ವೋಟ್ ಬಳಿಕ ನೈಲ್ ಪಾಲಿಶ್ ರಿಮೂವರ್‌ನಿಂದ ಇಂಕ್ ಅಳಿಸಿದೆ: ಕಾಂಗ್ರೆಸ್ ಮುಖಂಡ

ನವದೆಹಲಿ, ಏಪ್ರಿಲ್ 29: ಚುನಾವಣೆಯಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ ಬೆರಳಿಗೆ ಹಾಕುವ 'ಅಳಿಸಲಾಗದ ಶಾಯಿ' ನಿಜಕ್ಕೂ ಅಳಿಸಲಾಗದ್ದೇನೂ ಅಲ್ಲ. ಮತದಾನ ಮಾಡಿದವರು ಅದನ್ನು ಸುಲಭವಾಗಿ ಅಳಿಸಬಹುದು ಎಂದು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಹೇಳಿದ್ದಾರೆ.

ಚುನಾವಣಾ ಆಯೋಗ ಬಳಸುವ ಇಂಕ್ ಅನ್ನು ಅಳಿಸಲು ಸಾಧ್ಯವಿದೆ. ಇದರಿಂದ ಅಕ್ರಮ ಮತದಾನಗಳು, ಜನರನ್ನು ಒಂದಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸುವ ಅಪಾಯಗಳಿವೆ ಎಂದು ಝಾ ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂನಿನ ಕಂಪೆನಿಯೊಂದರಲ್ಲಿ ತಯಾರಾಗುವ ಇಂಕನ್ನು ಚುನಾವಣೆಯಲ್ಲಿ ಬಳಸಲಾಗುತ್ತದೆ. ಇದು ಕನಿಷ್ಠ ಒಂದು ವಾರ ಅಳಿಸಿ ಹೋಗುವಂತಿರಬಾರದು. ಎರಡು ವಾರಗಳವರೆಗೂ ಇದರ ಗುರುತು ಇರಬೇಕು. ಆದರೆ, ಮತದಾನ ಮಾಡಿದ ಕೂಡಲೇ ನೈಲ್ ಪಾಲಿಶ್ ರಿಮೂವರ್ ಬಳಸಿ ತೆಗೆಯಬಹುದು ಎಂದು ಅನೇಕ ಕಡೆ ವರದಿಯಾಗಿದೆ.

ಸಂಜಯ್ ಝಾ ಅವರು ಬೆಳಿಗ್ಗೆ 9.52ರ ಸಮಯಕ್ಕೆ ಮತದಾನ ಮಾಡಿ ಬಂದು ತಮ್ಮ ಎಡಗೈ ಬೆರಳಿನಲ್ಲಿರುವ ಇಂಕಿನ ಗುರುತನ್ನು ತೋರಿಸಿದ್ದರು. ಮುಂಬೈನ ನಿವಾಸಿಗಳೆಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದ್ದರು.

ಅರ್ಧಗಂಟೆಯಲ್ಲಿಯೇ ಅಳಿಸಿದೆ

ಆದರೆ, ಒಂದು ಗಂಟೆಯ ಒಳಗೇ ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರ ಎಡಗೈ ಬೆರಳಿನಲ್ಲಿದ್ದ ಇಂಕ್‌ಅನ್ನು ಅಳಿಸಲಾಗಿತ್ತು.

ಮತದಾನ ಮಾಡಿದ ಅರ್ಧ ಗಂಟೆಯಲ್ಲಿಯೇ ನೈಲ್ ಪಾಲಿಶ್ ರಿಮೂವರ್‌ಅನ್ನು ಸ್ವಲ್ಪವೇ ಬಳಸಿ ಇಂಕ್ ಅಳಿಸಿಹಾಕಿದೆ. ನನ್ನ ಸ್ನೇಹಿತೆಯೊಬ್ಬರು ತಮ್ಮ ವೋಟ್‌ನ ಇಂಕ್ ಸುಲಭವಾಗಿ ಅಳಿಸಬಹುದು ಎಂದು ಹೇಳಿದ ಬಳಿಕ ಈ ಪ್ರಯೋಗ ಮಾಡಿದೆ. ಅದಕ್ಕಾಗಿ ಸಾಕ್ಷ್ಯವನ್ನು ನೀಡುತ್ತಿದ್ದೇನೆ ಎಂದಿದ್ದಾರೆ.

ಮ್ಯಾಜಿಕ್ ನೋಡಿ!

