• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Chandrayaan 2 Moon Landing Live Updates: ಇಸ್ರೋದಲ್ಲಿ ಪ್ರಧಾನಿ ಮೋದಿ ಭಾಷಣ

|
   ಕೊನೆಕ್ಷಣದಲ್ಲಿ ಸಂಪರ್ಕ ಮಿಸ್ ಆಗಿದ್ದು ಯಾಕೆ ಗೊತ್ತಾ..? | Chandrayaan 2

   ಬೆಂಗಳೂರು, ಸೆಪ್ಟೆಂಬರ್ 6: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ನಿರ್ಮಿಸುವ ಭಾರತದ ಬೃಹತ್ ಯೋಜನೆ ಚಂದ್ರಯಾನ 2 ತನ್ನ ಗುರಿ ತಲುಪುವ ಕೆಲವೇ ಕಿ.ಮೀ ಅಂತರದಲ್ಲಿ ಸಂವಹನ ಕಳೆದುಕೊಂಡಿದೆ. ನೌಕೆ ಗುರಿ ತಲುಪಿರಬಹುದು, ಆದರೆ ನಮಗೆ ಸಂವಹನ ಸಿಕ್ಕದ ಕಾರಣ ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ. ಡೇಟಾಗಳನ್ನು ವಿಶ್ಲೇಷಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಇಸ್ರೋ ಹೇಳಿದೆ.

   ಭಾರತದ ಚಂದ್ರಯಾನ ಏಕೆ ಇಷ್ಟು ಮಹತ್ವದ್ದು? ಇಲ್ಲಿದೆ ವಿವರ

   ಭಾರತ ಮಾತ್ರವಲ್ಲದೆ ಇಡೀ ಜಗತ್ತು ಈ ಸಾಧನೆಯ ಕ್ಷಣಕ್ಕೆ ಬೆರಗುಗಣ್ಣಿನಿಂದ ಕಾಯುತ್ತಿದೆ. ಚಂದ್ರ ಉಪಗ್ರಹಕ್ಕೆ ಅಧ್ಯಯನ ನೌಕೆಗಳನ್ನು ಕಳಿಸುವುದು ಇದೇ ಮೊದಲೇನಲ್ಲ. ಬೇರೆ ದೇಶಗಳು ಹಲವು ಬಾರಿ ಈ ಪ್ರಯತ್ನಗಳನ್ನು ನಡೆಸಿವೆ. ಅಲ್ಲಿ ಮಾನವನ ಓಡಾಟವೂ ನಡೆದಿದೆ. ಭಾರತವೂ ಚಂದ್ರಯಾನ-1ರಲ್ಲಿ ಯಶಸ್ವಿ ಪ್ರಯೋಗ ನಡೆಸಿ ಮಾಹಿತಿಗಳನ್ನು ಕಲೆಹಾಕಿದೆ.

   Live Updates In Kannada Landing Of Chandrayaan-2 mission On Lunar

   ಆದರೆ ಚಂದ್ರನ ಅಂಗಳಕ್ಕೆ ಕಾಲಿಡುವ ಇಸ್ರೋದ ಈ ಯೋಜನೆ ವಿಶಿಷ್ಟವಾದುದು. ಇದುವರೆಗೂ ಚಂದ್ರನ ದಕ್ಷಿಣ ಧ್ರುವ ಹೇಗಿದೆ? ಅಲ್ಲಿ ಏನೇನಿವೆ ಎಂಬುದು ಜಗತ್ತಿಗೆ ಗೊತ್ತಿಲ್ಲ. ಅದನ್ನು ನೋಡುವ ಪ್ರಯತ್ನವನ್ನೂ ಮಾಡಿರಲಿಲ್ಲ. ಈ ಸಾಧನೆ ಮಾಡಿರುವುದು ಭಾರತ ಮಾತ್ರ. ಹೀಗಾಗಿಯೇ ಈ ಯೋಜನೆ ಹೆಚ್ಚು ಮಹತ್ವ ಪಡೆದಿದೆ. ಚಂದ್ರಯಾನ ನೌಕೆಯ ಪಯಣದ ಕೊನೆಯ ನಿಲ್ದಾಣವನ್ನು ತಲುಪುವ ಗಳಿಗೆ ಹೇಗಿರಲಿದೆ? ಈ ಬಗ್ಗೆ ಅಪ್‌ಡೇಟ್ಸ್ ಇಲ್ಲಿ ಸಿಗಲಿದೆ.

