ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಸೇವೆ ಸ್ಥಗಿತದ ನಂತರ ಹೆಚ್ಚಾದ ಕುತೂಹಲ: ಲಾಕ್ ಡೌನ್ 4, ಹೊಸ ಮಾರ್ಗಸೂಚಿ ಮೇ 15ಕ್ಕೆ ಪ್ರಕಟ?

|
Google Oneindia Kannada News

ನವದೆಹಲಿ, ಮೇ 14: ಸೋಮವಾರದಿಂದ (ಮೇ 18) ಆರಂಭವಾಗಲಿರುವ ನಾಲ್ಕನೇ ಲಾಕ್ ಡೌನ್ ನ ಮಾರ್ಗಸೂಚಿಯನ್ನು, ಕೇಂದ್ರ ಸರಕಾರ ನಾಳೆ ಪ್ರಕಟಿಸುವ ಸಾಧ್ಯತೆಯಿದೆ.

Recommended Video

ಜನರ ಕಷ್ಟದ ಸ್ಥಿತಿಯನ್ನು ಮೋದಿ ಗೇಲಿ ಮಾಡಿದ್ದಾರೆ..? | H D Kumaraswamy | Economy Package

ನಾಲ್ಕನೇ ಲಾಕ್ ಡೌನ್ ವಿಭಿನ್ನವಾಗಿರಲಿದೆ ಎಂದು ಈಗಾಗಲೇ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ವೇಳೆ ಹೇಳಿದ್ದರು. ಬಹುತೇಕ ರಾಜ್ಯಗಳು ತಮ್ಮ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಈಗಾಗಲೇ ಕಳುಹಿಸಿಕೊಟ್ಟಿವೆ.

ಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವದ ಘೋಷಣೆಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವದ ಘೋಷಣೆ

"ಆಯಾಯ ರಾಜ್ಯಗಳು ನೀಡಿರುವ ವರದಿಯನ್ನು ಆಧರಿಸಿ ಹೆಚ್ಚಿನ ಕ್ಷೇತ್ರಗಳಲ್ಲಿ ಚಟುವಟಿಕೆಯನ್ನು ಆರಂಭಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎನ್ನುವುದು ನಿರ್ಧಾರವಾಗಲಿದೆ"ಎಂದು ಗೃಹ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

Lockdown 4: New Guidelines Likely To Be Announced On May 15

ಆರು ಗಂಟೆಗಳ ಕಾಲ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ್ದರು. ಮತ್ತು, ಮೇ ಹದಿನೆಂಟರೊಳಗೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಪ್ರಧಾನಿಗಳು ಹೇಳಿದ್ದರು.

ಮೇ 17ರ ಬಳಿಕ ಮಾಲ್, ಜಾತ್ರೆಗಳು, ಧಾರ್ಮಿಕ ಸಮಾವೇಶ ಮುಂತಾದವುಗಳನ್ನು ಹೊರತು ಪಡಿಸಿ, ಹೆಚ್ಚಿನ ಸೇವೆಗಳು ಆರಂಭವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಜೂನ್ 30ರ ವರೆಗೆ ಪ್ಯಾಸೆಂಜರ್ ರೈಲು ಸೇವೆ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟವಾದ ನಂತರ, ನಾಲ್ಕನೇ ಲಾಕ್ ಡೌನ್ ಮಾರ್ಗಸೂಚಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ.

ವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯ

"ಕೊರೊನಾ ಜೊತೆಗಿನ ನಮ್ಮ ಹೋರಾಟ ದೀರ್ಘ ಕಾಲದ್ದಾಗಿರುತ್ತದೆ. ಆದರೆ, ನಾವು ಅದರ ಸುತ್ತಲೇ ಇರಲು ಸಾಧ್ಯವಿಲ್ಲ. ನಾವು ಮಾಸ್ಕ್ ಧರಿಸುತ್ತೇವೆ, ಸಾಮಾಜಿಕ ಅಂತರ ಕಾಯ್ಡುಕೊಳ್ಳುತ್ತೇವೆ. ನಮ್ಮ ಗುರಿಯಲ್ಲಿ ನಾವು ಸಾಗಬೇಕಿದೆ"ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ಹೇಳಿದ್ದರು.

English summary
Lockdown 4: New Guidelines Likely To Be Announced On May 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X