‘ನರೇಂದ್ರ ಮೋದಿ ಅವರೇ ವಿಧಾನಸಭೆ ಚುನಾವಣೆಯಲ್ಲಿ ಕೈಬೀಸಿ ಹೋದ ನಂತರ..’

ಭಾರತದ ಲೋಕಸಭೆ ಚುನಾವಣೆಗೆ ಇಂದು ರಣಕಹಳೆ ಮೊಳಗಿದ್ದು, ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. 2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ. ಚುನಾವಣೆ ಫಲಿತಾಂಶ ಜೂನ್ 4ರಂದು ಹೊರಬೀಳಲಿದ್ದು, ಭಾರಿ ಕುತೂಹಲಕ್ಕೆ ಮತ್ತಷ್ಟು ಕುತೂಹಲ ಸೇರ್ಪಡೆಯಾಗಿದೆ. ಹೀಗಿದ್ದಾಗಲೇ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏನು ಹೇಳಿದ್ದೇನು ಗೊತ್ತಾ?

ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗಾಗಿ 2024ರ ಲೋಕಸಭೆ ಚುನಾವಣೆ ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ತುಂಬಾ ಕಡಿಮೆ ಸಮಯ ಇದೆ. ಹೀಗಾಗಿ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಪೈಪೋಟಿ ಶುರು ಮಾಡಿವೆ. ಹೀಗಿದ್ದಾಗ ಕಾಂಗ್ರೆಸ್ & ಬಿಜೆಪಿ ನಡುವೆ ನೇರ ಯುದ್ಧವು ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕರ್ನಾಟಕ ಕಾಂಗ್ರೆಸ್ ನೀಡಿರುವ ಹೇಳಿಕೆ ಇದೀಗ ವೈರಲ್ ಆಗುತ್ತಿದ್ದು, ಪೊಲಿಟಿಕಲ್ ಫೈಟ್ ಬಲು ಜೋರಾಗಿದೆ. ಹಾಗಾದ್ರೆ ಕಾಂಗ್ರೆಸ್ ಹೇಳಿದ್ದೇನು? ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ.

Lok Sabha Election 2024 This Is What Karnataka Congress Said About PM Narendra Modi

'ನರೇಂದ್ರ ಮೋದಿ ಅವರೇ..'

ಇದೀಗ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಭಾರಿ ವಾಗ್ದಾಳಿ ನಡೆಸಿದೆ. '@narendramodi ಅವರೇ, ವಿಧಾನಸಭೆ ಚುನಾವಣೆಯಲ್ಲಿ ಕೈಬೀಸಿ ಹೋದ ನಂತರ ಈಗ ಲೋಕಸಭೆ ಚುನಾವಣೆಗಾಗಿ ಕರ್ನಾಟಕದಲ್ಲಿ ಕೈಬೀಸಿ ಹೋಗಲು ಬರುತ್ತಿದ್ದೀರಿ! ತಮಗೆ ಸುಸ್ವಾಗತ. ಈಗಲಾದರೂ ಕರ್ನಾಟಕವನ್ನು ನೆನಪು ಮಾಡಿಕೊಂಡಿದ್ದಕ್ಕೆ ಸಂತೋಷ. ಕರ್ನಾಟಕ ಭೀಕರ ಬರ ಎದುರಿಸಿದ್ದು, ಮುಖ್ಯಮಂತ್ರಿಗಳು ಪತ್ರ ಬರೆದು, ಭೇಟಿಯಾಗಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದು ನಿಮಗೆ ನೆನಪಿದೆಯೇ? ಬರ ಎದುರಿಸುತ್ತಿರುವ ಕರ್ನಾಟಕಕ್ಕೆ ದ್ರೋಹದ ಬರಸಿಡಿಲಾಗಿ ಬರುತ್ತಿರುವ ತಾವು ಯಾವ ನೈತಿಕತೆಯಲ್ಲಿ ಕನ್ನಡಿಗರ ಮತ ಕೇಳುತ್ತೀರಿ?' ಎಂದು ಪ್ರಶ್ನೆ ಮಾಡಿದೆ ಕಾಂಗ್ರೆಸ್.

ಎಲ್ಲಾ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ!

ಹೀಗೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ & ಬಿಜೆಪಿ ನಡುವೆ ತಿಕ್ಕಾಟ ಜೋರಾಗಿ ರಾಜಕೀಯ ಫೈಟಿಂಗ್ ಶುರುವಾಗಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಈಗ ಈ ಬಗ್ಗೆ ಚರ್ಚೆ ಕೂಡ ಜೋರಾಗಿದೆ. ಆನ್‌ಲೈನ್ ಫೈಟಿಂಗ್ ಕೂಡ ಭರ್ಜರಿಯಾಗಿ ಸಾಗುತ್ತಾ ಇದ್ದು, ಪರ & ವಿರೋಧದ ಚರ್ಚೆಯು ನಡೆಯುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ನಮ್ಮ ದೇಶದ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಎಲ್ಲಾ ಪ್ರಶ್ನೆಗೂ ಉತ್ತರ ಸಿಗಲಿದೆ.

Lok Sabha Election 2024 This Is What Karnataka Congress Said About PM Narendra Modi

ಕರ್ನಾಟಕದಲ್ಲಿ ಈ ದಿನ ಮತದಾನ!

ಈಗ ಭಾರತದ ಚುನಾವಣಾ ಆಯೋಗ ತಿಳಿಸಿರುವ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ, ಏಪ್ರಿಲ್ 26 ರಂದು ಎಲೆಕ್ಷನ್ ನಡೆಯಲಿದೆ. ಇದು ಕರ್ನಾಟಕದ ಪಾಲಿಗೆ ಮೊದಲ ಹಂತ, ಹಾಗೇ ಚುನಾವಣಾ ಆಯೋಗದ ಪ್ರಕಾರ ಇದು 2ನೇ ಹಂತವಾಗಲಿದೆ. ಇನ್ನು ಭಾರತದಲ್ಲಿ 3ನೇ ಹಂತ ಹಾಗೂ ಕರ್ನಾಟಕದ 2ನೇ ಹಂತದಲ್ಲಿ ಮೇ 7ರಂದು ಎಲೆಕ್ಷನ್ ನಡೆಯಲಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟಾರೆ 2 ಹಂತದಲ್ಲಿ ಎಲೆಕ್ಷನ್ ಮುಗಿಯುತ್ತದೆ. ಆದ್ರೆ ಎಲ್ಲ ಹಂತ ಒಗ್ಗೂಡಿಸಿ, ಒಂದೇ ಬಾರಿಗೆ ಜೂನ್ 4 ರಂದು ಎಲೆಕ್ಷನ್ ರಿಸಲ್ಟ್ ಹೊರ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+