• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿಯಿಂದ ಮತದಾರರಿಗೆ ವೆರೈಟಿ ವೆರೈಟಿ ವಾಗ್ದಾನಗಳು

|

ನವದೆಹಲಿ, ಏಪ್ರಿಲ್ 1 : ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ತರಹೇವಾರಿ ಭರವಸೆಗಳನ್ನು ನೀಡಲು, ಆಮಿಷಗಳನ್ನು ಒಡ್ಡಲು ಆರಂಭಿಸಿದ್ದಾರೆ. ಅವುಗಳಲ್ಲಿ ಎಷ್ಟು ಭರವಸೆಗಳು ಈಡೇರಲಿವೆ?

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್‌ಡಿಎ) ವಿರುದ್ಧ ಯುದ್ಧವನ್ನೇ ಸಾರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಮತದಾರರಿಗೆ ವಿಭಿನ್ನಬಗೆಯ ಭರವಸೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ.

ಬಡವರ ಬ್ಯಾಂಕ್ ಖಾತೆಗೆ ತಿಂಗಳಿಗೆ 6000 ರೂ.: ರಾಹುಲ್ ಭರವಸೆ

ಅವರು ಒಂದರ ಹಿಂದೊಂದರಂತೆ ನೀಡುತ್ತಿರುವ ಭರವಸೆಗಳು, ನರೇಂದ್ರ ಮೋದಿ ನೀಡಿದ್ದ ಭರವಸೆಗಳಿಗೆ ಹೆಚ್ಚೂಕಡಿಮೆ ತದ್ವಿರುದ್ಧವಾಗಿವೆ ಮತ್ತು ಮೋದಿ ಸರಕಾರ ರೂಪಿಸಿದ್ದ ಹಲವಾರು ಯೋಜನೆಗಳನ್ನು ಕಸದಬುಟ್ಟಿಗೆ ಎಸೆಯುವುದಾಗಿ ರಾಹುಲ್ ವಾಗ್ದಾನ ಮಾಡುತ್ತಿದ್ದಾರೆ.

ಕೇವಲ ಭರವಸೆಗಳ ಆಧಾರದ ಮೇಲೆ ಯಾರೂ ಮತ ನೀಡುವುದಿಲ್ಲ. ಅದಕ್ಕೆ ಪೂರಕವಾಗುವಂಥ ಸಮರ್ಥನೆಗಳನ್ನು ನೀಡಬೇಕಾಗುತ್ತದೆ, ಕಾರಣಗಳನ್ನು ನೀಡಬೇಕಾಗುತ್ತದೆ ಮತ್ತು ಆ ಭರವಸೆಗಳ ಹಿಂದೆ ಒಂದು ಲಾಜಿಕ್ ಇದೆ, ಇದರಿಂದ ಜನರಿಗೆ ಸಹಾಯವಾಗುತ್ತದೆ ಎಂದು ಜನರಲ್ಲಿ ವಿಶ್ವಾಸ ಮೂಡಿಸಬೇಕಾಗುತ್ತದೆ.

'ಮೋದಿ ಬಡವರಿಂದ ಕಿತ್ತುಕೊಂಡ ದುಡ್ಡನ್ನು ನಾವು ವಾಪಸ್ ಕೊಡ್ತೀವಿ'

ರಾಹುಲ್ ಗಾಂಧಿ ಅವರ ಈ ಭರವಸೆಗಳನ್ನು ನಂಬಿ ಜನ ಮತ ಹಾಕ್ತಾರಾ? ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಮತದೊರೆಗಳು ಕೂಡಿಸುತ್ತಾರಾ? ರಾಹುಲ್ ನೇತೃತ್ವದ ಕಾಂಗ್ರೆಸ್ಸಿಗೆ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸೀಟುಗಳು ದೊರೆಯಲಿವೆ? ಎಂಬುದಕ್ಕೆ ಮೇ 23ರಂದು ದೊರೆಯಲಿರುವ ಫಲಿತಾಂಶದಲ್ಲಿ ತಿಳಿಯಲಿದೆ. ರಾಹುಲ್ ನೀಡುತ್ತಿರುವ ಭರವಸೆಗಳು ಕೆಳಗಿನಂತಿವೆ.

ಎಲ್ಲಾ ರಾಜ್ಯಗಳಲ್ಲಿ ಸರಕಾರಿ ಹುದ್ದೆ ಭರ್ತಿ

ಇಂದು, ಸರಕಾರದಲ್ಲಿ 22 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಖಾಲಿಯಿವೆ. ನಾವು (ಅಧಿಕಾರಕ್ಕೆ ಬಂದರೆ) 2020ರ ಮಾರ್ಚ್ 31ರೊಳಗೆ ಎಲ್ಲ ಸರಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಕೇಂದ್ರದ ಹಣವನ್ನು ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ವಿನಿಯೋಗಿಸಲೆಂದು ಎಲ್ಲಾ ರಾಜ್ಯಗಳಿಗೆ ನೀಡಲಿದ್ದೇವೆ. ಆಯಾ ಕ್ಷೇತ್ರಗಳಲ್ಲಿ ಖಾಲಿಯಿರುವ ಉದ್ಯೋಗವನ್ನು ಭರ್ತಿ ಮಾಡಲು ಈ ಹಣವನ್ನು ವಿನಿಯೋಗಿಸಲಿದ್ದೇವೆ.

ಜಲ ಸಂಪನ್ಮೂಲದ ಪುನರುಜ್ಜೀವನ

ಭಾರತದ ಜಲ ಸಂಪನ್ಮೂಲವನ್ನು ಮೊದಲನೆಯದಾಗಿ ಸರಿಪಡಿಸಬೇಕಾಗಿದೆ ಮತ್ತು ಪುನರುಜ್ಜೀವನಗೊಳಿಸಬೇಕಾಗಿದೆ. ಎರಡನೆಯದಾಗಿ, ನಿರುಪಯುಕ್ತ ಮತ್ತು ಸವಕಳಿಯಾದ ಭೂಮಿಯಲ್ಲಿ ಅರಣ್ಯ ಸಂಪತ್ತನ್ನು ವೃದ್ಧಿಸಬೇಕಿದೆ. ಅಲ್ಲದೆ, ಪರಿಸರವನ್ನು ಉತ್ತಮಪಡಿಸಲು ಲಕ್ಷಾಂತರ ಗ್ರಾಮೀಣ ಯುವಕರನ್ನು ಗ್ರಾಮ ಸಭೆಯಲ್ಲಿ ನಿಯೋಜನೆ ಗೊಳಿಸಲಿದ್ದೇವೆ.

ಅಧಿಕಾರಕ್ಕೆ ಬಂದರೆ ನೀತಿ ಆಯೋಗ ರದ್ದು : ರಾಹುಲ್ ಘೋಷಣೆ

ಅಧಿಕಾರಕ್ಕೆ ಬಂದರೆ ನೀತಿ ಆಯೋಗ ರದ್ದು

ನಾವು ಅಧಿಕಾರಕ್ಕೆ ಬಂದರೆ ನೀತಿ ಆಯೋಗವನ್ನು ರದ್ದುಪಡಿಸಲಿದ್ದೇವೆ. ಪ್ರಧಾನಿ (ನರೇಂದ್ರ ಮೋದಿ) ಅವರ ಮಾರ್ಕೆಟಿಂಗ್ ಪ್ರೆಸೆಂಟೇಷನ್ ಮತ್ತು ದತ್ತಾಂಶವನ್ನು ತಿದ್ದುಪಡಿ ಮಾಡುವುದು ಬಿಟ್ಟು ಆ ಆಯೋಗ ಯಾವುದೇ ಉದ್ದೇಶವನ್ನು ಪೂರೈಸಿಲ್ಲ. ಈ ನೀತಿ ಆಯೋಗದ ಬದಲಿಗೆ ಸಣ್ಣ ಪ್ರಮಾಣದ ಯೋಜನಾ ಆಯೋಗವನ್ನು ಸ್ಥಾಪಿಸಲಿದ್ದೇವೆ. ಅದರಲ್ಲಿ 100ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಖ್ಯಾತ ಆರ್ಥಿಕ ಪಂಡಿತರು, ತಜ್ಞರು ಇರಲಿದ್ದಾರೆ.

ಯುವ ಉದ್ಯೋಗಿಗಳಿಗೆ ರಾಹುಲ್ ಬಳುವಳಿ

ಯುವಜನರೇ, ಹೊಸ ಉದ್ಯೋಗವನ್ನು ಆರಂಭಿಸಬಯಸುತ್ತೀರಾ? ಭಾರತದಲ್ಲಿ ಉದ್ಯೋಗವನ್ನು ಸೃಷ್ಟಿಸಬಯಸುತ್ತೀರಾ? ನಿಮಗಾಗಿ ಇಲ್ಲಿ ಸೂಪರ್ ಪ್ಲಾನ್ ಗಳಿವೆ :

1. ಹೊಸ ಉದ್ಯೋಗ ಆರಂಭಿಸಬೇಕಿದ್ದರೆ ಮೊದಲ 3 ವರ್ಷಗಳ ಅವಧಿಗೆ ಯಾವುದೇ ಅನುಮತಿ ಬೇಕಿಲ್ಲ.