   Newest First Oldest First
   10:22 AM, 7 Sep
   ಚಂದ್ರಯಾನ 2 ಲ್ಯಾಂಡಿಂಗ್‌ ವೇಳೆ ಏನು ನಡೆಯಿತು ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಭಾರತಕ್ಕಾಗಿ ಬದುಕಿರುವವರು ನೀವು. ಭಾರತದ ಕೀರ್ತಿಯನ್ನು ಹೆಚ್ಚಿಸುವುದಕ್ಕಾಗಿ ನೀವು ಕೆಲಸ ಮಾಡುತ್ತಿದ್ದೀರಿ. ನಿಮ್ಮ ಬೇಸರವನ್ನು ನಾನು ಗ್ರಹಿಸಬಲ್ಲೆ. ಈ ಮಹತ್ವದ ಯೋಜನೆಗಾಗಿ ಎಷ್ಟೋ ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದೀರಿ-ಮೋದಿ
   9:01 AM, 7 Sep
   ನಾವು ನಮ್ಮ ಪ್ರಯತ್ನವನ್ನು ಧೈರ್ಯವಾಗಿ ಮುಂದುವರೆಸೋಣ‌. ಚಂದ್ರಯಾನ ಕೇವಲ ಭಾರತಕ್ಕಷ್ಟೇ‌ ಅಲ್ಲ ಇಡೀ ಜಗತ್ತಿಗೆ ಅಗತ್ಯವಿದೆ. ನನಗೆ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆ. ಜಗತ್ತಿನ ಬೇರೆ ಯಾವುದೇ ದೇಶ ಮಾಡದ ಸಾಧನೆಗೆ ನಮ್ಮ ವಿಜ್ಞಾನಿಗಳು ಕೈಹಾಕಿದ್ದಾರೆ. ದೇಶ‌ ನಿಮ್ಮ ಜತೆ ಇದೆ. ನಾನು ನಿಮ್ಮ ‌ಬೆಂಬಲಕ್ಕೆ ಇದ್ದೇನೆ. ದೇಶ ನಿಮ್ಮ ‌ಬಗ್ಗೆ ಹೆಮ್ಮೆ ಪಡಲಿದೆ- ನರೇಂದ್ರ ಮೋದಿ
   8:58 AM, 7 Sep
   ಮೋದಿಯವರನ್ನು ತಬ್ಬಿ ಕಣ್ಣೀರಿಟ್ಟ ಇಸ್ರೋ ಮುಖ್ಯಸ್ಥ ಕೆ. ಶಿವನ್
   8:32 AM, 7 Sep
   "ಫಲಿತಾಂಶದ ಬಗ್ಗೆ ಯೋಚಿಸದೆ ನಿರಂತರವಾಗಿ ನಮ್ಮ ಕರ್ತವ್ಯ ಮಾಡುವುದು ನಮ್ಮ ಸಾಂಪ್ರದಾಯಿಕ ಮೌಲ್ಯ. ಆದ್ದರಿಂದ ಭರವಸೆ ಕಳೆದುಕೊಳ್ಳಬೇಕಿಲ್ಲ" -ನರೇಂದ್ರ ಮೋದಿ
   8:25 AM, 7 Sep
   ವಿಜ್ಞಾನದಲ್ಲಿ ಸೋಲು ಎನ್ನುವುದು ಇಲ್ಲವೇ ಇಲ್ಲ. ಎಲ್ಲವೂ ಪ್ರಯೋಗ ಮತ್ತು ಪ್ರಯಾಸ ಅಷ್ಟೇ- ನರೇಂದ್ರ ಮೋದಿ
   8:25 AM, 7 Sep
