ಬಿಜೆಪಿಗೆ ಮತ ಹಾಕದೆ ಇದ್ದರೆ ಕೆಲಸ ಕೊಡುವುದಿಲ್ಲ: ಶಾಸಕ ಎಚ್ಚರಿಕೆ
ಫತೇಹ್‌ಪುರ, ಏಪ್ರಿಲ್ 16: ಬಿಜೆಪಿಗೆ ಮತಹಾಕದೆ ಇರುವವರನ್ನು ಗುರುತಿಸಲಾಗುತ್ತದೆ. ಮತ ಹಾಕದೆ ಇದ್ದರೆ ಅವರಿಗೆ ಉದ್ಯೋಗ ಕೊಡುವುದಿಲ್ಲ ಎಂದು ರಾಜಸ್ಥಾನದ ಫತೇಹ್‌ಪುರ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಖತಾರಾ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಬಿಜೆಪಿಗೆ ಮತ ಹಾಕುವಂತೆ ಜನರಿಗೆ ಸೂಚಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಬೂತ್‌ಗಳ ಒಳಗೆ ಕ್ಯಾಮೆರಾ ಇರಿಸಿದ್ದಾರೆ ಮತ್ತು ಯಾರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ರಮೇಶ್ ಖತಾರಾ ವಿವಾದದಲ್ಲಿ ಸಿಲುಕಿದ್ದಾರೆ.

ಮತಗಟ್ಟೆಗಳ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಈ ಬಾರಿ ಯಾವುದೇ ಲೋಪಗಳಾಗಲು ಅವಕಾಶ ಇರುವುದಿಲ್ಲ. ಯಾರು ಮತ ಹಾಕುವುದಿಲ್ಲವೋ ಅಥವಾ ಕಾಂಗ್ರೆಸ್‌ಗೆ ಮತ ಹಾಕುತ್ತಾರೆಯೋ ಅವರನ್ನು ಗುರುತಿಸಲಾಗುತ್ತದೆ. ಅವರಿಗೆ ಕೆಲಸ ನೀಡುವುದಿಲ್ಲ ಎಂದು ಅವರು ದಾಹೋದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿನ್ಹ ಭಭೋರ್ ಅವರ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಹೇಳಿದ್ದಾರೆ.
ಆಧಾರ್ ಮತ್ತು ಇತರೆ ಕಾರ್ಡ್‌ಗಳಲ್ಲಿ ನಿಮ್ಮ ಫೋಟೊ ಇರುತ್ತವೆ. ನಿಮ್ಮ ಬೂತ್‌ಗಳಲ್ಲಿ ಮತಗಳು ಕಡಿಮೆಯಾದರೆ ಯಾರು ಮತ ಹಾಕಿಲ್ಲ ಎನ್ನುವುದು ಅವರಿಗೆ ಗೊತ್ತಾಗುತ್ತದೆ. ಅವರಿಗೆ ಕೆಲಸ ಸಿಗುವುದಿಲ್ಲ ಎಂದಿದ್ದಾರೆ.












Click it and Unblock the Notifications