Get Updates
Get notified of breaking news, exclusive insights, and must-see stories!

Arun Goel: ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜೀನಾಮೆ ನೀಡಿ ಆಘಾತ ನೀಡಿದ ಚುನಾವಣಾ ಆಯುಕ್ತ ಅರುಣ್ ಗೋಯಲ್!

ನವದೆಹಲಿ, ಮಾರ್ಚ್ 10: ಲೋಕಸಭೆ ಚುನಾವಣೆಗೆ ವಾರಗಳು ಬಾಕಿ ಇರುವಾಗಲೇ ಆಘಾತಕಾರಿ ರೀತಿಯಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿಗಳು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಮೂರು ಸದಸ್ಯರ ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಖಾಲಿಯಿತ್ತು. ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಉಳಿದಿದ್ದಾರೆ.

ಲೋಕಸಭೆ ಚುನಾವಣೆ ದಿನಾಂಕಗಳನ್ನು ಮುಂದಿನ ವಾರ ಘೋಷಿಸುವ ಸಾಧ್ಯತೆಯಿದ್ದು, ಇದೇ ವೇಳೆ ಅರುಣ್ ಗೋಯಲ್ ಅವರ ರಾಜೀನಾಮೆ ಈಗ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ. ರಾಜೀನಾಮೆ ನೀಡುವಾಗ ಅರುಣ್ ಗೋಯಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರವು ಅವರನ್ನು ರಾಜೀನಾಮೆ ನೀಡದಂತೆ ಮನವೊಲಿಸಲು ಪ್ರಯತ್ನಿಸಿದೆ, ಆದರೆ ಅವರು ನಿರಾಕರಿಸಿದ್ದಾರೆ.

Lok Sabha Election 2024 Election Commissioner Arun Goel Resigns

ಅರುಣ್ ಗೋಯಲ್ 1985-ಬ್ಯಾಚ್ ಐಎಎಸ್ ಅಧಿಕಾರಿ ನವೆಂಬರ್ 18, 2022 ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ನಿವೃತ್ತಿ ಪಡೆದ ಒಂದು ದಿನದ ನಂತರ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಈ ನೇಮಕಾತಿ ಕೂಡ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಸರ್ಕಾರಕ್ಕೇ ಏನಿದು ಆತುರ ಎಂದು ಕೇಳಿತ್ತು.

"ಕಾನೂನು ಸಚಿವರು ಶಾರ್ಟ್‌ಲಿಸ್ಟ್ ಮಾಡಲಾದ ಹೆಸರುಗಳ ಪಟ್ಟಿಯಿಂದ ನಾಲ್ಕು ಹೆಸರುಗಳನ್ನು ತೆಗೆದುಕೊಳ್ಳುತ್ತಾರೆ. ಫೈಲ್ ಅನ್ನು ನವೆಂಬರ್ 18 ರಂದು ಫೈಲ್ ಮಡಲಾಗಿತ್ತು. ಅದೇ ದಿನ ಅದು ಮೂವ್ ಆಗಿದೆ. ಪಿಎಂ ಕೂಡ ಅದೇ ದಿನ ಹೆಸರನ್ನು ಶಿಫಾರಸು ಮಾಡುತ್ತಾರೆ. ಇದೇಲ್ಲಾ ಯಾವುದಾದರೂ ತರಾತುರಿಯಲ್ಲಿ ಇದನ್ನು ಮಾಡಲಾಗಿದೆಯೇ?, ಇಂತಹ ಆತುರವೇನು..?" ಎಂದು ನ್ಯಾಯಾಲಯ ಪ್ರಶ್ನಿಸಿತ್ತು.

ಅರುಣ್ ಗೋಯಲ್ ಅವರ ನೇಮಕಾತಿಯ ವಿರುದ್ಧದ ಅರ್ಜಿಯನ್ನು ಕಳೆದ ವರ್ಷ ಇಬ್ಬರು ನ್ಯಾಯಾಧೀಶರ ಪೀಠವು ವಜಾಗೊಳಿಸಿತ್ತು. ಸಂವಿಧಾನ ಪೀಠವು ಸಮಸ್ಯೆಯನ್ನು ಪರಿಶೀಲಿಸಿ, ಅರುಣ್ ಗೋಯಲ್ ಅವರ ನೇಮಕಾತಿಯನ್ನು ರದ್ದುಗೊಳಿಸಲು ನಿರಾಕರಿಸಿದೆ ಎಂದು ನ್ಯಾಯಾಧೀಶರು ಗಮನಿಸಿದರು. ಇನ್ನು, ಅರುಣ್ ಗೋಯಲ್ ಅವರ ಅಧಿಕಾರಾವಧಿಯು 2027 ರವರೆಗೆ ಇತ್ತು. ಮುಂದಿನ ವರ್ಷ ಅವರು ರಾಜೀವ್ ಕುಮಾರ್ ನಿವೃತ್ತಿ ಬಳಿಕ ಮುಖ್ಯ ಚುನಾವಣಾ ಆಯುಕ್ತರಾಗುತ್ತಿದ್ದರು.