   "ನಿಮ್ಮ ಪರಿಶ್ರಮ ವ್ಯರ್ಥವಾಗಿಲ್ಲ. ನಿಮ್ಮ ಕಟಿಣ ಪರಿಶ್ರಮದಿಂದ ಕಲಿತ ಪಾಠ ನಮ್ಮನ್ನು ಮತ್ತಷ್ಟು ಸದೃಢರನ್ನಾಗಿ ಮಾಡಿದೆ. ಈ ಪಾಠವೇ ಮುಂದಿನ ಹಾದಿಗೆ ಸ್ಫೂರ್ತಿಯಾಗಲಿದೆ"- ನರೇಂದ್ರ ಮೋದಿ
   8:21 AM, 7 Sep
   "ನಾವು ಪುಟಿದೇಳುತ್ತೇವೆ, ಯಶಸ್ಸಿನ ಹೊಸ ಎತ್ತರಕ್ಕೆ ಏರುತ್ತೇವೆ. ನಾನು ನಮ್ಮೆಲ್ಲ ವಿಜ್ಞಾನಿಗಳಿಗೆ ಹೇಳುತ್ತೇನೆ. ಭಾರತ ನಿಮ್ಮೊಂದಿಗಿದೆ. ನೀವು ಈ ದೇಶದ ಯಶಸ್ಸಿಗೆ ಅಗಣಿತ ಕೊಡುಗೆ ನೀಡಿದ ಅಸಾಧಾರಣ ಕರ್ಮಯೋಗಿಗಳು" - ನರೇಂದ್ರ ಮೋದಿ
   8:18 AM, 7 Sep
   "ಇಸ್ರೋ ವಿಜ್ಞಾನಿಗಳ ಕುಟುಂಬಸ್ಥರ ಪ್ರೋತ್ಸಾಹಕ್ಕೂ ನಾವು ಕೃತಜ್ಞನಾಗಿರುತ್ತೇವೆ"- ನರೇಂದ್ರ ಮೋದಿ
   8:15 AM, 7 Sep
   "ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಸಾಕಷ್ಟು ಸಾಧನೆಗಳಾಗಲಿವೆ ಎಂಬ ಭರವಸೆ ಇದೆ. ಭಾರತ ನಿಮ್ಮೊಂದಿಗಿದೆ ಎಂದು ನಾನು ಭರವಸೆ ನೀಡುತ್ತೇನೆ"- ನರೇಂದ್ರ ಮೋದಿ
   8:14 AM, 7 Sep
   ನನ್ನ ವಿಜ್ಞಾನಿ ಸ್ನೇಹಿತರೆ, ಈಗ ಕೆಲವು ಗಂಟೆಯ ಮೊದಲು ಇಡೀ ದೇಶವೂ ಒಗ್ಗಟ್ಟಿನಲ್ಲಿ ನಿಮ್ಮ ಸಾಧನೆಯನ್ನು ನೋಡಿದೆ. ಹಿನ್ನಡೆಯಾಗಿರಬಹುದು. ಆದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ಕಾರ್ಯತತ್ಪರತೆಗೆ ನಮ್ಮ ನಮನ. ನೀವು ಭಾರತದ ಹೆಮ್ಮೆ- ನರೇಂದ್ರ ಮೋದಿ, ಪ್ರಧಾನಿ
   8:09 AM, 7 Sep
   ನಿನ್ನೆ ನಿಮ್ಮೆಲ್ಲರ ಕಣ್ಣಲ್ಲಿ ನೂರಾರು ಭಾವನೆಗಳಿದ್ದವು. ನಾನು ಅವನ್ನು ಓದಿದ್ದೇನೆ. ನೀವೆಲ್ಲ ರಾತ್ರಿ ನಿದ್ದೆ ಮಾಡಿಲ್ಲ ಎಂಬುದು ನನಗೂ ಗೊತ್ತು. ಆದರೂ ಬೆಳಗ್ಗೆ ಎಲ್ಲರೂ ಬಂದಿದ್ದೀರಿ. ನೀವು ತಾಯಿ ಭಾರತ ಮಾತೆಗಾಗಿ ಕೊಡುಗೆ ನೀಡುತ್ತಿದ್ದೀರಿ- ಪ್ರಧಾನಿ ನರೇಂದ್ರ ಮೋದಿ
   8:05 AM, 7 Sep
