Lok Sabha Election: ಇವಿಎಂನಲ್ಲಿ ಪ್ರಧಾನಿ ಚಿತ್ರ ನೋಡದ ಮಹಿಳೆ ಜಗಳ

ದೇಶದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಎರಡನೇ ಹಂತದ ಮತದಾನಕ್ಕೆ 88 ಲೋಕಸಭಾ ಕ್ಷೇತ್ರಗಳು ಸಾಕ್ಷಿಯಾಗುತ್ತಿವೆ. ಈ ಬೆನ್ನಲ್ಲೆ ಮೊದಲ ಹಂತದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ಸುದ್ದಿಯನ್ನು ಓದಿ ನಗುವುದು ಗ್ಯಾರಂಟಿ.

ರಾಜಸ್ಥಾನದಲ್ಲಿ ಏಪ್ರಿಲ್‌ 19ರಂದು ಮೊದಲ ಹಂತದ ಮತದಾನ ನಡೆದಿತ್ತು. ಈ ವೇಳೆ ಮತದಾರರೊಬ್ಬರು ಅಧಿಕಾರಿಗಳೊಂದಿಗೆ ಜಗಳ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಮತದಾರೆ ಜಗಳ ಮಾಡಿಕೊಂಡಿದ್ದು ಏಕೆಂದರೆ, ಇವಿಎಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಏಕೆ ಪ್ರದರ್ಶಿಸಿಲ್ಲ ಎಂದು ಮಹಿಳೆಯೊಬ್ಬರು ಮತಗಟ್ಟೆಯಲ್ಲಿ ಅಧಿಕಾರಿಗಳೊಂದಿಗೆ ಜಗಳ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Lok Sabha Elections Woman Engages in Dispute Due to Absence of Prime Minister s Picture on EVM

ಆಗಿದ್ದೇನು?

ಏಪ್ರಿಲ್‌ 19 ರಂದು ರಾಜಸ್ಥಾನದ ಪಿಪ್ರಾಲಿಯ ಬೂತ್‌ಗೆ ಮಹಿಳೆಯರ ಗುಂಪೊಂದು ಮತ ಚಲಾಯಿಸಲು ಬಂದಿತ್ತು. ಆಗ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮತ ಚಾಲಿಸುತ್ತಿದ್ದರು. ಅಷ್ಟರಲ್ಲಿ ಒಬ್ಬ ಮಹಿಳೆ ಮತ ಚಲಾಯಿಸುವಾಗ, ಇವಿಎಂ ಮಶೀನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣದೆ ಕಂಗಾಲಾಗಿದ್ದಾಳೆ.

ಮಹಿಳೆ ಪೋಲಿಂಗ್ ಅಧಿಕಾರಿಗಳನ್ನು ಕರೆದು ನನ್ನ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಎಲ್ಲಿದೆ ಎಂದು ಕಿಡಿಕಾರಿದ್ದಾರೆ ಎಂದು ತಿಳಿದ ಬಂದಿದೆ. ಆಗ ಅಲ್ಲಿದ್ದ ಅಧಿಕಾರಿಗಳು ವಸ್ತು ಸ್ಥಿತಿಯನ್ನು ವಿವರಿಸಿದರು. ಫೋಟೋ ಹಾಗೂ ಚುನಾವಣೆ ಚಿಹ್ನೆ ಪ್ರಧಾನಿ ಮೋದಿ ಅವರದ್ದಲ್ಲ. ಅವರ ಪಕ್ಷವನ್ನು ಪ್ರತಿನಿಧಿಸುವ ಅಭ್ಯರ್ಥಿಯದ್ದಾಗಿದೆ ಎಂದು ತಿಳಿಸಿದರು. ಅಲ್ಲದೆ ಇದು ಮೋದಿ ಅವರ ಚುನಾವಣೆಯಲ್ಲ ಅವರ ಪಕ್ಷದ ಚುನಾವಣೆ. ಅವರ ಪಕ್ಷದ ಪರವಾಗಿ ಈ ಕ್ಷೇತ್ರದಲ್ಲೂ ಒಬ್ಬ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗುತ್ತದೆ ಎಂದು ತಿಳಿಸಿದರು. ಇದಾದ ಬಳಿಕ ಅವರು ಮತ ಚಲಾಯಿಸಿದರು ಎಂದು ತಿಳಿದು ಬಂದಿದೆ.

ಮೋದಿ ಭಾವುಕ

ಏಪ್ರಿಲ್‌ 19ರಂದು ರಾಜಸ್ಥಾನದ ಪಿಪ್ರಾಲಿಯಲ್ಲಿ ನಡೆದ ಸುದ್ದಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿತು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಸಹ ಟ್ವೀಟ್ ಮಾಡಿ ಮಾಡಿದ್ದಾರೆ. ತಾಯಂದಿರು ಮತ್ತು ಸಹೋದರಿಯರ ಈ ವಾತ್ಸಲ್ಯವನ್ನು ನೋಡಿದ ನಂತರ ನನ್ನ ಕಣ್ಣಲ್ಲಿ ನೀರು ಬಂದಿದೆ. ಈ ಋಣವನ್ನು ತೀರಿಸುವ ಸಂಕಲ್ಪ ನನಗೂ ಇದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಲಕ್ಷ್ಮಿಕಾಂತ್‌ ಅವರೇ, ಇದು ನಮ್ಮ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ನಾವೆಲ್ಲಾ ಈ ಸಣ್ಣ ಸಣ್ಣ ಕೆಲಸಗಳತ್ತವೂ ಗಮನ ಹರಿಸಬೇಕಿದೆ. ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.

ಈ ಘಟನೆಯ ಪತ್ರಿಕೆಯ ಕಟಿಂಗ್ ಅನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಮೊದಲು ಪಕ್ಷದ ಕಾರ್ಯಕರ್ತ ಲಕ್ಷ್ಮೀಕಾಂತ್ ಭಾರದ್ವಾಜ್ ಅವರು ಹಂಚಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ 2024 ಬಿಸಿ ಏರುತ್ತಲೇ ಇದೆ. ಭಾರತದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಶುಕ್ರವಾರ (ಏ.26)ರಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಏಳನೇ ಹಂತದ ಮತದಾನ ಜೂನ್ 1 ರಂದು ನಡೆಯಲಿದೆ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಜೂನ್ 4 ರಂದು ಹೋರ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+