ಲೋಕಸಭೆ ಚುನಾವಣೆ ಮತದಾನ, ಕರ್ನಾಟಕದಲ್ಲಿ ಯಾವಾಗ ವೋಟಿಂಗ್?
ಭಾರತದ ಲೋಕಸಭೆ ಚುನಾವಣೆ ಇಡೀ ಜಗತ್ತಿನ ಹಣೆಬರಹ ನಿರ್ಧಾರ ಮಾಡುತ್ತೆ. ಯಾಕೆ ಅಂದ್ರೆ ಈಗ ಇಡೀ ಜಗತ್ತಿಗೆ ಭಾರತ ಬೇಕೆ ಬೇಕು. ಹೀಗಿದ್ದಾಗ ಲೋಕಸಭೆ ಚುನಾವಣೆಗಾಗಿ ಇಂದು ದಿನಾಂಕ ಕೂಡ ಘೋಷಣೆ ಆಗಿದೆ. ಹಾಗಾದರೆ ಕರ್ನಾಟಕದಲ್ಲಿ ಲೋಕಸಭೆ ಡೇಟ್ ಯಾವಾಗ? ಕನ್ನಡಿಗರು ಯಾವ ದಿನಾಂಕ ವೋಟಿಂಗ್ ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಈಗ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ 2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ. ಇದಕ್ಕೆ ಬೇಕಾಗಿರುವ ಎಲ್ಲಾ ತಯಾರಿ ಮಾಡಿಕೊಂಡು, ಚುನಾವಣಾ ಅಧಿಕಾರಿಗಳು ಭದ್ರತೆನ ಕೈಗೊಳ್ಳಲಿದ್ದಾರೆ. 2024ರ ಲೋಕಸಭೆ ಚುನಾವಣೆ ಫಲಿತಾಂಶವು ಜೂನ್ 4ರಂದು ಹೊರಬೀಳಲಿದೆ. ಹೀಗೆ ಶತಕೋಟಿ ಭಾರತೀಯರು ಇಷ್ಟು ದಿನಗಳ ಕಾಲ ಕಾಯ್ತಿದ್ದ ಸಮಯ ಬಂದಿದ್ದು, ರಾಜಕೀಯ ಪಕ್ಷಗಳ ಚುನಾವಣಾ ಯುದ್ಧಕ್ಕೆ ರಣಕಹಳೆ ಇದೀಗ ಮೊಳಗಿದೆ. ಹಾಗಾದರೆ ಕರ್ನಾಟಕದಲ್ಲಿ ಇದೀಗ ಚುನಾವಣೆ ನಡೆಯುವ ದಿನಾಂಕ ಯಾವುದು? ಬನ್ನಿ ತಿಳಿಯೋಣ.

ಕರ್ನಾಟಕದಲ್ಲಿ ಈ ದಿನ ಮತದಾನ!
ಈಗ ಭಾರತದ ಚುನಾವಣಾ ಆಯೋಗ ತಿಳಿಸಿರುವ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ, ಏಪ್ರಿಲ್ 26 ರಂದು ಎಲೆಕ್ಷನ್ ನಡೆಯಲಿದೆ. ಇದು ಕರ್ನಾಟಕದ ಪಾಲಿಗೆ ಮೊದಲ ಹಂತ, ಹಾಗೇ ಚುನಾವಣಾ ಆಯೋಗದ ಪ್ರಕಾರ ಇದು 2ನೇ ಹಂತವಾಗಲಿದೆ. ಇನ್ನು ಭಾರತದಲ್ಲಿ 3ನೇ ಹಂತ ಹಾಗೂ ಕರ್ನಾಟಕದ 2ನೇ ಹಂತದಲ್ಲಿ ಮೇ 7ರಂದು ಎಲೆಕ್ಷನ್ ನಡೆಯಲಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟಾರೆ 2 ಹಂತದಲ್ಲಿ ಎಲೆಕ್ಷನ್ ಮುಗಿಯುತ್ತದೆ. ಆದ್ರೆ ಎಲ್ಲ ಹಂತ ಒಗ್ಗೂಡಿಸಿ, ಒಂದೇ ಬಾರಿಗೆ ಜೂನ್ 4 ರಂದು ಎಲೆಕ್ಷನ್ ರಿಸಲ್ಟ್ ಹೊರ ಬೀಳಲಿದೆ.
ಪ್ರಪಂಚದ ಕಣ್ಣು ಭಾರತದ ಮೇಲೆ!
2024ರ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ ಅಭ್ಯರ್ಥಿಗಳೂ ಸಿದ್ಧವಾಗಿ ಕೂತಿದ್ದಾರೆ. ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿ, ರಣಕಹಳೆ ಮೊಗಳಗಿಸಿದೆ. ಇನ್ನೇನು ಕೆಲ ದಿನಗಳಲ್ಲಿ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ಮಾಡಲಿದ್ದು, ಹಾಗೇ ಇದಕ್ಕೆ ಬೇಕಾದ ತಯಾರಿಗಳು ಕೂಡ ಸಾಗಿವೆ. ಹಾಗೇ ಕರ್ನಾಟಕದಲ್ಲಿ ಕೂಡ ಎಲ್ಲಾ ರೀತಿ ತಯಾರಿ ನಡೆದಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತದ ಚುನಾವಣೆ ನಡೆಯಲಿದ್ದು, ಹಾಗೇ ಚುನಾವಣೆ ಫಲಿತಾಂಶ ಜೂನ್ 4 ರಂದು ಹೊರಬೀಳಲಿದೆ. ಈ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿರುವ ಭಾರತದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪುತ್ತಿದೆ.

ಒಟ್ನಲ್ಲಿ ಇಡೀ ಜಗತ್ತಿನ ಗಮನ ಸೆಳೆಯುತ್ತಿರುವ ಭಾರತದ ಲೋಕಸಭೆ ಚುನಾವಣೆ ಇದೀಗ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ರಿಸಲ್ಟ್ ಕೂಡ ಹೊರಬೀಳಲಿದ್ದು, ಮತದಾರರ ಸಂಪೂರ್ಣ ಮಾಹಿತಿ ಸಮೇತ ಭದ್ರತೆಗೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನೂ ಚುನಾವಣಾ ಆಯೋಗ ಇದೀಗ ಕೈಗೊಂಡಿದೆ.












Click it and Unblock the Notifications