ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ 'ನಕಾರಾತ್ಮಕ' ಮತದಾನ ಅವಕಾಶ

By Mahesh
|
Google Oneindia Kannada News

ನವದೆಹಲಿ, ಮಾ.5: ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ ನಕಾರಾತ್ಮಕ ಮತದಾನ ಮಾಡುವ ಅವಕಾಶವನ್ನು ಮತದಾರರಿಗೆ ಮೊಟ್ಟ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಕಲ್ಪಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.

49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ "None of the Above"(NOTA) ಎಂದು ಮತದಾನ ಮಾಡಬಹುದು ಎಂದು ಇದು ಮತದಾರರಿಗೆ ಮೊಟ್ಟ ಮೊದಲ ಬಾರಿಗೆ ನೀಡಿರುವ ವ್ಯವಸ್ಥೆಯಾಗಿದ್ದು, ವಿದ್ಯುನ್ಮಾನ ಮತಯಂತ್ರ(ಇವಿಎಂ) ಗಳಲ್ಲಿ ಪ್ರತ್ಯೇಕ ಬಟನ್ ಒದಗಿಸಲಾಗುತ್ತದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್ ಸಂಪತ್ ಅವರು ವಿವರಿಸಿದರು.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮಗೆ ಇಷ್ಟವಿಲ್ಲ ಎಂಬ ಕಾರಣಕ್ಕಾಗಿ ಮತದಾರರು ತಮ್ಮ ಹಕ್ಕು ಚಲಾಯಿಸದೆ ದೂರ ಇರುವ ಅಗತ್ಯವಿಲ್ಲ.ಏಕೆಂದರೆ, ಇದೇ ಮೊದಲ ಬಾರಿಗೆ ಮತದಾರರು ನಕಾರಾತ್ಮಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. NOTA ಬಟನ್ ಅಳವಡಿಕೆ ಹಾಗೂ ಅದರ ಕಾರ್ಯ ನಿರ್ವಹಣೆ ಬಗ್ಗೆ ಚುನಾವಣಾ ಸಿಬ್ಬಂದಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಸಂಪತ್ ಹೇಳಿದ್ದಾರೆ.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ವಿದ್ಯುನ್ಮಾನ ಯಂತ್ರದಲ್ಲಿ ಅಳವಡಿಸಲಾಗಿರುವ ಪ್ರತ್ಯೇಕ ಬಟನ್ ಒತ್ತಿದರೆ ಸಾಕು ನಿಮ್ಮ ಮತ ಯಾರಿಗೂ ಕೂಡ ಚಲಾವಣೆಯಾಗುವುದಿಲ್ಲ. ಈ ಹಿಂದೆ 49 ಒ ಅನ್ವಯ ನಿರ್ದಿಷ್ಟವಾದ ಅರ್ಜಿಯೊಂದನ್ನು ಪಡೆದು ತಮಗೆ ಮತ ಹಾಕಲು ಇಷ್ಟವಿಲ್ಲ ಎಂಬುದನ್ನು ಭರ್ತಿ ಮಾಡಬೇಕಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಆಯೋಗ ವಿದ್ಯುನ್ಮಾನ ಯಂತ್ರದಲ್ಲಿಯೇ ನಕಾರಾತ್ಮಕ ಮತದಾನಕ್ಕೂ ಅವಕಾಶ ನೀಡಿದೆ.

2011 ರಲ್ಲೇ 49 ಒ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿದರೂ 2013 ರಲ್ಲೂ ಇನ್ನೂ ಗೊಂದಲ ಮುಂದುವರೆದಿತ್ತು. ಏನಿದು ನಕರಾತ್ಮಕ ಮತದಾನ ಮುಂದೆ ಓದಿ...

ಕನ್ನಡದಲ್ಲಿ ದೊರೆಯಲಿದೆ ನೋಟಾ ಬಟನ್

ಕನ್ನಡದಲ್ಲಿ ದೊರೆಯಲಿದೆ ನೋಟಾ ಬಟನ್

None of the Above ಎಂಬ ಆಯ್ಕೆಯನ್ನು ಇಂಗ್ಲಿಷ್ ಭಾಷೆಯ ಬದಲು ಆಯಾ ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಆದೇಶಿಸಿತ್ತು. ಹೀಗಾಗಿ ಕನ್ನಡದಲ್ಲೂ ಮೇಲಿನವರಲ್ಲಿ ಯಾರಿಗೂ ಮತ ಹಾಕುವುದಿಲ್ಲ ಎಂಬ ಆಯ್ಕೆ ದೊರೆಯಲಿದೆ.[ವಿವರ ಇಲ್ಲಿ ಲಭ್ಯ]

ಗೊಂದಲ ನಿವಾರಣೆಯಾಗಲಿದೆ

ಗೊಂದಲ ನಿವಾರಣೆಯಾಗಲಿದೆ

2011 ರಲ್ಲೇ 49 ಒ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿದರೂ 2013 ರಲ್ಲೂ ಇನ್ನೂ ಗೊಂದಲ ಮುಂದುವರೆದಿತ್ತು. ಅದರೆ, ಸುಪ್ರೀಂಕೋರ್ಟ್ ನೀಡಿರುವ ಮೇಲ್ಕಂಡ ಆದೇಶದಿಂದ ಗೊಂದಲ ನಿವಾರಣೆಯಾಗಲಿದೆ.
* ಮತದಾರರಿಗೆ ಗೊಂದಲವಾಗದಂತೆ ಎವಿಎಂಗಳಲ್ಲಿ 'none of the above' ಆಯ್ಕೆ ಬಟನ್ ನೀಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

* ಈ ಹೊಸ ವ್ಯವಸ್ಥೆಯಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಮೂಡುತ್ತದೆ. ಪ್ರಮುಖ ಪಕ್ಷಗಳು ನಕರಾತ್ಮಕ ಮತದಾನ ಪ್ರಕ್ರಿಯೆಯನ್ನು ಸ್ವಾಗತಿಸುವ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಮಾತುಕತೆ ನಡೆಸುತ್ತಿವೆ.

