• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಲ ಪಡೆಯಲು ಸಕಾಲ: ಆರ್ ಬಿಐ ಬಡ್ಡಿದರ ಕಡಿತದ ಬಗ್ಗೆ ಮಾಹಿತಿ

|

ನವದೆಹಲಿ, ಮೇ.22: ಭಾರತ ಲಾಕ್ ಡೌನ್ 4.0ರ ನಡುವೆ ಮಧ್ಯಮ ವರ್ಗಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಟಾನಿಕ್ ನೀಡಿದೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.

   Good news for Yes Bank Credit Card holders.

   ಭಾರತದಲ್ಲಿ 40 ಬೇಸಿಸ್ ಪಾಯಿಂಟ್ ರೆಪೋ ದರವನ್ನು ಕಡಿತಗೊಳಿಸಲಾಗಿದೆ. ಇದರಿಂದ ಈ ಮೊದಲ ಶೇ.4.4ರಷ್ಟಿದ್ದ ರೆಪೋ ದರವನ್ನು ಶೇ.4ಕ್ಕೆ ಇಳಿಸಲಾಗಿದೆ. ರಿವರ್ಸ್ ರೆಪೋ ದರವನ್ನು ಶೇ.3.75ರಿಂದ ಶೇ.3.35ಕ್ಕೆ ಇಳಿಸಿದ್ದು ಬ್ಯಾಂಕ್ ಗಳಿಗೆ ಇದರ ಪ್ರಯೋಜನವಾಗಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

   ಸಾಲಗಾರರಿಗೆ ಸಿಹಿಸುದ್ದಿ: ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿಸಾಲಗಾರರಿಗೆ ಸಿಹಿಸುದ್ದಿ: ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿ

   ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತೊಗಳಿಸಿದ್ದರಿಂದ ಸಾಲದ ಮೇಲಿನ ಬಡ್ಡಿದರವು ಕಡಿಮೆಯಾಗಲಿದೆ. ಇದರ ಜೊತೆಗೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಇಎಂಐ ಹಣವು ಕಡಿಮೆಯಾಗಲಿದೆ.

   ಕಳೆದ ಮಾರ್ಚ್ ನಲ್ಲೂ ರೆಪೋ ದರ ಕಡಿತ:

   ಕಳೆದ ಮಾರ್ಚ್.27ರಂದು ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರ್ ಬಿಐ ರೆಪೋ ದರವನ್ನು 75 ಬೇಸಿಸ್ ಪಾಯಿಂಟ್ ನಷ್ಟು ಕಡಿತಗೊಳಿಸಲಾಗಿತ್ತು. ಇದರಿಂದ ಬ್ಯಾಂಕ್ ಗಳಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಹೂಡಿಕೆ ಮೇಲಿನ ಬಡ್ಡದರವು ಕಡಿಮೆಯಾಗಿತ್ತು.

   ಭಾರತದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರಿ ಕುಸಿತ ಕಂಡು ಬಂದರೂ ಸಹ ಎರಡನೇ ತ್ರೈಮಾಸಿಕದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

   English summary
   Loan EMIs set to get cheaper as RBI cuts repo rate by 40 bps to 4%. RBI Governor Shaktikant Das Announced In Pressmeet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X