   ಇಸ್ರೋ ಕಂಟ್ರೋಲ್ ಸೆಂಟರ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
   7:58 AM, 7 Sep
   ಕೆಲವೇ ಕ್ಷಣಗಳಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ ಮೋದಿ
   7:09 AM, 7 Sep
   ಇಂದು ಬೆಳಿಗ್ಗೆ 8:00 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಇಸ್ರೋ ಕಂಟ್ರೋಲ್ ಸೆಂಟರ್ ನಿಂದ ಚಂದ್ರಯಾನದ ಕುರಿತು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
   6:58 AM, 7 Sep
   ಚಂದ್ರಯಾನ-2 ಯೋಜನೆಯನ್ನು ಇಲ್ಲಿಯವರೆಗೆ ಕೊಂಡೊಯ್ದ ಇಸ್ರೋ ಬಗ್ಗೆ ಪ್ರತಿ ಭಾರತೀಯರಿಗೂ ಹೆಮ್ಮೆ ಇದೆ. ಇಸ್ರೋದ ಕಠಿಣ ಪರಿಶ್ರಮಿ ಮತ್ತು ಕಾರ್ಯತತ್ಪರ ವಿಜ್ಞಾನಿಗಳೊಂದಿಗೆ ಭಾರತ ಬೆನ್ನೆಲುಬಾಗಿ ನಿಂತಿದೆ. ಅವರ ಭವಿಷ್ಯದ ಸಾಧನೆಗಳಿಗೆ ನಮ್ಮ ಶುಭ ಹಾರೈಗಳು - ಅಮಿತ್ ಶಾ, ಕೇಂದ್ರ ಗೃಹಸಚಿವ
   6:24 AM, 7 Sep
   ಚಂದ್ರಯಾನ2 ರ ಮೂಲಕ ಇಸ್ರೋದ ಇಡೀ ತಂಡ ತಮ್ಮ ಅಸಾಧಾರಣ ಕಾರ್ಯತತ್ಪರತೆ ಮತ್ತು ಧೈರ್ಯವನ್ನು ತೋರಿಸಿದೆ. ಈ ದೇಶ ಇಸ್ರೋ ಸಾಧನೆಗೆ ಹೆಮ್ಮೆ ಪಡುತ್ತದೆ. ಒಳಿತಾಗುತ್ತದೆ ಎಂಬ ಭರವಸೆ ಇದೆ- ರಾಮನಾಥ್ ಕೋವಿಂದ್, ರಾಷ್ಟ್ರಪತಿ
   3:30 AM, 7 Sep
   ವಿಕ್ರಂ ಲ್ಯಾಂಡರ್ ಮಾತ್ರವೇ ಇಸ್ರೋ ದೊಂದಿಗೆ ಸಂವಹನ ಕಡಿದುಕೊಂಡಿದ್ದು, ಆರ್ಬಿಟರ್‌ ಸುಸ್ಥಿತಿಯಲ್ಲಿಯೇ ಇದೆ. ಆರ್ಬಿಟರ್ ಒಂದು ವರ್ಷದ ಕಾಲ ಚಂದ್ರನ ಪರಿಭ್ರಮಣೆ ನಡೆಸಿ ಮಾಹಿತಿ ರವಾನಿಸಲಿದೆ.
   3:29 AM, 7 Sep
   ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದು, ಅವರ ಬದಲಿಗೆ ಇಸ್ರೋ ವಿಜ್ಞಾನಿ ಒಬ್ಬರು, ಚಂದ್ರಯಾನ 2 ಕೊನೆಯ ಕ್ಷಣಗಳ ಬಗ್ಗೆ ಅಲ್ಪ ಮಾಹಿತಿ ನೀಡಿದರು.
