ಯುದ್ಧ ವಿಮಾನಗಳ ತಯಾರಿಕೆಗೆ ಕೈ ಹಾಕಿದ ಟಾಟಾ ಇಂಡಿಯಾ

Posted By:
Subscribe to Oneindia Kannada

ಪ್ಯಾರಿಸ್, ಜೂನ್ 19: ವಿಶ್ವದ ಹಲವಾರು ರಾಷ್ಟ್ರಗಳಿಗೆ ಯುದ್ಧ ಶಸ್ತ್ರಾಸ್ತ್ರ ಹಾಗೂ ಯುದ್ಧ ವಿಮಾನಗಳನ್ನು ತಯಾರಿಸಿಕೊಡುವ ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಕಂಪನಿಯು, ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಂ ಕಂಪನಿಯೊಂದಿಗೆ ಒಪ್ಪಂದವೊಂದಕ್ಕ ಸಹಿ ಹಾಕಿದೆ.

ಈ ಒಪ್ಪಂದದಂತೆ, ಎರಡೂ ಕಂಪನಿಗಳು ಭಾರತದಲ್ಲಿ ಎಫ್- 16 ಯುದ್ಧ ವಿಮಾನಗಳನ್ನು ತಯಾರಿಸಲಿವೆ.

Lockheed Martin signs pact with Tata to make F-16 fighter planes in India

ಸದ್ಯಕ್ಕೆ ಭಾರತೀಯ ವಾಯುಸೇನೆಯಲ್ಲಿ ರಷ್ಯಾ ನಿರ್ಮಿತ, ದಶಕಗಳ ಹಿಂದಿನಷ್ಟು ಹಳೆಯದಾದ ಯುದ್ಧ ವಿಮಾನಗಳು ಉಪಯೋಗದಲ್ಲಿವೆ. ಇವುಗಳನ್ನು ಬದಲಾಯಿಸಿ, ಹೊಸ ವಿಮಾನಗಳನ್ನು ಸೇರ್ಪಡೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ.

ಆದರೆ, ಹೊಸ ಯುದ್ಧ ವಿಮಾನಗಳು ಭಾರತದಲ್ಲೇ ತಯಾರಾಗಬೇಕೆಂಬ ಅಭಿಲಾಷೆ ಅವರದ್ದು. ಅದರ ಫಲವಾಗಿ, ಟಾಟಾ ಸಂಸ್ಥೆ ಹಾಗೂ ಲಾಕ್ಹೀಡ್ ಮಾರ್ಟಿನ್ ಕಂಪನಿಗಳ ನಡುವಿನ ಒಪ್ಪಂದ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lockheed Martin signed an agreement with Indias Tata Advanced Systems on Monday to produce F-16 fighter planes in India.
Please Wait while comments are loading...