ಇನ್ನು, ಅರುಣ್ ಗೋಯಲ್ ಅವರ ರಾಜೀನಾಮೆಗೆ ಮುಂಚೆಯೇ, ತ್ರಿಸದಸ್ಯ ಸಮಿತಿಯ ಬದಲಿಗೆ ಅವರು ಮತ್ತು ರಾಜೀವ್ ಕುಮಾರ್ ಮಾತ್ರ ಭಾರತೀಯ ಚುನಾವಣಾ ಆಯೋಗದ ಕೋರ್ ಬಾಡಿಯಲ್ಲಿ ಲೋಕಸಭೆ ಚುನಾವಣೆ ನಡೆಸಲಾಗುತ್ತಿದೆ ಎಂಬ ಆತಂಕವಿತ್ತು. ಇತರ ಚುನಾವಣಾ ಆಯುಕ್ತರಾದ ಅನುಪ್ ಪಾಂಡೆ ಕಳೆದ ತಿಂಗಳು ನಿವೃತ್ತರಾಗಿದ್ದರು.

Lok Sabha Election 2024 Election Commissioner Arun Goel Resigns

ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ಅರುಣ್ ಗೋಯಲ್ ಅವರ ರಾಜೀನಾಮೆಯನ್ನು "ಬಹಳ ಕಾಳಜಿ" ಎಂದು ವ್ಯಂಗ್ಯವಾಡಿದ್ದಾರೆ. ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯು ಈಗ ಪ್ರಧಾನಿ, ಕೇಂದ್ರ ಕ್ಯಾಬಿನೆಟ್ ಸಚಿವರು ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

"ಹಠಾತ್ ನಡೆಯಲ್ಲಿ, ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಹಠಾತ್ತನೆ ರಾಜೀನಾಮೆ ನೀಡಿದ್ದಾರೆ. ಇತರ ಚುನಾವಣಾ ಆಯೋಗದ ಹುದ್ದೆ ಖಾಲಿಯಾಗಿದೆ... ಮೋದಿ ಸರ್ಕಾರವು ಹೊಸ ಕಾನೂನನ್ನು ಪರಿಚಯಿಸಿದೆ. ಅಲ್ಲಿ ಈಗ ಚುನಾವಣಾ ಆಯುಕ್ತರನ್ನು ಪ್ರಧಾನಿ ಮೋದಿ ಮತ್ತು ಸಚಿವರು ಆಯ್ಕೆ ಮಾಡುತ್ತಾರೆ. ಆದ್ದರಿಂದ, 2024 ರ ಲೋಕಸಭಾ ಚುನಾವಣೆಯ ಮೊದಲು, ಮೋದಿ ಅವರು ಇಂದಿನ ರಾಜೀನಾಮೆಯ ನಂತರ 3 ಚುನಾವಣಾ ಆಯುಕ್ತರ ಪೈಕಿ 2 ಸದಸ್ಯರನ್ನು ನೇಮಕ ಮಾಡುತ್ತಾರೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು ರಾಜೀನಾಮೆಯನ್ನು ಗಂಭೀರ ವಿಷಯ ಎಂದು ಕರೆದಿದ್ದಾರೆ. ಚುನಾವಣಾ ಆಯೋಗವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರಲ್ಲಿ "ಸಂಪೂರ್ಣವಾಗಿ ಯಾವುದೇ ಪಾರದರ್ಶಕತೆ ಇಲ್ಲ" ಎಂದು ಹೇಳಿದ್ದಾರೆ.

ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ

ಕಳೆದ ವರ್ಷ ಮಾರ್ಚ್‌ನಲ್ಲಿ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯಿಂದ ನೇಮಕ ಮಾಡಬೇಕೆಂದು ನಿರ್ದೇಶಿಸಿತ್ತು. ಸಂಸತ್ತು ಕಾನೂನು ರೂಪಿಸುವವರೆಗೆ ಆದೇಶ ಜಾರಿಯಲ್ಲಿರುತ್ತದೆ ಎಂದೂ ಪೀಠ ಹೇಳಿದೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ತೀರ್ಪು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+