2. ಏಂಜೆಲ್ ತೆರಿಗೆಗೆ ಗುಡ್ ಬೈ (ಸ್ಟಾರ್ಟ್ ಅಪ್ ಕಂಪನಿಯಲ್ಲಿ ಷೇರುಗಳ ಮೌಲ್ಯ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾಗಿದ್ದರೆ ಏಂಜೆಲ್ ಟ್ಯಾಕ್ಸ್ ವಿಧಿಸಲಾಗುತ್ತದೆ.)

3. ಸ್ಟಾರ್ಟ್ ಅಪ್ ಕಂಪನಿಗಳು ಎಷ್ಟು ಉದ್ಯೋಗ ಸೃಷ್ಟಿಸುತ್ತವೆ ಎಂಬುದರ ಆಧಾರದ ಮೇಲೆ ಕಂಪನಿಗಳಿಗೆ ಪ್ರೋತ್ಸಾಹ ಧನ (ಇನ್ಸೆಂಟಿವ್) ಮತ್ತು ಟ್ಯಾಕ್ಸ್ ಕ್ರೆಡಿಟ್.

4. ಬ್ಯಾಂಕಿನಿಂದ ಸುಲಭವಾದ ಸಾಲ.

ರಾಹುಲ್ ಅವರ 'ನ್ಯಾಯ್' ಬಳಸಿ ಜೀವನಾಂಶ ನೀಡುವೆ: ನಿರುದ್ಯೋಗಿ ಪತಿ

ನ್ಯಾಯ್ ಮತ್ತು ನಿಜವಾದ ಜಿಎಸ್ಟಿ

ಅವರು ಡಿಮಾನಿಟೈಸೇಷನ್ (ಅಪನಗದೀಕರಣ) ಮತ್ತು ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್‌ಟಿ - ಗ್ರಾಹಕ ಸೇವಾ ತೆರಿಗೆ) ಜಾರಿಗೆ ತಂದರು. ನಾವು ಜನರಿಗೆ ನ್ಯಾಯ್ ಮತ್ತು ನಿಜವಾದ ಜಿಎಸ್ಟಿ ನೀಡಲಿದ್ದೇವೆ. ನ್ಯಾಯ್ - ಬಡತನದ ಮೇಲೆ ಸರ್ಜಿಕಲ್ ಸ್ಟ್ರೈಕ್ = ಭಾರತದ ಶೇ.20ರಷ್ಟು ಬಡ ಜನರಿಗೆ ವರ್ಷಕ್ಕೆ 72 ಸಾವಿರ ರುಪಾಯಿ ನೀಡಲಿದ್ದೇವೆ. ಭಾರತದ ಬಡತನ ಮೇಲೆ ಕಾಂಗ್ರೆಸ್ ಯುದ್ಧ ಸಾರಿದೆ. ಭಾರತದ 5 ಕೋಟಿ ಬಡ ಕುಟುಂಬಗಳು ವರ್ಷಕ್ಕೆ 72,000 ರುಪಾಯಿ ಪಡೆಯಲಿವೆ. ಇದು ನಮ್ಮ ಕನಸು ಮತ್ತು ವಾಗ್ದಾನ. (ಸರಕಾರದ) ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ.

ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ

ಪ್ರಯಾಣ ಮತ್ತು ಸಂಪರ್ಕಕ್ಕೆ ಸಂಬಂಧಿಸಿದಂತೆ ಭಾರತದ ಈಶಾನ್ಯ ರಾಜ್ಯಗಳು ವಿಶಿಷ್ಟವಾದ ತೊಂದರೆಗಳನ್ನು ಎದುರಿಸುತ್ತಿವೆ. ಇದನ್ನು ಕಾಂಗ್ರೆಸ್ ಗುರುತಿಸಿದೆ, ಭಾರತೀಯ ಜನತಾ ಪಕ್ಷ ಈ ಸಮಸ್ಯೆಯನ್ನು ಗುರುತಿಸಿಲ್ಲ. ನಾವು ಆಯ್ಕೆಯಾದರೆ, ಈ ರಾಜ್ಯಗಳಿಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮರಳಿ ದೊರಕಿಸಿಕೊಡುತ್ತೇವೆ. ಅವರಿಗೆ ಅರ್ಹವಾದ ಎಲ್ಲ ಸವಲತ್ತುಗಳೂ ಅವರಿಗೆ ಸಿಗಲಿವೆ.

English summary
Lok Sabha Elections 2019 : Promises galore by Congress President Rahul Gandhi, who has eye on prime minister post. Promises range from removing NITI Aayog to creating jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X