   3:26 AM, 7 Sep
   ಈಗ ಸಂವಹನ ಕಡಿತಗೊಂಡಿದ್ದರೂ, ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿದಿರುವ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ. ಅಲ್ಲದೆ, ಮತ್ತೆ ಸಂಪರ್ಕ ಸಾಧ್ಯವಾದರೂ ಅಚ್ಚರಿಪಡಬೇಕಿಲ್ಲ. ಇಸ್ರೋ ವಿಜ್ಞಾನಿಗಳು ಕೂಡ ಈ ಭರವಸೆ ಹೊಂದಿದ್ದಾರೆ.
   3:25 AM, 7 Sep
   ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಸ್ರೋ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಲಾಗಿದೆ.
   3:23 AM, 7 Sep
   ಚಂದ್ರನಿಗೆ 2.1 ಕಿ.ಮೀ. ಸಮೀಪಿಸುವವರೆಗೂ ಸಹಜವಾಗಿದ್ದ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡಿದೆ. ನಾವು ಲಭ್ಯವಿರುವ ಡೇಟಾಗಳನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದರು.
   2:24 AM, 7 Sep
   ನಾನು ನಿಮ್ಮ ಜೊತೆ ಇದ್ದೇನೆ, ನಿಮ್ಮ ಕಾರ್ಯವನ್ನು ಮುಂದುವರೆಸಿ, ನಿಮ್ಮ ಕಾರ್ಯದಿಂದ ದೇಶವೇ ಸಂಭ್ರಮಿಸುವಂತೆ ನೀವು ಮಾಡುತ್ತೀರಿ, ನಿಮಗೆಲ್ಲಾ ಒಳ್ಳೆಯದಾಗಲಿ ಎಂದು ಹೇಳಿ ಮೋದಿ ಅವರು ವಿಜ್ಞಾನಿಗಳಿಗೆ ಧೈರ್ಯ ತುಂಬಿದರು.
   2:23 AM, 7 Sep
   ಜೀವನದಲ್ಲಿ ಏಳು-ಬೀಳು ನಡೆಯುತ್ತಿರುತ್ತದೆ. ದೇಶಕ್ಕೆ ನಿಮ್ಮ ಮೇಲೆ ನಂಬಿಕೆ ಇದೆ. ನಿವ್ಯಾರು ಬೇಸರಪಟ್ಟುಕೊಳ್ಳುವುದು, ನೀವು ಮಾಡಿರುವ ಕಾರ್ಯ ಕಡಿಮೆಯಾದುದ್ದಲ್ಲ. ಈಗಲೇ ಹೋಪ್ ಕಳೆದುಕೊಳ್ಳುವುದು ಬೇಡ ಎಂದು ಮೋದಿ ಅವರು ವಿಜ್ಞಾನಿಗಳನ್ನು ಉದ್ದೇಶಿಸಿ ಹೇಳಿದರು.
   2:20 AM, 7 Sep
   ನಾವು ನಿಮ್ಮೊಂದಿಗೆ ಇದ್ದೇವೆ ಧೈರ್ಯವಾಗಿರಿ ಎಂದು ಹೇಳಿ ನರೇಂದ್ರ ಮೋದಿ ಅವರು ಇಸ್ರೋ ದಿಂದ ಹೊರಗೆ ನಡೆದರು.
   2:18 AM, 7 Sep
   ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲ್ಮೈಗೆ ತಲುಪಲು 2.1 ಕಿ.ಮೀ ಇರುವವರೆಗೆ ಸೂಕ್ತವಾಗಿ ಕಾರ್ಯನಿರ್ವಹಿಸಿತು. ಆದರೆ ಆ ನಂತರ ವಿಕ್ರಂ ಲ್ಯಾಂಡರನ್‌ನಿಂದ ಸಂಪರ್ಕವು ಕಡಿತಗೊಂಡಿದೆ, ಮಾಹಿತಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಇಸ್ರೋದ ಅಧ್ಯಕ್ಷ ಶಿವನ್ ಹೇಳಿದರು. ಅವರ ದನಿಯಲ್ಲಿ ಬೇಸರವಿತ್ತು.