ನೋಯ್ಡಾ ಮೂಲದ ಪತ್ರಕರ್ತೆ ರೀತು ಕಪೂರ್ ಕೂಡ ಇದೇ ರೀತಿ ಮತದಾನದ ಇಂಕ್ ಅನ್ನು ಅಳಿಸಿ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್‌ಗೆ ಅವರು ಚುನಾವಣಾ ಆಯೋಗದ ಅಧಿಕೃತ ವಕ್ತಾರರನ್ನು ಟ್ವೀಟ್ ಮಾಡಿದ್ದಾರೆ. 'ನಾನು ಮತದಾನ ಮಾಡಿದೆ. ಇಂಕ್ ಹಾಕಿದರು. ಇದರಲ್ಲಿ ಬಳಸುವ ಅಳಿಸಲಾಗದ ಇಂಕನ್ನು ತೆಗೆಯಲು ಸಾಧ್ಯ ಎಂಬ ಜನರ ಹೇಳಿಕೆಯನ್ನು ನಾನು ನಂಬಿರಲಿಲ್ಲ. ಮ್ಯಾಜಿಕ್ ನೋಡಿ-ಇಂಕ್ ಹೋಯ್ತು. ಇದಕ್ಕೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಿಂದ ದೂರು

ಏಪ್ರಿಲ್ 18ರಂದು ಮತದಾನ ಮಾಡಿದ ಬೆಂಗಳೂರಿನ ವ್ಯಕ್ತಿಯೊಬ್ಬರು, ಚುನಾವಣೆಯಲ್ಲಿ ಬಳಸಲಾಗುವ ಇಂಕ್, ಅಳಿಸಲಾಗದ ಗುಣಮಟ್ಟದ್ದಾಗಿಲ್ಲ. ಅದನ್ನು ಸುಲಭವಾಗಿ ಅಳಿಸಬಹುದಾಗಿದೆ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಫ್ರೇಜರ್ ಟೌನ್‌ನ ಪರೀಕ್ಷಿತ್ ದಲಾಲ್ ಎಂಬುವವರು ತಮ್ಮ ಅನುಭವ ಹಂಚಿಕೊಂಡಿದ್ದರು. ಮತದಾನ ಮಾಡಿ ಮನೆಗೆ ಬಂದು ಸೋಪ್‌ನಿಂದ ಕೈ ತೊಳೆದು, ನೈಲ್ ಪಾಲಿಶ್ ರಿಮೂವರ್ ಹಚ್ಚಿದಾಗ ಇಂಕ್ ಸಂಪೂರ್ಣ ಅಳಿಸಿ ಹೋಯಿತು ಎಂದಿರುವ ಪರೀಕ್ಷಿತ್, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಕೋರಿ ದೂರು ಸಲ್ಲಿಸಿದ್ದರು.

ಚುನಾವಣಾ ಆಯೋಗ ಹೇಳಿದ್ದೇನು?

ಚುನಾವಣಾ ಆಯೋಗ ಹೇಳಿದ್ದೇನು?

ಸಾಮಾನ್ಯವಾಗಿ ಪ್ರತಿ ಚುನಾವಣೆಗೂ ಮುನ್ನ ಈ ಇಂಕ್‌ಗಳನ್ನು ಪರೀಕ್ಷೆಗಾಗಿ ಸಿಎಸ್‌ಐಆರ್‌ಗೆ ಕಳುಹಿಸಲಾಗುತ್ತದೆ. ಇದನ್ನು 1950-51ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಬಳಸಲಾಗುತ್ತಿದೆ. 25 ದೇಶಗಳನ್ನು ಈ ಇಂಕನ್ನು ಬಳಸುತ್ತಿವೆ. ಇಂಕನ್ನು ಅಳಿಸಲು ಸಾಧ್ಯವಾಗಬಾರದು ಎಂದು ಉಪ ಚುನಾವಣಾ ಆಯುಕ್ತ ಚಂದ್ರ ಭೂಷಣ್ ಕುಮಾರ್ ಏಪ್ರಿಲ್ 11ರಂದು ಹೇಳಿದ್ದರು. 2019ರ ಚುನಾವಣೆಗಾಗಿ 33 ಕೋಟಿ ರೂಪಾಯಿ ವೆಚ್ಚದಲ್ಲಿ 26 ಲಕ್ಷ ಇಂಕ್ ಬಾಟಲ್‌ಗಳಿಗೆ ಆರ್ಡರ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+