ಲಾಲ್ಗಂಜ್
9. ಅಜಂಗಢ್
10. ಜಾನ್ಪುರ್
11. ಮಚ್ಲಿಶಹರ್
12. ಭದೋಹಿ
13. ಶ್ರಾವಸ್ತಿ
14. ಬಸ್ತಿ
ಪಶ್ಚಿಮ ಬಂಗಾಳ (8 ಸ್ಥಾನಗಳು)
1. ತಮ್ಲುಕ್
2. ಕಂಠಿ
3. ಘಟಾಲ್
4. ಜಾರ್ಗ್ರಾಮ್ ಎಸ್ಟಿ
5. ಮೇದಿನಿಪುರ್
6. ಪುರುಲಿಯಾ
7. ಬಂಕುರಾ
8. ಬಿಷ್ಣುಪುರ್












Click it and Unblock the Notifications