ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಮೇಲೆ ಜೆಡಿಯು ಸಿಟ್ಟು, ಲೋಕಸಭಾ ಸಮರಕ್ಕೂ ಮುನ್ನ ಬಿಕ್ಕಟ್ಟು?!

|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 01: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ಬಿಕ್ಕಟ್ಟು ಶುರುವಾಗಿದೆ ಎಂಬ ಅನುಮಾನ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಅಕಸ್ಮಾತ್ ಇದು ಸತ್ಯವೇ ಆಗಿದ್ದಲ್ಲಿ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿಗಳು ಸ್ವತಂತ್ರವಾಗಿ ಚುನಾವಣೆ ಎದುರಿಸಲಿವೆ.

ಬಿಜೆಪಿಗೆ 20, ಜೆಡಿಯುಗೆ 12! ಲೋಕಸಭಾ ಚುನಾವಣೆಗೆ ಬಿಹಾರ ಸಿದ್ಧ!ಬಿಜೆಪಿಗೆ 20, ಜೆಡಿಯುಗೆ 12! ಲೋಕಸಭಾ ಚುನಾವಣೆಗೆ ಬಿಹಾರ ಸಿದ್ಧ!

40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಬಿಜೆಪಿ 20, ಜೆಡಿಯು 12 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿವೆ ಎಂದು ಇತ್ತೀಚೆಗಷ್ಟೇ ಹೇಳಲಾಗಿತ್ತು. ಆದರೆ ಬಿಜೆಪಿಯ 20:12 ಸೂತ್ರವನ್ನು ಜೆಡಿಯು ಒಪ್ಪುವ ಸ್ಥಿತಿಯಲ್ಲಿಲ್ಲ!

'ಮೋದಿ ಪ್ರಧಾನಿಯಾಗುವುದು ಮೈತ್ರಿಕೂಟದಲ್ಲೇ ಕೆಲವರಿಗೆ ಇಷ್ಟವಿಲ್ಲ' 'ಮೋದಿ ಪ್ರಧಾನಿಯಾಗುವುದು ಮೈತ್ರಿಕೂಟದಲ್ಲೇ ಕೆಲವರಿಗೆ ಇಷ್ಟವಿಲ್ಲ'

Lok Sabha Elections 2019: will JDU-BJP not fight together in Bihar?

ಬಿಹಾರದಲ್ಲಿ ಜೆಡಿಯು ಪ್ರಭಾವ ಚೆನ್ನಾಗಿದೆ. ಜನತೆಗೆ ನಿತೀಶ್ ಕುಮಾರ್ ಸರ್ಕಾರದ ಬಗ್ಗೆ ಒಲವಿದೆ, ಮೆಚ್ಚುಗೆಯಿದೆ. ಆದ್ದರಿಂದ ಇಲ್ಲಿ ಬಿಜೆಪಿ ಸ್ವತಂತ್ರ್ವಾಗಿ ಸ್ಪರ್ಧಿಸಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಆದ್ದರಿಂದ ಜೆಡಿಯು ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು(ಈಗಾಗಲೇ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ) ಬಿಜೆಪಿ ಯೋಚಿಸಿದೆ. ಇದಕ್ಕೆ ಜೆಡಿಯು ಸಹ ಬೆಂಬಲ ನೀಡಿತ್ತು.

ಲೋಕಸಭಾ ಚುನಾವಣೆ ಜೊತೆ 11 ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ?ಲೋಕಸಭಾ ಚುನಾವಣೆ ಜೊತೆ 11 ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ?

ಆದರೆ ಬಿಜೆಪಿ ಇಪ್ಪತ್ತು ಸೀಟುಗಳನ್ನು ತನಗೆ ಉಳಿಸಿಕೊಂಡು ಕೇವಲ 12 ನ್ನು ಮಾತ್ರಜೆಡಿಯು ಗೆ ನೀಡಿದ್ದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ವರಿಷ್ಠರಿಗೆ ಇಷ್ಟವಾಗಿಲ್ಲ. ಆದ್ದರಿಂದ ಬಿಹಾರದಲ್ಲಿ ಜೆಡಿಯು ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತುನ್ನು ಅಲ್ಲಗಳೆಯುವಂತಿಲ್ಲ. ಹಾಗೇನಾದರೂ ಆದರೆ ಬಿಜೆಪಿ ಮತ್ತು ಜೆಡಿಯು ಎರಡು ಪಕ್ಷಗಳ ಮತಗಳೂ ಒಡೆದು, ವಿಪಕ್ಷಗಳಲಿಗೆ ಲಾಭವಾಗುವುದು ಖಂಡಿತ ಎಂಬುದು ರಾಜಕೀಯ ಪಂಡಿತರ ಅಂಬೋಣ!

English summary
After seat sharing between BJP and JDU over in Bihar for Lok Sabha elections 2019, JDU seems not happy for BJP's stand. It may face elections wthout BJP support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X