   2:13 AM, 7 Sep
   ಅಂಕಿ-ಅಂಶಗಳು, ವಿಕ್ರಂ ಲ್ಯಾಂಡರ್‌ನಿಂದ ಬಂದಿರುವ ಮಾಹಿತಿಯನ್ನು ಆಧರಿಸಿ ಚರ್ಚೆಗಳು ನಡೆಯುತ್ತಿದ್ದು ಒಂದು ಸ್ಪಷ್ಟ ನಿಷ್ಕರ್ಷಕ್ಕೆ ತಲುಪಿದ ನಂತರ ಮಾಹಿತಿ ನೀಡುವುದಾಗಿ ಇಸ್ರೋ ಹೇಳಿದೆ. ಮಾಹಿತಿಯನ್ನು ಕೆಲವೇ ನಿಮಿಷದಲ್ಲಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
   2:10 AM, 7 Sep
   ಇಸ್ರೋ ಕೇಂದ್ರದಲ್ಲಿ ಆತಂಕದ ಛಾಯೆ ಇನ್ನೂ ಕಡಿಮೆ ಆಗಿಲ್ಲ. ನೇರ ಪ್ರಸಾರದ ಹಿನ್ನೆಲೆಯಲ್ಲಿ ಒದಗಿಸಲಾಗುತ್ತಿದ್ದ ಮಾಹಿತಿಯು ನಿಂತಿದ್ದು, ಕೇವಲ ದೃಶ್ಯಗಳನ್ನು ಮಾತ್ರವೇ ನೀಡಲಾಗುತ್ತಿದೆ.
   1:59 AM, 7 Sep
   ಇಸ್ರೋ ಅಧ್ಯಕ್ಷ ಶಿವನ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಆತಂಕದಲ್ಲಿಯೇ ಮಾತುಕತೆ ನಡೆಸಿದರು. ಇಸ್ರೋ ಮಾಜಿ ಅಧ್ಯಕ್ಷ ರಾಧಕೃಷ್ಣನ್ ಅವರು ಶಿವನ್ ಅವರ ಬೆನ್ನನ್ನು ಸಾಂತ್ವನದ ಮಾದರಿಯಲ್ಲಿ ತಟ್ಟಿದ್ದು ಅನುಮಾನ ಮತ್ತು ಗಾಬರಿ ಹುಟ್ಟಿಸುವಂತೆ ಕಂಡಿತು.
   1:55 AM, 7 Sep
   ಇದ್ದಕ್ಕಿಂದ್ದಂತೆ ಇಸ್ರೋ ಕೇಂದ್ರದಲ್ಲಿ ಆತಂಕದ ಕ್ಷಣಗಳು ನಿರ್ಮಾಣವಾಗಿದೆ. ಮಾಹಿತಿ ರವಾನೆ ಹರಿವು ನಿಂತಿದೆ ಎಂಬ ಮಾಹಿತಿ ಪ್ರಾಥಮಿಕ ಹಂತದಲ್ಲಿ ಗೊತ್ತಾಗುತ್ತಿದೆ. ಅಂತಿಮ ಮಾಹಿತಿಗಾಗಿ ನಿರೀಕ್ಷೆ ಮಾಡಲಾಗುತ್ತಿದೆ.
   1:52 AM, 7 Sep
   ವಿಕ್ರಂ ಲ್ಯಾಂಡರ್‌ ಚಂದ್ರನ ವಾತಾವರಣ ತಲುಪಿದ್ದು, ಕೆಲವೇ ನಿಮಿಷದಲ್ಲಿ ಚಂದ್ರನ ಮೇಲ್ಮೈ ಅನ್ನು ಸ್ಪರ್ಷಿಸಲಿದೆ.
   READ MORE

   English summary
   India's Chandrayaan-2 mission will be landed on Lunar's south pole on September 7 between 1.30-2.30 am. Here is the live updates.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X