Political Critic ಒಪಿನಿಯನ್ ಪೋಲ್ : ಲೋಕಸಭಾ ಎಲೆಕ್ಷನ್‌ನಲ್ಲಿ ಯಾರಿಗೂ ಇಲ್ಲ ಬಹುಮತ! ಮೋದಿ ಅಲೆಗೆ ಟಾಟಾ ಹೇಳಿದ ಜನ?
ನವದೆಹಲಿ, ಮೇ 24: ದೇಶದಲ್ಲಿ ಲೋಕಸಭಾ ಚುನಾವಣೆ ಬಹುತೇಕ ಮುಗಿದಿದೆ. ಐದು ಹಂತದ ಮತದಾನ ಈಗಾಗಲೇ ಮುಗಿದಿದ್ದು, ಕೇವಲ ಎರಡು ಹಂತದ ಮತದಾನ ಮಾತ್ರ ಉಳಿದಿದ್ದು, ಫಲಿತಾಂಶಕ್ಕೆ 10 ದಿನ ಮಾತ್ರ ಬಾಕಿಯುಳಿದಿದೆ. ಇದರ ನಡುವೆ ಪೊಲಿಟಿಕಲ್ ಕ್ರಿಟಿಕ್ ಎಂಬ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಅದರಂತೆ ದೇಶದಲ್ಲಿ ಅತಂತ್ರ ಲೋಕಸಭೆ ನಿರ್ಮಾಣ ಆಗಲಿದ್ದು, ಯಾರಿಗೂ ಕೂಡ ಬಹುಮತ ಬರುವುದಿಲ್ಲ ಎಂದು ಹೇಳಿದೆ.
ನವೆಂಬರ್ 2023 ರಿಂದ ಫೆಬ್ರವರಿ 2024ರವರೆಗೆ ನಡೆದ ಚುನಾವಣಾ ಪೂರ್ವ ಸಮೀಕ್ಷೆ ಆಗಿದ್ದು, ಮತದಾನ ಶುರುವಾದ ಬಳಿಕ ಯಾವುದೇ ರೀತಿಯ ಅಭಿಪ್ರಾಯಗಳನ್ನು ಸಂಗ್ರಹಿಸಿಲ್ಲ ಎಂದು ಪೊಲಿಟಿಕಲ್ ಕ್ರಿಟಿಕ್ ಸಂಸ್ಥೆ ಹೇಳಿದೆ. ಅದಲ್ಲದೇ ಇದು ಎಕ್ಸಿಟ್ ಪೋಲ್ ಅಲ್ಲ ಮಾರ್ಚ್ 14, 2024ರವರೆಗೆ ಸಂಗ್ರಹಿಸಿದ ಅಭಿಪ್ರಾಯಗಳ ಚುನಾವಣಾ ಪೂರ್ವ ಸಮೀಕ್ಷೆ ಎಂದು ಸಂಸ್ಥೆಯು ಸ್ಪಷ್ಟನೆ ನೀಡಿದೆ.

ಈ ಚುನಾವಣಾ ಪೂರ್ವ ಸಮೀಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಕೇವಲ 265 ರಿಂದ 275 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಇನ್ನು, ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಮೈತ್ರಿಕೂಟ 225 ರಿಂದ 235 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ. ಇನ್ನು, ಇತರರು 41 ರಿಂದ 45 ಸ್ಥಾನಗಳನ್ನು ಗೆಲ್ಲಬಹುದು ಎಂಬ ಸೂಚನೆಯನ್ನು ಪೊಲಿಟಿಕಲ್ ಕ್ರಿಟಿಕ್ ಸಂಸ್ಥೆ ನೀಡಿದ್ದು, ಫಲಿತಾಂಶದ ಬಳಿಕ ಬೇರೆ ಪಕ್ಷಗಳನ್ನು ಸೆಳೆಯುವ ಸಾಧ್ಯತೆ ಇದೆ.
Loksabha pre poll survey results 2024.
— Political Critic (@PCSurveysIndia) May 23, 2024
We have done a deep survey from November 2023 to February 2024.
There will be a high chance of Hung in Loksabha.
Expected seat share:
INDIA: 225 - 235
NDA: 265 - 275
Others: 41 - 45
5 important factors that cause anty incumbency.… pic.twitter.com/42hLWZFLzp
ಸೂಚನೆ : ಇದು ಚುನಾವಣೋತ್ತರ ಸಮೀಕ್ಷೆ ಅಲ್ಲ, ಯಾವುದೇ ಹಂತದ ಮತದಾನದ ವೇಳೆ ಅಭಿಪ್ರಾಯವನ್ನು ಸಂಗ್ರಹಿಸಿಲ್ಲ ಎಂದು ಪೊಲಿಟಿಕಲ್ ಕ್ರಿಟಿಕ್ ಸಂಸ್ಥೆ ತಿಳಿಸಿದ್ದು, ಮಾರ್ಚ್ 14, 2024ರವರೆಗಿನ ದತ್ತಾಂಶವನ್ನು ಬಳಸಲಾಗಿದೆ.












Click it and Unblock the Notifications