ಚುನಾವಣೆ ಪಾರದರ್ಶಕತೆ ಸಾಧ್ಯತೆ

ಚುನಾವಣೆ ಪಾರದರ್ಶಕತೆ ಸಾಧ್ಯತೆ

* ನಕಾರಾತ್ಮಕ ಮತದಾನದಿಂದಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದಾಗಿದ್ದು, ಪಕ್ಷಗಳು ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಒತ್ತಡ ಉಂಟಾಗಲಿದೆ.

* ಈ ಹೊಸ ವ್ಯವಸ್ಥೆಗೆ ಕಾರಣವಾದ ಎನ್ ಜಿಒ ಸಲ್ಲಿಸಿದ್ದ ಅರ್ಜಿ ಪ್ರಕಾರ ಎಲ್ಲಾ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡುವ ಹಕ್ಕು ಮತದಾರನಿಗೆ ಇದೆ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ.

ಅಣ್ಣಾ ಹಜಾರೆ, ಅರವಿಂದ್ ಆಗ್ರಹ ಏನಿತ್ತು?

ಅಣ್ಣಾ ಹಜಾರೆ, ಅರವಿಂದ್ ಆಗ್ರಹ ಏನಿತ್ತು?

* ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ ಅವರು ನಕರಾತ್ಮಕ ಮತದಾನ(right to reject) ಹಾಗೂ ವ್ಯರ್ಥ ಜನಪ್ರತಿನಿಧಿ ಹಿಂದಕ್ಕೆ ಕರೆಸಿಕೊಳ್ಳುವುದು(right to recall) ಜಾರಿಗೆ ತರಲು ಶ್ರಮಿಸಿದವರಾಗಿದ್ದಾರೆ.

* right to recall ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಇನ್ನೂ ಚರ್ಚೆ ನಡೆಯುತ್ತಲೇ ಇದೆ. right to reject ಗೆ ಸದ್ಯಕ್ಕೆ ಬೆಲೆ ಸಿಕ್ಕಿದೆ.

ಸದ್ಯದ ಮತದಾನ ವ್ಯವಸ್ಥೆ ಲೋಪ

ಸದ್ಯದ ಮತದಾನ ವ್ಯವಸ್ಥೆ ಲೋಪ

* ಸದ್ಯದ ವ್ಯವಸ್ಥೆಯಲ್ಲೂ ಅಭ್ಯರ್ಥಿಯನ್ನು ನಿರಾಕರಿಸುವ ಹಕ್ಕು ಇದೆಯಾದರೂ ಅಭ್ಯರ್ಥಿ ತಿರಸ್ಕರಿಸುವ ಮತದಾರನ ಗೌಪ್ಯತೆ ಉಳಿಸಿಕೊಳ್ಳಲಾಗುತ್ತಿಲ್ಲ.
* ಈ ಮತದಾನ ಮಾಡಬೇಕಾದರೆ ಯಾವ ಕಾರಣಕ್ಕಾಗಿ ಯಾವ ಅಭ್ಯರ್ಥಿಯೂ ಹಿಡಿಸಿಲ್ಲ ಎಂದು ನಮೂದಿಸಬೇಕು ಮತದಾರನ ಹೆಸರು ವಿಳಾಸವನ್ನು ಚುನಾವಣಾ ಆಯೋಗ ಗುಪ್ತವಾಗಿರಿಸುತ್ತಿಲ್ಲ.
* ರಿಜೆಕ್ಟ್ ಆದ ಮತಗಳನ್ನು ಮತ ಎಣಿಕೆ ಸಂದರ್ಭದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಕೂಡಾ ಸ್ಪಷ್ಟತೆ ಇಲ್ಲ. ಶೇ 40ಕ್ಕಿಂತ ಹೆಚ್ಚು ಮತಗಳು ನಿರಾಕರಣೆ ಮತಗಳಾಗಿದ್ದರೆ ಅಥವಾ ಇಬ್ಬರು ಅಭ್ಯರ್ಥಿಗಳ ಎಣಿಕೆ ಟೈ ಆದರೆ ಮಾತ್ರ ಪರಿಶೀಲಿಸಲಾಗುತ್ತಿದೆ.

ನೋಟಾ ಬಹುಮತವಾದರೆ ಮರು ಚುನಾವಣೆ ಇಲ್ಲ

ನೋಟಾ ಬಹುಮತವಾದರೆ ಮರು ಚುನಾವಣೆ ಇಲ್ಲ

ಮತದಾನದ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿರಾಕರಿಸಿದ್ದೇ ಆದರೆ ಅಂದರೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಯೂ ಬೇಡವೆನ್ನುವುದು ಬಹುಮತದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಮರುಚುನಾವಣೆ ನಡೆಸುವ ಪ್ರಮೇಯ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. [ವಿವರ ಇಲ್ಲಿ ಓದಿ]

English summary
Voters will, for the first time, be able to exercise the “None of the Above” (NOTA) option for candidates in the upcoming Lok Sabha polls, the Election Commission said on Wednesday (Mar.5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X