ಲೋಕಸಭೆ ಚುನಾವಣೆ: 6 ನೇ ಹಂತದಲ್ಲಿ ಸುಮಾರು 59% ಮತದಾನ, ಪಶ್ಚಿಮ ಬಂಗಾಳಕ್ಕೆ ಅಗ್ರಸ್ಥಾನ
ನವದೆಹಲಿ, ಮೇ. 25 : ಲೋಕಸಭಾ ಚುನಾವಣೆಯ ಏಳು ಹಂತಗಳಲ್ಲಿ ಇಂದು ಆರನೇ ಹಂತದ ಮತದಾನ ಮುಗಿದಿದೆ. ದೇಶದ ಹಲವಾರು ಭಾಗಗಳಲ್ಲಿ ಸುಡುವ ಶಾಖದ ನಡುವೆಯೇ ಲಕ್ಷಾಂತರ ಭಾರತೀಯರು ಮತ ಚಲಾಯಿಸಿದ್ದಾರೆ. ಆರನೇ ಹಂತದ ಮತದಾನವು ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಲ್ಲಿ ನಡೆದಿದೆ.
ಶನಿವಾರ (ಮೇ. 25) ನಡೆದ ಆರನೇ ಹಂತದ ಮತದಾನದಲ್ಲಿ ದೇಶದಲ್ಲಿ ಒಟ್ಟು ಶೇ 58.98ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ 78% ಕ್ಕಿಂತ ಹೆಚ್ಚಿನ ಮತದಾನವಾಗಿದ್ದು, ಅಗ್ರಸ್ಥಾನದಲ್ಲಿದೆ. ಸಿಎಂ ಮಮತಾ ಬ್ಯಾನರ್ಜಿ ಆಡಳಿತದ ರಾಜ್ಯದಲ್ಲಿ ಹೆಚ್ಚಿನ ಮತದಾನವಾಗಿದ್ದು, ಬಿಹಾರ ಮತ್ತು ಉತ್ತರ ಪ್ರದೇಶವು 53.19% ಮತ್ತು 54.03% ಮತದಾನದೊಂದಿಗೆ ಕೊನೆಯ ಸ್ಥಾನಗಳನ್ನು ಪಡೆದಿವೆ.

ದೆಹಲಿಯಲ್ಲಿ ಒಂದೇ ಹಂತದಲ್ಲಿ 54.37% ಮತದಾನವಾಗಿದೆ, ಹರಿಯಾಣದಲ್ಲಿ 58.24%, ಒಡಿಶಾದಲ್ಲಿ 59.92% ಮತ್ತು ಜಾರ್ಖಂಡ್‌ನಲ್ಲಿ 62.66% ಮತದಾನವಾಗಿದೆ. ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 51 ಕ್ಕಿಂತ ಹೆಚ್ಚು ಮತದಾನವಾಗಿದೆ. 1989 ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕತೆ ಪ್ರಾರಂಭವಾದ ನಂತರ ಮೊದಲ ಬಾರಿಗೆ ಇಷ್ಟು ಮತದಾನವಾಗಿದ್ದು ದಾಖಲೆ ಸೃಷ್ಟಿಸಿದೆ.
ಇನ್ನು, ಇವುಗಳು ತಾತ್ಕಾಲಿಕ ಸಂಖ್ಯೆಗಳಾಗಿದ್ದು, ಅಂತಿಮ ಮತದಾನದ ಪ್ರಮಾಣವು ಸ್ವಲ್ಪಮಟ್ಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಇಂದು ಮತದಾನ ಮಾಡಿದವರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ , ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಕೂಡ ಸೇರಿದ್ದಾರೆ.
ಯಾವ ರಾಜ್ಯದಲ್ಲಿ ಏನಾಯಿತು?
ಪಶ್ಚಿಮ ಬಂಗಾಳದ ಎಂಟು ಲೋಕಸಭಾ ಕ್ಷೇತ್ರಗಳ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. 2019 ರ ಲೋಕಸಭೆ ಚುನಾವಣೆಯಲ್ಲಿ ಎಂಟು ಸ್ಥಾನಗಳ ಪೈಕಿ ಬಿಜೆಪಿ ಐದು ಮತ್ತು ಟಿಎಂಸಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿತು.
ಜಾರ್ಖಂಡ್‌ನ ನಾಲ್ಕು ಲೋಕಸಭಾ ಕ್ಷೇತ್ರಗಳಾದ ಗಿರಿದಿಹ್, ಧನ್‌ಬಾದ್, ರಾಂಚಿ ಮತ್ತು ಜಮ್‌ಶೆಡ್‌ಪುರದಲ್ಲಿ 62.16% ರಷ್ಟು ಮತದಾನವಾಗಿದೆ. ಜೆಮ್‌ಶೆಡ್‌ಪುರದಲ್ಲಿ ಅತಿ ಹೆಚ್ಚು ಅಂದರೆ 66.79%, ಗಿರಿದಿಹ್ 65.44%, ಧನ್‌ಬಾದ್ 58.90% ಮತ್ತು ರಾಂಚಿ 58.80% ನಂತರದ ಮತದಾನವಾಗಿದೆ.

ಬಿಹಾರದಲ್ಲಿ, 1.49 ಕೋಟಿ ಅರ್ಹ ಮತದಾರರಲ್ಲಿ 52.80% ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಿದ್ದಾರೆ. ಪಶ್ಚಿಮ ಚಂಪಾರಣ್‌ನಲ್ಲಿ ಅತಿ ಹೆಚ್ಚು ಅಂದರೆ 56.96%, ವೈಶಾಲಿ 56.11%, ಪೂರ್ವಿ ಚಂಪಾರಣ್ 55.80%, ವಾಲ್ಮೀಕಿ ನಗರ 54.81%, ಶಿಯೋಹರ್ 54.37%, ಮಹಾರಾಜ್‌ಗಂಜ್ 49.15%, ಗೋಪಾಲ್‌ಗಂಜ್ 48.71% ಮತ್ತು ಸಿವಾನ್ 47.49% ಮತದಾನವಾಗಿದೆ.
ಒಡಿಶಾದ ಆರು ಲೋಕಸಭಾ ಕ್ಷೇತ್ರಗಳು ಮತ್ತು 42 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ 59.72% ಮತದಾನವಾಗಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸಂಬಲ್‌ಪುರದಲ್ಲಿ 66.67% ಮತ್ತು ಪಲ್ಲಹರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 73.86% ಮತದಾನವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ, 18.36 ಲಕ್ಷ ಮತದಾರರಲ್ಲಿ ಸುಮಾರು 52% ಶನಿವಾರ ಮತದಾನ ಮಾಡಿದ್ದು, ಇದು 28 ವರ್ಷಗಳಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಸುರನ್‌ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 68.56% ಮತದಾನವಾಗಿದ್ದು, ರಾಜೌರಿಯಲ್ಲಿ 67.09% ಮತದಾನವಾಗಿದೆ. ಅನಂತನಾಗ್, ಅನಂತನಾಗ್ ಪಶ್ಚಿಮ ಮತ್ತು ಕುಲ್ಗಾಮ್ ವಿಧಾನಸಭಾ ಕ್ಷೇತ್ರಗಳಲ್ಲಿ 35% ಕ್ಕಿಂತ ಕಡಿಮೆ ಮತದಾನವಾಗಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications